Advertisement

ಇನ್ನಾ ಗುಡ್ಡದ ಬಿಎಸ್ಸೆನ್ನೆಲ್‌ ಟವರ್‌ ಸ್ತಬ್ಧ

10:26 PM Jul 16, 2019 | sudhir |

ಬೆಳ್ಮಣ್‌: ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಅಚ್ಚುಮೆಚ್ಚಾಗಿದ್ದ ಬಿಎಸ್ಸೆನ್ನೆಲ್‌ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವಂತೆಯೇ ಕಾರ್ಕಳ ತಾ| ಇನ್ನಾ ಕಾಂಜರಕಟ್ಟೆಯ ಗುಡ್ಡದಲ್ಲಿರುವ ಟವರ್‌ ಸ್ತಬ್ಧಗೊಂಡಿದೆ.

Advertisement

ಇನ್ನಾ ಗುಡ್ಡದ ಸೂಕ್ಷ್ಮ ತರಂಗ ಪುನರಾವರ್ತನ ನಿಲಯದ ಟವರ್‌ಗೆà ಬಿಎಸ್ಸೆನ್ನೆಲ್‌ ಮೊಬೈಲ್‌ ಸಂಪರ್ಕ ಸಾಧನಗಳನ್ನು ಜೋಡಿಸಲಾಗಿದ್ದು, ಅದೀಗ ಕಾರ್ಯಾಚರಿಸುತ್ತಿಲ್ಲ. ಇದರಿಂದ ನೆಟ್‌ವರ್ಕ್‌ ಸಿಗದೆ ಹಲವು ತಿಂಗಳಾಗಿದೆ.

ಸುಮಾರು 60 ನಿಸ್ತಂತು ದೂರವಾಣಿ ಸಂಪರ್ಕ, ಒಂದು ಬ್ಯಾಂಕಿಂಗ್‌ ವ್ಯವಸ್ಥೆಯ ಸರ್ವರ್‌ ಹಾಗೂ ಸಹಸ್ರಾರು ಮೊಬೈಲ್‌ ಸಂಪರ್ಕಗಳಿಗೆ ಸಂಪರ್ಕ ಒದಗಿಸುತ್ತಿದ್ದ ಟವರ್‌ ಸ್ಥಗಿತವಾದ್ದರಿಂದ ಗ್ರಾಹಕರು ಆಕ್ರೋಶಗೊಂಡಿದ್ದಾರೆ.

ಡೀಸೆಲ್‌ ಇಲ್ಲ, ಬ್ಯಾಟರಿಯೂ ಇಲ್ಲ!
ವಿದ್ಯುತ್‌ ಕೈಕೊಟ್ಟರೆ ಇಲ್ಲಿರುವ ಜನರೇಟರ್‌ಗೆ ಡೀಸೆಲ್‌ ಹಾಕಲು ಇಲಾಖೆ ಸಮಸ್ಯೆ ಸುಳಿಯಲ್ಲಿದೆ. ಇನ್ನು ಬ್ಯಾಟರಿ ವಾರೆಂಟಿ 2009ರಲ್ಲೇ ಮುಗಿದಿದ್ದು, ಅದೂ ಕೈಕೊಟ್ಟಿದೆ. ಪರ್ಯಾಯವಾಗಿ ಬ್ಯಾಕಪ್‌ ಪವರ್‌ ವ್ಯವಸ್ಥೆ ನಿಟ್ಟೆ ಘಟಕದಿಂದ ತರಿಸಲಾಗಿದ್ದು ಅದೂ ಪದೇ ಪದೇ ಕೈ ಕೊಡುತ್ತಿದೆ. ಇದೀಗ ಕೆಲವೊಮ್ಮೆ ವಿದ್ಯುತ್‌ ಇದ್ದರೂ ನೆಟ್‌ವರ್ಕ್‌ ದೊರಕುತ್ತಿಲ್ಲ ಎನ್ನುವುದು ಇಲ್ಲಿನ ಗ್ರಾಹಕರ ದೂರು.

ಕಟ್ಟಡ ಸೋರುತ್ತಿದೆ, ವಿದ್ಯುತ್‌ ಶಾಕ್‌ ಆತಂಕ..!
ಇಲ್ಲಿನ ಈ ಮೈಕ್ರೋ ವೇವ್‌ ಸ್ಟೇಷನ್‌ ಕಟ್ಟಡ 75 ವರ್ಷಗಳ ಹಳೆಯದಾಗಿದ್ದು ಅಲ್ಲಲ್ಲಿ ಸೋರುತ್ತಿದೆ. ವಿದ್ಯುತ್‌ ಸಂಪರ್ಕದ ಗೋಡೆಗಳಲ್ಲಿ ನೀರು ಹರಿಯುತ್ತಿದ್ದು ಶಾಕ್‌ನ ಆತಂಕ ಎದುರಾಗಿದೆ. ಇಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಸ್ಟೇಷನ್‌ ಮಾಸ್ಟರ್‌ ಸುರೇಶ್‌ ಎಂಬವರು ಕಳೆೆದ 8 ತಿಂಗಳುಗಳಿಂದ ಸಂಬಳವೂ ಸಿಗದೆ ಪರಿತಪಿಸುತ್ತಿದ್ದಾರೆ.

Advertisement

ವೈಫೈ ಕೂಡ ಇದೆ
ಈ ಘಟಕದಲ್ಲಿ ವೈಫೈ ವ್ಯವಸ್ಥೆಯೂ ಇದ್ದು ನಗರ ಪ್ರದೇಶಗಳಿಗೆ ಅಳವಡಿಸಬೇಕಾದ ಪರಿಕರ ಇಲ್ಲಿನ ಹಳೆ ಕಟ್ಟಡದಲ್ಲಿ ನೇತಾಡುತ್ತದೆ.

ದುರಸ್ತಿಗೆ ಮನವಿ
ಇನ್ನಾ ಹಾಗೂ ಕಾಂಜರಕಟ್ಟೆಯ ಗ್ರಾಹಕರಿಗೆ ಬಿಎಸ್ಸೆನ್ನೆಲ್‌ ಸೇವೆಯನ್ನು ಸಮರ್ಪಕವಾಗಿ ನೀಡಲು ಟವರ್‌ ವ್ಯವಸ್ಥೆ ಸರಿಪಡಿಸುಂತೆ ಇನ್ನಾ ಗ್ರಾ.ಪಂ. ಉಪಾಧ್ಯಕ್ಷ ಕುಶ ಆರ್‌. ಮೂಲ್ಯ ಅವರು ಸ್ಟೇಷನ್‌ ಮಾಸ್ಟರ್‌ ಮೂಲಕ ಇಲಾಖೆಗೆ ಮನವಿ ನೀಡಿದ್ದಾರೆ. ಈ ಸಂದರ್ಭ ಪಂಚಾಯತ್‌ ಸದಸ್ಯ ಆಲೆನ್‌ ಡಿ’ಸೋಜಾ, ಗ್ರಾಮಸ್ಥರಾದ ದೀಪಕ್‌ ಕಾಮತ್‌, ಯೋಗೀಶ್‌ ಆಚಾರ್ಯ, ಸುರೇಶ್‌ ಮೂಲ್ಯ, ಪ್ರದೀಪ್‌ ಅಂಚನ್‌, ರೂಪೇಶ್‌, ಭದ್ರ, ಕೃಷ್ಣ ಪೂಜಾರಿ, ವಾಸು ಸೇರ್ವೆಗಾರ, ಭಾಸ್ಕರ ಗೌಡ,ಜಾನ್‌ ಮೆಂಡೋನ್ಸಾ ಮತ್ತಿತರರಿದ್ದರು.

ಮನವಿ ನೀಡಿದ್ದೇವೆ
ನಾವೆಲ್ಲರೂ ಬಿಎಸ್ಸೆನ್ನೆಲ್‌ಗಾÅಹಕರು. ಇಲ್ಲಿನ ಈ ಘಟಕದ ವೈಫಲ್ಯದಿಂದಾಗಿ ನಮ್ಮೆಲ್ಲರ ನೆಟ್‌ವರ್ಕ್‌ ಸ್ಥಬ್ದಗೊಂಡಿದೆ. ಕೂಡಲೇ ಸರಿಪಡಿಸುವಂತೆ ಇಲಾಖೆಗೆ ಮನವಿ ನೀಡಿದ್ದೇವೆ.
– ಕುಶ ಆರ್‌. ಮೂಲ್ಯ, ಇನ್ನಾ ಗ್ರಾ.ಪಂ. ಉಪಾಧ್ಯಕ್ಷ

ಪೂರಕ ಸಾಮಗ್ರಿ ಇಲ್ಲ
ಬಿಎಸ್ಸೆನ್ನೆಲ್‌ ಇಲಾಖೆ ನಮಗೆ ಪೂರಕ ಸಾಮಗ್ರಿ ಒದಗಿಸುತ್ತಿಲ್ಲ. ಡೀಸೆಲ್‌ ಬಿಲ್‌ ಬಾಕಿ ಇದೆ. ಇಲ್ಲಿನ ಬ್ಯಾಟರಿಗಳೂ ಹಳೆಯದಾಗಿವೆ. ನಮ್ಮ ಕಡೆಯಿಂದ ಪ್ರಯತ್ನ ನಡೆಯುತ್ತಿದೆ.
– ಜಾಧವ್‌, ಸಬ್‌ಡಿವಿಜನಲ್‌ ಎಂಜಿನಿಯರ್‌, ಬಿಎಸ್ಸೆನ್ನೆಲ್‌

Advertisement

Udayavani is now on Telegram. Click here to join our channel and stay updated with the latest news.

Next