Advertisement
ಕೋವಿಡ್-19 ಸಂಕಷ್ಟ ಹಾಗೂ ಲಾಕ್‌ಡೌನ್‌ನಿಂದ ಉಂಟಾಗಿರುವ ಸ್ಥಿತಿ, ಆರ್ಥಿಕ ಸಂಕಷ್ಟ ಸ್ಥಿತಿ ನಡುವೆಯೂ ರಿಯಲ್ ಎಸ್ಟೇಟ್‌ಗೆ ಭವಿಷ್ಯದಲ್ಲಿರುವ ಅವಕಾಶ-ಬೆಳವಣಿಗೆ, ಚೀನಾ ಉತ್ಪನ್ನಗಳಿಗೆ ಪರ್ಯಾಯವಾಗಿ ದೇಶೀಯವಾಗಿಯೇ ಉತ್ಪನ್ನಗಳ ತಯಾರಿಗೆ ಆದ್ಯತೆ ಕುರಿತಾಗಿ “ಉದಯವಾಣಿ’ಯೊಂದಿಗೆ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂಡಿದ್ದಾರೆ.
Related Articles
Advertisement
ಸಾಮಾಜಿಕ ಅಂತರ ಕಾಪಾಡಬೇಕಿರುವುದು ಮನೆಯ ವಾಸ್ತವ್ಯದ ಅವಧಿ ಹೆಚ್ಚಿಸಲಿದೆ. ವರ್ಕ್ ಫ್ರಾಮ್ ಹೋಮ್ ಪರಿಕಲ್ಪನೆ ಬರುತ್ತಿದೆ. ಜನರು ಹೊಟೇಲ್‌ಗಳಿಗೆ, ರೆಸ್ಟೊರೆಂಟ್‌ಗಳಿಗೆ ಹೋಗುವ ಪರಿಪಾಠ ಕಡಿಮೆಯಾಗುತ್ತಿದೆ. ಚಿತ್ರಮಂದಿರಗಳಿಗೆ ಹೋಗದೆ ಮನೆಯಲ್ಲೇ ಟಿವಿ, ಮೊಬೈಲ್ ಮೂಲಕ ಮನರಂಜನೆ ಪಡೆಯಲು ಆಸಕ್ತಿ ತೋರುತ್ತಿದ್ದಾರೆ.ವಿದೇಶಗಳಲ್ಲಿ ಉದ್ಯೋಗ ಮಾಡಿದರೆ ಮಾತ್ರ ಹಣ ಗಳಿಸಲು ಸಾಧ್ಯ ಎಂಬ ಮನೋಭಾವ ಬದಲಾಗುತ್ತಿದೆ. ಭಾರತವೂ ಕಡಿಮೆಯಿಲ್ಲ ಎಂಬ ವಿಶ್ವಾಸ ಅನಿವಾಸಿ ಭಾರತೀಯರಲ್ಲಿ ಮೂಡುತ್ತಿದೆ. ನಮ್ಮ ದೇಶದಲ್ಲೂ ಅಗಾಧ ಅವಕಾಶಗಳು ಸೃಷ್ಟಿಯಾಗುತ್ತಿರುವುದರಿಂದ ಹೊಸ ಉದ್ಯಮ ಆರಂಭಿಸಲು ಮುಂದಾಗುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ ಎಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಎಲ್ಲರಿಗೂ ಉದ್ಯೋಗ ಸಿಗುವ ಸಾಧ್ಯತೆಯಿಲ್ಲ. ಆದ್ದರಿಂದ ಸ್ವ ಉದ್ಯೋಗ ಆರಂಭಿಸಲು ಇದು ಸಕಾಲವಾಗಿದೆ. ಉದ್ಯಮಶೀಲತೆ ಇದ್ದರೆ ಅಭಿವೃದ್ಧಿಗೊಳ್ಳಲು ಸಾಧ್ಯ. ಜೀವನಪೂರ್ತಿ ಒಂದು ಕಂಪನಿಗಾಗಿ ದುಡಿಯುವವರು ಯಶಸ್ಸು ಗಳಿಸಲು ಸಾಧ್ಯವಾಗಲ್ಲ. ಕೆಲಸದಲ್ಲಿ ಮೇಲು-ಕೀಳೆಂಬ ಭೇದ ಸಲ್ಲದು. ಯುವಕರು ಯಾವುದಾದರೂ ಆಗಲಿ ಕಷ್ಟಪಟ್ಟು, ಪ್ರಾಮಾಣಿಕತೆಯಿಂದ ದುಡಿಯುವುದನ್ನು ರೂಢಿಸಿಕೊಳ್ಳಬೇಕು. ಅವಕಾಶ ಸದ್ಬಳಕೆ ಮಾಡಿಕೊಂಡರೆ ಮಾತ್ರ ಚೀನಾದೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗುತ್ತದೆ. ಎಲ್ಲದಕ್ಕೂ ಸರಕಾರಗಳನ್ನು ಅವಲಂಬಿಸದೆ ನಮ್ಮ ಏಳ್ಗೆಗೆ ನಾವೇ ಯೋಜನೆ ರೂಪಿಸಿಕೊಳ್ಳಬೇಕು.ಆರ್ಥಿಕ ಭದ್ರತೆ ಕಾರಣದಿಂದ ಸರಕಾರಿ ಉದ್ಯೋಗಕ್ಕೆ ಸೀಮಿತಗೊಳ್ಳುವುದು ಸರಿಯಲ್ಲ. ಎಲ್ಲರಿಗೂ ಸರಕಾರಿ ಉದ್ಯೋಗಗಳು ಸಿಗುವುದು ಸಾಧ್ಯವಿಲ್ಲ. ಸ್ವಂತ ಉದ್ಯೋಗದಿಂದ ಮಾತ್ರ ಸಾಧನೆ ಮಾಡಬಹುದೆಂಬ ನಂಬಿಕೆ ಯುವಜನರಲ್ಲಿ ಮೂಡಬೇಕಿದೆ. ಚೀನಾದ ಕಾಯಕ ಸಂಸ್ಕೃತಿಯನ್ನು ನಾವು ರೂಢಿಸಿಕೊಳ್ಳದಿದ್ದರೆ ನಾವು ಅವರೊಂದಿಗೆ ಸೆಣಸುವುದು ಕಷ್ಟವಾಗುತ್ತದೆ. ಭಾರತೀಯರು ಆಚರಿಸುವ ದೀಪಾವಳಿ, ಗಣೇಶೋತ್ಸವ ಮೊದಲಾದ ಹಬ್ಬಗಳಿಗಾಗಿ ಚೀನಾದಲ್ಲಿ ಉತ್ಪಾದನೆಯಾಗುವ ಸಾಮಗ್ರಿಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕಲ್ಲದೇ ಸ್ಥಳಿಯ ಉತ್ಪಾದನೆಗೆ ಹೆಚ್ಚು ಆದ್ಯತೆ ಸಿಗಬೇಕಿದೆ. ಚೀನಾದಿಂದ ಬರುವ ಉತ್ಪನ್ನಗಳನ್ನು ಸ್ಥಳಿಯವಾಗಿ ಉತ್ಪಾದಿಸಲು ಮುಂದಾಗಬೇಕು. ಆಗ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲಿದೆ, ಭಾರತ ವಿಶ್ವಗುರುವಾಗಲಿದೆ ಎಂದು ಪ್ರಕಾಶ ಜೋಶಿ ಹೇಳುತ್ತಾರೆ. -ಅನಿವಾಸಿ ಭಾರತೀಯರಿಗೆ ತಾಯ್ನಾಡು ನೆನಪಿಸಿದ ಕೋವಿಡ್-19
-ತಮ್ಮೂರುಗಳಿಗೆ ಮರಳುತ್ತಿದ್ದಾರೆ ಜನ
-ಹೆಚ್ಚುತ್ತಿದೆ ಭೂಮಿ ಮೌಲ್ಯ
-ದೇಶದಲ್ಲೂ ಅಗಾಧ ಅವಕಾಶಗಳ ಸೃಷ್ಟಿ
-ಹೊಸ ಉದ್ಯಮಕ್ಕೆ ಚಿಂತನೆ ಶ್ರೀ ದತ್ತಾ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್, ಬಿಲ್ಡರ್ ಡೆವಲಪರ್ಸ್ ಆ್ಯಂಡ್ ಕಾಂಟ್ರಾಕ್ಟರ್ಸ್, 12, ದತ್ತ ಪ್ಲಾಜಾ, ಮಂಜುನಾಥ ನಗರ ಕ್ರಾಸ್, ಗೋಕುಲ ರಸ್ತೆ, ಹುಬ್ಬಳ್ಳಿ-580030, ದೂರವಾಣಿ: 0836-2331013.