Advertisement

ಮಳೆಗಾಲ ಶುರುವಾದರೂ ಮುಗಿಯದ ಬೈಲೂರು ಜೋಡು ರಸ್ತೆ ಕಾಮಗಾರಿ

12:07 AM Jun 24, 2019 | sudhir |

ಅಜೆಕಾರು: ಕಾರ್ಕಳ -ಉಡುಪಿ ಮುಖ್ಯ ರಸ್ತೆಯ ಜೋಡುರಸ್ತೆಯಿಂದ ಬೈಲೂರು ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಂಡಿತ್ತಾದರೂ ಮಳೆ ಗಾಲ ಮುಗಿಯುವ ಮುನ್ನ ಪೂರ್ಣಗೊಳ್ಳದೆ ವಾಹನ ಸವಾರರು ಸಂಕಷ್ಟ ಪಡು ವಂತಾಗಿದೆ.

Advertisement

ಮೋರಿಗಳ ಕೆಲಸ ಆಗಿಲ್ಲ

ಕೇಂದ್ರ ರಸ್ತೆ ನಿಧಿ ಯೋಜನೆಯಡಿ ರೂ. 25 ಕೋಟಿ ರೂ. ಅನುದಾನದಲ್ಲಿ ರಸ್ತೆ ಅಗಲಗೊಳಿಸಿ ಡಾಮರು ಹಾಕುವ ಕಾಮಗಾರಿ ಶುರುವಾಗಿತ್ತು. ಇದಕ್ಕಾಗಿ ರಸ್ತೆಯ ಇಕ್ಕೆಲಗಳ ಮಣ್ಣನ್ನು ತೆಗೆಯಲಾಗಿದೆ ಯಾದರೂ ಡಾಮರೀಕರಣ ಪೂರ್ಣ ಗೊಂಡಿಲ್ಲ. ಕೆಲವೆಡೆ ರಸ್ತೆಯ ಒಂದು ಪಾರ್ಶ್ವ ಮಾತ್ರ ಡಾಮರು ಹಾಕಲಾಗಿದೆ. ಇನ್ನು ಕೆಲವೆಡೆ ರಸ್ತೆ ಅಗೆದು ಹಾಕಲಾಗಿದೆ. ಜೋಡುರಸ್ತೆಯಿಂದ ಬೈಲೂರುವರೆಗೆ 12 ಕ್ಕೂ ಹೆಚ್ಚು ಮೋರಿಗಳಿದ್ದು ಎಲ್ಲ ಮೋರಿಗಳ ಕಾಮಗಾರಿ ಅರ್ಧದಷ್ಟೇ ನಡೆದಿದೆ. ಇದರಿಂದ ವಾಹನ ಚಾಲನೆ ಕಷ್ಟಕರವಾಗಿದೆ.

ರಸ್ತೆಯಲ್ಲಿಯೇ ಹರಿಯುವ ಮಳೆ ನೀರು

ಕಾಮಗಾರಿ ಪೂರ್ಣಗೊಳ್ಳದೇ ಇರುವು ದರಿಂದ ಮಳೆನೀರು ರಸ್ತೆಯಲ್ಲೇ ಹರಿ ಯುತ್ತಿದೆ. ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣಗೊಂಡಿವೆ. ಇನ್ನು ರಸ್ತೆ ಅಂಚಿನಲ್ಲಿ ಹೊಸ ಮಣ್ಣ ನ್ನು ಹಾಕಲಾಗಿದ್ದು ಇದು ಮಳೆಯ ನೀರಿಗೆ ಕೊಚ್ಚಿ ಹೋಗಿದೆ. ಇದು ದಾರಿಹೋಕರಿಗೂ ಸಮಸ್ಯೆತಂದಿದೆ.

Advertisement

ತೆರವಾಗದ ವಿದ್ಯುತ್‌ ಕಂಬ, ಮರಗಳು

ರಸ್ತೆ ವಿಸ್ತಾರಗೊಳ್ಳುವ ಸಂದರ್ಭ ರಸ್ತೆಯಂಚಿನ ವಿದ್ಯುತ್‌ ಕಂಬಗಳು ಹಾಗೂ ನೂರಾರು ಮರಗಳು ಹಾಗೆಯೇ ಬಿಡಲಾಗಿದ್ದು ಅಪಘಾತಕ್ಕೆ ಆಹ್ವಾನ ನೀಡುವಂತಿದೆ. ಮರಗಳ ಸುತ್ತಲಿನ ಮಣ್ಣು ತೆಗೆದಿರುವುದರಿಂದ ಗಾಳಿ ಬಂದಾಗ ರಸ್ತೆಗೆ ಉರುಳಿ ಬೀಳುವ ಸಾಧ್ಯತೆಯೂ ಇದೆ.

ಸಮಸ್ಯೆ ಪರಿಹರಿಸಲು ಯತ್ನ
ಮರ ಹಾಗೂ ವಿದ್ಯುತ್‌ ಕಂಬ ತೆರವಿಗೆ ಈಗಾಗಲೇ ಹಲವು ಬಾರಿ ಪ್ರಯತ್ನ ಮಾಡಲಾಗಿದೆ. ಆದರೆ ಆರಣ್ಯ ಇಲಾಖೆಯ ನಿರ್ಲಕ್ಷತನದಿಂದಾಗಿ ಇನ್ನೂ ಮರ ತೆರವುಗೊಂಡಿಲ್ಲ. ರಸ್ತೆಯ ಹೊಂಡಗಳಿಗೆ ತೇಪೆ ಕಾರ್ಯ ನಡೆಸಲಾಗುವುದು. -ಸುಮಿತ್‌ ಶೆಟ್ಟಿ, ಜಿ.ಪಂ.ಸದಸ್ಯರು
ವಾಹನ ಸವಾರರಿಗೆ ಅಪಾಯಕಾರಿ

ರಸ್ತೆ ವಿಸ್ತರಣೆ ಸಂದರ್ಭ ರಸ್ತೆಯಂಚಿನ ವಿದ್ಯುತ್‌ ಕಂಬ ಹಾಗೂ ಮರಗಳನ್ನು ತೆರವುಗೊಳಿಸದೆ ಇರುವುದರಿಂದ ವಾಹನ ಸವಾರರಿಗೆ ತೀವ್ರ ಅಪಾಯಕಾರಿಯಾಗಿ ಪರಿಣಮಿಸಿದೆ.
– ಸುನೀಲ್, ಬಸ್ಸು ಚಾಲಕ
Advertisement

Udayavani is now on Telegram. Click here to join our channel and stay updated with the latest news.

Next