Advertisement
ಯಾವ ಫೋಟೋ, ಯಾವ ಘಟನೆ ?ಸೆಮಿ ಫೈನಲ್ ಪಂದ್ಯಾಟದಲ್ಲಿ ಭಾರತ ಇನ್ನೇನು ಸೋತೇ ಬಿಡ್ತು ಎನ್ನುವಾಗ ಧೋನಿ ಮತ್ತು ಜಡೇಜಾ ಸೇರಿ ಭಾರತ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆಟದ ಕೊನೆಯಲ್ಲಿ ಧೋನಿ ಬೀಸಿ ಹೊಡೆಯಬೇಕು ಎನ್ನುವಾಗ ರನ್ ಔಟ್ ಆಗಿ ಪೆವಿಲಿಯನ್ ಸೇರಿದ್ರು. ಆ ಮೂಲಕ ಕೋಟ್ಯಾಂತರ ಭಾರತೀಯರ ವಿಶ್ವಕಪ್ ಆಸೆ ನುಚ್ಚುನೂರಾಗಿತ್ತು.
Related Articles
ಆದರೆ ಈ ವೈರಲ್ ಫೋಟೋದ ಫಾಕ್ಟ್ ಚೆಕ್ ಮಾಡಿದಾಗ ಗೊತ್ತಾದ ಅಸಲೀಯತ್ತೇನು ಗೊತ್ತಾ? ಆ ಫೋಟೋಗ್ರಾಫರ್ ಭಾರತೀಯನೇ ಅಲ್ಲ. ಅದರಲ್ಲೂ ಅದು ಕ್ರಿಕೆಟ್ ಆಟದ ವೇಳೆ ತೆಗೆದ ಚಿತ್ರವೇ ಅಲ್ಲ. ಮತ್ತೇನು ? ಮುಂದೆ ಓದಿ.
Advertisement
ಆ ಛಾಯಾಗ್ರಾಹಕನ ಹೆಸರು ಮೊಹಮ್ಮದ್ ಅಲ್ ಅಜಾ಼ವಿ. ಆತ ಇರಾಕ್ ದೇಶದ ಪ್ರಜೆ. 2019ರ ಜನವರಿಯಲ್ಲಿ ನಡೆದ ಏಶ್ಯಾನ್ ಕಪ್ ಫುಟ್ ಬಾಲ್ ಕೂಟದ ವೇಳೆ ಸೆರೆಹಿಡಿಯಲಾದ ಚಿತ್ರವಿದು.
ಯುಏಇಯಲ್ಲಿ ನಡೆದಿದ್ದ ಕಾಲ್ಚೆಂಡು ಆಟದ ಕೂಟದಲ್ಲಿ ತವರು ದೇಶ ಸೋತಾಗ ಅಜಾ಼ವಿ ದುಖಿತನಾಗಿದ್ದ. ಈ ಚಿತ್ರವನ್ನು ಏಶ್ಯಾನ್ ಕಪ್ 2023 ಎಂಬ ಟ್ವೀಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿತ್ತು ಕೂಡಾ. ಆದರೆ ಯಾರೋ ಈ ಚಿತ್ರವನ್ನು ಧೋನಿ ರನ್ ಔಟ್ ದೃಶ್ಯದ ಜೊತೆ ಸೇರಿಸಿ ವೈರಲ್ ಮಾಡಿದ್ದರು.