Advertisement

ಎಲ್ಲರೂ ಸಮಾನರಾಗಿ ಬದುಕುವುದೇ ಮಾನವ ಹಕ್ಕಿನ ಉದ್ದೇಶ

04:34 PM Dec 25, 2017 | Team Udayavani |

ನಗರ: ಸರ್ವೇ ಜನ ಸುಖೀನೋ ಭವಂತು ಎಂಬಂತೆ ಪ್ರಪಂಚದಲ್ಲಿ ಎಲ್ಲರೂ ಸಮಾನರಾಗಿ ಬದುಕುವಂತೆ ಮಾಡುವುದೇ ಮಾನವ ಹಕ್ಕಿನ ಉದ್ದೇಶ ಎಂದು ಪುತ್ತೂರು ಪ್ರಧಾನ ಸಿವಿಲ್‌ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಪ್ರಕಾಶ್‌ ಪಿ.ಎಂ. ಹೇಳಿದರು.

Advertisement

ದ. ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ವಕೀಲರ ಸಂಘ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ದ.ಕ. ಜಿಲ್ಲಾ ಸಮಿತಿ ಹಾಗೂ ಗಾಳಿಮುಖ ಖಲೀಲ್‌ ಸಲಾಹ್‌ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನಡೆದ ಮಾನವ ಹಕ್ಕುಗಳು ಕುರಿತ ಕಾನೂನು ಮಾಹಿತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು. ಖಲೀಲ್‌ ಸಲಾಹ್‌ ವಿದ್ಯಾ ಸಂಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ಮಾನವ ಹಕ್ಕುಗಳನ್ನು ಅರಿತು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳಿಂದಲೇ ಅರಿತುಕೊಳ್ಳಬೇಕು
ಕಾರ್ಯಾಗಾರವು ಸಂಸ್ಥೆಯ ಅಧ್ಯಕ್ಷ ಸಯ್ಯದ್‌ ಹಸನ್‌ ಅಬ್ದುಲ್ಲ ಇಂಬಿಚ್ಚಿಕೋಯಾ ತಂಙಳ್‌ ಗೌರವ ಉಪಸ್ಥಿತಿಯಲ್ಲಿ ಜರಗಿತು. ಅಧ್ಯಕ್ಷತೆ ವಹಿಸಿದ ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎ. ಮಹಾಬಲ ಗೌಡ, ಮಾನವ ಹಕ್ಕುಗಳ ಕುರಿತು ವಿದ್ಯಾರ್ಥಿ ಜೀವನದಲ್ಲೇ ಅರಿತುಕೊಳ್ಳಬೇಕು. ಮಾನವನಾಗಿ ಹುಟ್ಟಿದ ಮೇಲೆ ಮಾನವನಾಗಿ ಬಾಳುವ ಹಕ್ಕುಗಳನ್ನು ಅರಿತಿರಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ನ್ಯಾಯವಾದಿ ಮನೋಹರ ಎ. ಮಾನವ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾ ಪ್ರಸಾದ್‌ ರೈ, ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಪ್ರಸಾದ್‌ ರೈ, ಕ.ರಾ.ವಿ. ಪ. ಜಿಲ್ಲಾ ಸಮಿತಿಯ ಜತೆ ಕಾರ್ಯದರ್ಶಿ ಕಮಲಾ ಗೌಡ, ಕೋಶಾಧಿಕಾರಿ ಅನಂತರಾಮ ಹೇರಳೆ ಸಂದರ್ಬೋಚಿತವಾಗಿ ಮಾತನಾಡಿದರು.  

ಸಂಸ್ಥೆಯ ಪ್ರಾಂಶುಪಾಲೆ ಡ್ಯಾಲಿ ಪಾಯಿಸ್‌, ಮರ್ಕಝ್ ಖಲೀಲ್‌ ಸಲಾಹ್‌ ಪ್ರಾಂಶುಪಾಲ ಆಬಿದಾಲಿ ಬುಖಾರಿ ಉಪಸ್ಥಿತರಿದ್ದರು. ಮುಖ್ಯ ಗುರು ರವಿಶೋಭಾ ಸ್ವಾಗತಿಸಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್‌ ಕೊಟ್ಯಾಡಿ ವಂದಿಸಿದರು. ಶಿಕ್ಷಕರಾದ ಶ್ರೀಧರನ್‌, ಸಂಧ್ಯಾ ಕುಮಾರಿ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next