Advertisement

ಅತ್ಯಾಚಾರ ಪ್ರಕರಣ ಖಂಡಿಸಿ ಧರಣಿ

05:30 PM Jun 26, 2018 | Team Udayavani |

ಯಾದಗಿರಿ: ಜಾರ್ಖಂಡ್‌ ರಾಜ್ಯದ ಚೋಚಾಂಗ್‌ ಜಿಲ್ಲೆಯಲ್ಲಿ ಮಕ್ಕಳ ಕಳ್ಳ ಸಾಗಾಣೆ ಕುರಿತು ಬೀದಿ ನಾಟಕ ಮಾಡುತ್ತಿದ್ದ ಕಲಾವಿದೆ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆಯನ್ನು ಖಂಡಿಸಿ ಯಾದಗಿರಿ ಜಿಲ್ಲಾ ಪ್ರಗತಿ ಪರ ಸಂಘಟನೆಗಳು, ದಲಿತ ಸಂಘಟನೆಗಳು ಹಾಗೂ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದಿಂದ ಪ್ರತಿಭಟಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಬೀದಿ ನಾಟಕ ಕಲಾವಿದೆಯರು ಸರ್ಕಾರದ ಹಲವು ಕಾರ್ಯಕ್ರಮ ಅಲ್ಲದೇ ಅಸಮಾನತೆ, ಮಹಿಳಾ ಸಬಲೀಕರಣ, ಅಸ್ಪೃಶ್ಯತೆ ಹೋಗಲಾಡಿಸಲು ಕಲಾ ತಂಡಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ದೇಶಾದ್ಯಂತ ಮಾಡುತ್ತಿವೆ. ಇವರನ್ನು ತಮ್ಮ ಕೆಲಸಗಳಿಗಾಗಿ ಉಪಯೋಗಿಸಿಕೊಳ್ಳುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಇವರ ಭದ್ರತೆಗೆ ಸೂಕ್ತ ಗಮನ ಹರಿಸುತ್ತಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

3 ತಿಂಗಳ ಹಿಂದೆ ಬೆಳಗಾವಿಯಲ್ಲಿ ಬೀದಿ ನಾಟಕ ಕಲಾವಿದೆ ಕಸ್ತೂರಿ ಎನ್ನುವವರು ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದು ಸೂಕ್ತ ಪರಿಹಾರ ವಿತರಿಸಿಲ್ಲ. ಈಗ ಬೀದಿ ನಾಟಕ ಕಲಾವಿದೆಯನ್ನು ನಿರ್ಜನ ಪ್ರದೇಶಕ್ಕೆ ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ. ಸರ್ಕಾರ ಶೀಘ್ರ ಆರೋಪಿಗಳನ್ನು ಬಂಧಿಸಿ ಮಹಿಳಾ ಕಲಾವಿದರಿಗೆ ಸೂಕ್ತ ರಕ್ಷಣೆ ಮತ್ತು ಪರಿಹಾರ ಒದಗಿಸುವಂತೆ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ವೇಳೆ ಕಲಾವಿದರ ಸಂಘಟನೆ ಜಿಲ್ಲಾಧ್ಯಕ್ಷ ಮಹಾನಿಂಗಪ್ಪ ಮಾಲಗತ್ತಿ, ಅಂಬಲಪ್ಪ ನಾಯ್ಕಲ್‌ಕರ್‌, ಅಂಬ್ರಯ್ಯ ಸ್ವಾಮಿ ಜಾಲಿಬೆಂಚಿ, ಹಣಮಂತ್ರಾಯ ಕುಪ್ಪಿ, ಸಿದ್ದಪ್ಪ ಮುಷ್ಟೂರು ಸೇರಿದಂತೆ ಮಹಿಳಾ ಕಲಾವಿದರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next