Advertisement

ಕಾಡಿದ ಮಳೆರಾಯ

11:44 AM Jun 12, 2018 | |

ಬೆಂಗಳೂರು: ಕ್ಷೇತ್ರದ ಹಲವೆಡೆ ಸೋಮವಾರ ಆಗಾಗ್ಗೆ ಸುರಿದ ತುಂತುರು ಮಳೆಯಿಂದಾಗಿ ಮತದಾರರು ಪರದಾಡುವಂತಾಯಿತು. ಗುರಪ್ಪನಪಾಳ್ಯ, ಸಾರಕ್ಕಿ, ಬೈರಸಂದ್ರದ ಕೆಲವೆಡೆ ಕಿರಿದಾದ ರಸ್ತೆಗಳ ಬಳಿಯ ಮತಗಟ್ಟೆಗಳಲ್ಲಿ ಮತದಾರರು ಪರದಾಡುವಂತಾಯಿತು.

Advertisement

ಆಗಾಗ್ಗೆ ಸುರಿದ ಮಳೆಯಿಂದಾಗಿ ಗುರಪ್ಪನಪಾಳ್ಯ ಭಾಗದ ಹಲವು ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ತೊಂದರೆ ಅನುಭವಿಸಿದರು. ಮಳೆಯಿಂದಾಗಿ ಕಿರಿದಾದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಮಳೆಯಿಂದ ಆಶ್ರಯ ಪಡೆಯಲು ಜನ ಅಂಗಡಿ, ಮುಂಗಟ್ಟುಗಳ ಬಳಿ ಆಶ್ರಯ ಪಡೆದರು.

ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಬಹಳಷ್ಟು ಮತಗಟ್ಟೆಗಳ ಬಳಿ ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಶಾಮಿಯಾನದ ಆಶ್ರಯದಲ್ಲಿ ಸಿಬ್ಬಂದಿ ಮತದಾರರ ಚೀಟಿ (ವೊಟರ್‌ ಸ್ಲಿಪ್‌) ವಿತರಣೆ, ಮತದಾರರ ಹೆಸರು ಗುರುತಿಸುವ ಕಾರ್ಯ ನಿರ್ವಹಿಸಿದರು.

ಪಕ್ಷಗಳ ಏಜೆಂಟರು ಮಳೆಯಿಂದ ರಕ್ಷಣೆ ಪಡೆಯಲು ಸಮೀಪದ ನಿರ್ಮಾಣ ಹಂತದ ಕಟ್ಟಡ, ಅಂಗಡಿ ಮುಂಗಟ್ಟುಗಳಿಗೆ ಸ್ಥಳಾಂತರಗೊಂಡಿದ್ದು ಕಂಡುಬಂತು. ಬಿಸ್ಮಿಲ್ಲಾ ನಗರದ ಬಿಇಟಿ ಇನ್ಸ್‌ಟಿಟ್ಯೂಟ್‌, ಲಿಲ್ಲಿ ರೋಸ್‌ ಇಂಗ್ಲಿಷ್‌ ಶಾಲೆಯ ಮತಗಟ್ಟೆ ಬಳಿ ಶಾಮಿಯಾನ ವ್ಯವಸ್ಥೆಯಿಲ್ಲದ ಕಾರಣ ಮಳೆ ಬಂದಾಗ ಸಾಲುಗಟ್ಟಿ ನಿಂತಿದ್ದ ಮತದಾರರು ಮತಗಟ್ಟೆಯೊಳಗೆ ನಿಂತರು.

Advertisement

Udayavani is now on Telegram. Click here to join our channel and stay updated with the latest news.

Next