ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಬುಧವಾರ ಕಲಾಪ ನಡೆಸಲು ಸಾಧ್ಯವೇ ಆಗಲಿಲ್ಲ. ಬರೋಬ್ಬರಿ ಹನ್ನೊಂದು ಬಾರಿ ಕಲಾಪ ಮುಂದೂಡಿಕೆಯಾಗಿದೆ. ಹೀಗಾಗಿ ಭ್ರಷ್ಟಾಚಾರ ತಡೆ ವಿರೋಧಿ ಕಾಯ್ದೆ (ತಿದ್ದುಪಡಿ) 2013 ಅಂಗೀಕರಿಸಲು ಸಾಧ್ಯವೇ ಆಗಲಿಲ್ಲ. ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಲೇ ಕೋಲಾ ಹಲದ ವಾತಾವರಣ ಉಂಟಾಯಿತು. ಬೆಳಗ್ಗೆ ಯೇ 4 ಬಾರಿ ಕಲಾಪ ಮುಂದೂಡಿಕೆಯಾಗಿತ್ತು.
ಪ್ರಮಾಣ ಸ್ವೀಕಾರ: ಕರ್ನಾಟಕದಿಂದ ರಾಜ್ಯಸಭೆ ಆಯ್ಕೆಯಾಗಿರುವ ಎಲ್.ಹನುಮಂತಯ್ಯ, ಜಿ.ಸಿ.ಚಂದ್ರ ಶೇಖರ್, ಉ.ಪ್ರದಿಂದ ಆಯ್ಕೆಯಾದ ಜಯಾ ಬಚ್ಚನ್ ಸೇರಿ 12 ಮಂದಿ ನೂತನ ಸದಸ್ಯರು ಪ್ರಮಾಣ ಸ್ವೀಕರಿಸಿದ್ದಾರೆ.
ಲೋಕ ಸಭೆಯಲ್ಲಿ ನಡೆಯದ ಕಲಾಪ: ಲೋಕಸಭೆಯಲ್ಲಿ ಸತತ 20ನೇ ದಿನವಾಗಿರುವ ಬುಧವಾರವೂ ಯಾವುದೇ ರೀತಿಯಲ್ಲಿ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಎಂಬಿ) ರಚಿಸಬೇಕು ಎಂದು ಎಐಎಡಿಎಂಕೆ ಸಂಸದರು ಪ್ರತಿಭಟನೆ ನಡೆಸಿದರು. ಇದರಿಂದ ಕಲಾಪ ಮುಂದೂಡುವಂತಾಯಿತು.
100 ವರ್ಷ ಹಳೆಯ ಸೇತುವೆ: ದೇಶದಲ್ಲಿರುವ ರೈಲ್ವೇ ಸೇತುವೆಗಳಲ್ಲಿ 37,162 ರೈಲ್ವೆ ಸೇತುವೆಗಳು 100 ವರ್ಷ ಹಳೆಯವು. ಅಂಥ ರೈಲ್ವೇ ಸೇತುವೆಗಳಲ್ಲಿ ಶೇ.32ರಷ್ಟು ರೈಲ್ವೇ ಸೇತುವೆಗಳು ಉತ್ತರ ವಿಭಾಗೀಯ ರೈಲ್ವೆಗೆ ಸೇರಿರುವವು ಎಂದು ರೈಲ್ವೇ ಖಾತೆ ಸಹಾಯಕ ಸಚಿವ ರಾಜನ್ ಗೊಹೈನ್‌ಲೋಕಸಭೆಗೆ ತಿಳಿಸಿದ್ದಾರೆ.
ಸಂಬಳ ತ್ಯಜಿಸಲು ತೀರ್ಮಾನ: ಇದೇ ವೇಳೆ ಸಂಸತ್‌ನಲ್ಲಿ ಗದ್ದಲ ಎಬ್ಬಿಸುತ್ತಿರುವ ಪ್ರತಿಪಕ್ಷಗಳಿಗೆ ಮುಜುಗರ ತರಲು 23 ದಿನಗಳ ಕಾಲದ ವೇತನ ತ್ಯಜಿಸಲು ಎನ್‌ಡಿಎ ಸದಸ್ಯರು ನಿರ್ಧರಿಸಿದ್ದಾರೆ. ಕೇಂದ್ರ ಸಚಿವ ಅನಂತ ಕುಮಾರ್ ಈ ಮಾಹಿತಿ ನೀಡಿದ್ದಾರೆ.