Advertisement
ಯೋಗಾಭ್ಯಾಸಿಗಳಿಗೆ ಯೋಗ ಮಾಡುವ ಉದ್ದೇಶ ಸ್ಪಷ್ಟವಿರಬೇಕು. ದೇಹದಾಡ್ಯಕ್ಕೆ ಎಂದಾದರೆ ಆಸನಗಳನ್ನು ಹೆಚ್ಚು ಮಾಡುವುದು ಒಳಿತು. ಉತ್ತಮ ಆರೋಗ್ಯಕ್ಕೆ ಎಂದಾದರೆ ಆಸನ, ಪ್ರಾಣಾಯಾಮ, ಧ್ಯಾನ ಇವುಗಳನ್ನು ಸಮತೋಲನದಲ್ಲಿ ಅಭ್ಯಸಿಸುವುದು ಉತ್ತಮ. ಯಾವುದೇ ವ್ಯಾಧಿಯಿಂದ ಬಳಲುತ್ತಿದ್ದರೆ ಆರೋಗ್ಯ ಸುಧಾರಿಸುವವರೆಗೆ ಯೋಗ ಗುರುಗಳು ಸೂಚಿಸಿದ ಆಸನಗಳನ್ನು ಮಾತ್ರ ಮಾಡಬಹುದು.
Related Articles
Advertisement
ಯೋಗ್ಯಾಭ್ಯಾಸಕ್ಕೆ ಸಸ್ಯಾಹಾರ ಅಥವಾ ಮಾಂಸಾಹಾರ ಎನ್ನುವ ಭೇದವಿಲ್ಲ. ಮಾಂಸಾಹಾರ ತ್ಯಜಿಸಬೇಕೆಂದಿಲ್ಲ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಒಂದು ಲೋಟ ನೀರು ಕುಡಿದು ಯೋಗಾಭ್ಯಾಸ ಮಾಡಬೇಕು. ಆಹಾರ ಸೇವಿಸಿದ ಅನಂತರ 4 ಗಂಟೆ ಯೋಗಾಭ್ಯಾಸ ಬೇಡ. ಪ್ರಾಣಾಯಾಮ ಮಾಡಬೇಕೆಂದಿದ್ದಲ್ಲಿ ಆಹಾರ ಸೇವನೆ ಬಳಿಕ 6 ಗಂಟೆ ಕಳೆದು ಮಾಡಬಹುದು. ಶರೀರ, ಮನಸ್ಸು, ಉಸಿರಾಟ ಇವುಗಳಿಗೆ ನೇರವಾದ ಸಂಬಂಧವಿದೆ. ಮನಸ್ಸಿಗೆ ನೋವಾದರೆ ಶರೀರವು ಕೃಶವಾಗುತ್ತದೆ. ಮನಸ್ಸಿನ ಭಾವನೆಗಳು ಏರು ಪೇರಾದರೆ ಉಸಿರಾಟದ ವೇಗ ಹೆಚ್ಚುತ್ತದೆ. ಅದೇ ರೀತಿ ಶರೀರಕ್ಕೆ ಸೇವಿಸುವ ಆಹಾರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಆದಷ್ಟು ಸಾತ್ವಿಕ ಆಹಾರ ಸೇವನೆ ಮನಸ್ಸು ಹಾಗೂ ದೇಹದ ಆರೋಗ್ಯಕ್ಕೆ ಪೂರಕ.
ಸತೀಶ್ ಭಟ್ ರಾಮಕುಂಜ21 ವರ್ಷಗಳ ಕಾಲ ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಸತೀಶ್ ಭಟ್ ಅವರು 5 ವರ್ಷಗಳಿಂದ ರಾಮಕುಂಜದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ ಧರ್ಮಸ್ಥಳ ಶಾಂತಿವನ ಟ್ರಸ್ಟ್ (ರಿ.) ವತಿಯಿಂದ ಶಿಕ್ಷಕರಿಗೆ ನಡೆದ ಯೋಗ ತರಗತಿಗಳಲ್ಲಿ 1992ರಿಂದ ಪ್ರತಿವರ್ಷ ತರಬೇತಿ ಪ್ರ ಶಿಕ್ಷಣವನ್ನು ಪಡೆದಿದ್ದಾರೆ. ಬೆಂಗಳೂರಿನ ಪಟ್ಟಾಭಿರಾಮ್ ಅವರಿಂದ ಯೋಗ, ಪ್ರಾಣಾಯಾಮ ತರಬೇತಿ ಪಡೆದ ಅನುಭವಿ. 1997ನೇ ಜಿಲ್ಲಾ ಮಟ್ಟದ ಯೋಗ ಸಮ್ಮೇಳನದಲ್ಲಿ ಕಾರ್ಯದರ್ಶಿಯಾಗಿ ಯಶಸ್ವಿ ಸಂಘಟಕರೆನ್ನುವ ಹೆಸರು ಪಡೆದಿರುವ ಇವರು, 2017ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಜೇಸಿಯಲ್ಲಿ ತರಬೇತುದಾರರಾಗಿ ಸಾವಿರಾರು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರಗಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ.