Advertisement

ಸೋರುತಿಹುದು ರಾಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‌

11:06 AM Dec 10, 2019 | Suhan S |

ಕಾಳಗಿ: ತಾಲೂಕಿನ ರಾಜಾಪುರ ಗ್ರಾಮದಲ್ಲಿ ರೈತರ ಅನುಕೂಲಕ್ಕಾಗಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಲಾಗಿದ್ದರೂ ಮಳೆನೀರು ನಿಲ್ಲುತ್ತಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದ ಹಳ್ಳಕ್ಕೆ ನೀರು ಹರಿದು ಬಂದಿದ್ದು, ಗೇಟ್‌ಗಳ ನಡುವೆ ಅಧಿಕ ನೀರು ವ್ಯರ್ಥವಾಗಿ ಸೋರಿಕೆಯಾಗುತ್ತಿದೆ.

Advertisement

ಸುಮಾರು ಎಂಟು ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯಡಿ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ.ಚಿಂಚೋಳಿ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ವಿವಿಧ ಹಳ್ಳ, ಕೆರೆಗಳಿಂದ ನೀರು ಹರಿದು ಬಂದಿದ್ದು, 18 ಗೇಟ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದರೂ ಗಮನ ಹರಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ರೈತರ ಅನುಕೂಲಕ್ಕಾಗಿ ಹಳ್ಳಗಳಿಗೆ ಸೇತುವೆ ನಿರ್ಮಿಸುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿರ್ವಹಣೆ ಇಲ್ಲದೇ, ಗೇಟ್‌ಗಳ ಮೂಲಕ ನಿತ್ಯವೂ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ಹಳ್ಳದಲ್ಲಿ ಅಧಿಕ ಪ್ರಮಾಣದ ಹೂಳು ತುಂಬಿಕೊಂಡಿದ್ದು, ಮಳೆಗಾಲಲ್ಲಿ ನೀರು ಸುತ್ತಮುತ್ತಲಿನ ರೈತರ ಹೊಲ, ತೋಟಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಾಜಾಪುರ ಗ್ರಾಮದ ರೈತರಾದ ಸುಧಾಕರ ಪಾಟೀಲ, ಸಂಗರೆಡ್ಡಿ ಕವಳಸ, ಶರಣರೆಡ್ಡಿ ಮಳಗಿ, ನಜೀರಸಾಬ ಫಕೀರ, ರೇವಣಸಿದ್ಧ ಜಮಾದರ, ಖಾಜಿಶಾಬ ಹರಕಂಚಿ ಆರೋಪಿಸಿದ್ದಾರೆ.

ರಾಜಾಪುರ ಗ್ರಾಮದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ ಇದ್ದು ಇಲ್ಲದಂತಾಗಿದೆ. ಇತ್ತೀಚೆಗೆ ಮಳೆ ಬಂದು ನೀರು ಸಂಗ್ರಹವಾಗಿದೆ. ಆದರೆ ಸಂಗ್ರಹವಾದ ನೀರೆಲ್ಲ ಗೇಟ್‌ಗಳ ಮೂಲಕ ಸೋರಿಕೆಯಾಗಿ ಹರಿದು ಹೋಗುತ್ತಿದೆ. ಈ ಬಗ್ಗೆ ಸಂಬಂಧ ಪಟ್ಟವರು ಕೂಡಲೇ ಗಮನ ಹರಿಸಿ, ಹರಿದು ಹೋಗುವ ನೀರನ್ನು ಉಳಿಸಿಕೊಳ್ಳಬೇಕಿದೆ. –ಮಹೇಶರೆಡ್ಡಿ ಕವಳಸ, ಗ್ರಾಪಂ ಅಧ್ಯಕ್ಷ, ರಾಜಾಪುರ

 

Advertisement

ಭೀಮರಾಯ ಕುಡ್ಡಳಿ

Advertisement

Udayavani is now on Telegram. Click here to join our channel and stay updated with the latest news.

Next