ಹೊಸದಿಲ್ಲಿ: ಸಾಮಾನ್ಯವಾಗಿ ವಾಹನಗಳಿಂದ ಗಿಜಿಗುಡುತ್ತಿದ್ದ ಆಗ್ರಾ-ಲಕ್ನೋ ಹೆದ್ದಾರಿ ಮಂಗಳವಾರ ವಿಮಾನಗಳಿಗೆ ಏರ್‌ಸ್ಟ್ರಿಪ್ ಆಗಿತ್ತು. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸಂಖ್ಯೆಯ ಯುದ್ಧವಿಮಾನಗಳನ್ನು ಹೆದ್ದಾರಿಯಲ್ಲಿ ಲ್ಯಾಂಡಿಂಗ್ ಮಾಡಲಾಯಿತು. ತುರ್ತು ಪರಿಸ್ಥಿತಿಯಲ್ಲಿ ಸೇನಾ ನೆಲೆಗಳಲ್ಲಿರುವ ಏರ್‌ಸ್ಟ್ರಿಪ್‌ಗ್ಳು ಸಾಲದಿರುವಾಗ ಹೆದ್ದಾರಿಗಳನ್ನೇ ಏರ್‌ಸ್ಟ್ರಿಪ್‌ಗ್ಳನ್ನಾಗಿ ಬಳಸುವುದಕ್ಕಾಗಿ ಈ ತಾಲೀಮು ನಡೆಸಲಾಯಿತು. ಲಕ್ನೋನಿಂದ 65 ಕಿ.ಮೀ ದೂರದಲ್ಲಿರುವ ಬಂಗಾರ್‌ಮಾವು ಜಿಲ್ಲೆಯಲ್ಲಿ ಈ ಪ್ರಯೋಗ ನಡೆಸಲಾಗಿದೆ.
ಸಾಗಣೆ ವಿಮಾನಗಳೂ ಇಳಿದವು: ಈ ಹಿಂದೆ 2 ಬಾರಿ ವಿವಿಧ ರಸ್ತೆಗಳನ್ನು ಸ್ಪರ್ಶಿಸಿ ಯುದ್ಧ ವಿಮಾನ ತಾಲೀಮು ನಡೆಸಲಾಗಿತ್ತಾದರೂ, ವಿಮಾನಗಳ ಸಂಖ್ಯೆ ಕಡಿಮೆ ಇತ್ತು. ಈ ಬಾರಿ ಕೇವಲ ಯುದ್ಧ ಸಂದರ್ಭದಲ್ಲಿ ಬಳಕೆ ಉದ್ದೇಶದ ವಿಮಾನಗಳಷ್ಟೇ ಅಲ್ಲ, ರಕ್ಷಣಾ ಕಾರ್ಯಾಚರಣೆ ವೇಳೆ ಬಳಸುವ ಸಾಗಣೆ ವಿಮಾನಗಳನ್ನೂ ರಸ್ತೆ ಮೇಲೆ ಇಳಿಸಲಾಗಿದೆ. ಈ ವಿಮಾನಗಳು ಭಾರೀ ಪ್ರಮಾಣದ ರಕ್ಷಣಾ ಸಾಮಗ್ರಿಗಳನ್ನು ಹೊತ್ತೂಯ್ಯಬಹುದು ಮತ್ತು ಜನರನ್ನು ಸ್ಥಳಾಂತರ ಮಾಡಬಹುದಾಗಿದೆ.
ಯುದ್ಧ ತಯಾರಿ: ವಿಮಾನಗಳ ತುರ್ತು ಲ್ಯಾಂಡಿಂಗ್ ಅಗತ್ಯ ಯುದ್ಧ ಹಾಗೂ ರಕ್ಷಣಾ ಕಾರ್ಯಾ ಚರಣೆ ಸನ್ನಿವೇಶದಲ್ಲಷ್ಟೇ ಅಗತ್ಯವಿರುತ್ತದೆ. ಅಲ್ಲದೆ ಸಾಮಾನ್ಯವಾಗಿ ಯುದ್ಧ ಸನ್ನಿವೇಶದಲ್ಲಿ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸುತ್ತಾರೆ. ಹೀಗಾದಾಗ ಪರ್ಯಾಯ ವಾಯುನೆಲೆಯನ್ನಾಗಿ ಹೆದ್ದಾರಿಯನ್ನೇ ಬಳಸಬಹುದಾಗಿದೆ.
ಬೃಹತ್ ಯುದ್ಧವಿಮಾನ ಹಕ್ಯುìಲಸ್: ಈ ಬಾರಿಯ ತಾಲೀಮಿನ ವೈಶಿಷ್ಟéವೇ ಹಕ್ಯುìಲಸ್ ಸಿ130ಜೆ. ಇದು ಸಾಗಣೆ ವಿಮಾನವಾಗಿದ್ದು, ಸುಮಾರು 200 ಯೋಧರನ್ನು ಸಾಗಿಬಹುದಾಗಿದೆ. ವಾಯುಪಡೆಗೆ ಇದನ್ನು 2010ರಲ್ಲಿ ಸೇರ್ಪಡೆಗೊಳಿಸಲಾಗಿದ್ದು, ದೇಶದಲ್ಲಿ ಒಟ್ಟು ಎಂಟು ಯುದ್ಧವಿಮಾನಗಳಿವೆ. ಇದರ ಅಗಾಧ ಸಾಮರ್ಥ್ಯದಿಂದಾಗಿ ರಕ್ಷಣಾ ಕಾರ್ಯಾಚರಣೆ ಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇದರ ಜತೆಗೆ ಮಿರಾಜ್ 2000 ಮತ್ತು ಸುಖೋಯ್ 30 ಎಂಕೆ ಅನ್ನೂ ಈ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದೆ.
ತಿಂಗಳಾನುಗಟ್ಟಲೆ ಪೂರ್ವ ತಯಾರಿ ಅಗತ್ಯ
ಹೆದ್ದಾರಿಗಳ ಮೇಲೆ ವಿಮಾನಗಳನ್ನು ಲ್ಯಾಂಡ್ ಮಾಡಲು ತಿಂಗಳುಗಟ್ಟಲೆ ಪೂರ್ವತಯಾರಿ ಅಗತ್ಯವಿರುತ್ತದೆ.
ಅಷ್ಟೇ ಅಲ್ಲ, ಕಾರ್ಯಾಚರಣೆ ನಡೆಸುವ ಹಲವು ದಿನಗಳ ಮುನ್ನವೇ ವಾಹನ ಸಂಚಾರ ನಿಷೇಧಿಸಲಾಗುತ್ತದೆ. ರಸ್ತೆಯ ಮೇಲೆ ಒಂದು ಸಣ್ಣ ಕಲ್ಲಿನ ಚೂರು ಇದ್ದರೂ, ವಿಮಾನಕ್ಕೆ ಹಾನಿ ಯಾಗಬಹುದಾದ್ದರಿಂದ ರಸ್ತೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಬೇಕಾ ಗುತ್ತದೆ. 2016 ಸೆಪ್ಟಂಬರ್‌ನಲ್ಲಿ ಪಾಕ್ ಸೇನೆ ಕೂಡ ಲಾಹೋರ್-ಇಸ್ಲಾಮಾಬಾದ್ ಹೆದ್ದಾರಿಯಲ್ಲಿ ಇಂಥದ್ದೇ ತಾಲೀಮು ನಡೆಸಿತ್ತು.