Advertisement

ಖಾಸಗೀಕರಣ ಸರ್ಕಾರದ ಉದ್ದೇಶ

02:47 PM Jan 23, 2021 | Team Udayavani |

ಮಂಡ್ಯ: ದೇಶವನ್ನು ಸಂಪೂರ್ಣ ಖಾಸಗೀಕರಣ ಮಾಡುವುದೇ ಕೇಂದ್ರ ಸರ್ಕಾರದ ಮೂಲ ಅಜೆಂಡವಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು. ದೇಶದ ನಾಗರಿಕರ ಹಕ್ಕು, ಸಂಪತ್ತನ್ನು ದೋಚಲು ಪ್ರಸ್ತುತ ಸರ್ಕಾರವೇ ಕಾರ್ಪೊàರೇಟ್‌, ಎಂಎನ್‌ಸಿ ಕಂಪನಿಗಳನ್ನು ತರುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ವಿಮಾನ ನಿಲ್ದಾಣ ಎಂದು ಮಾಡಿ  ದ್ದಾರೆ. ರೈಲ್ವೇ ವ್ಯಾಗನ್‌ಗಳಿಗೆ ಅದಾನಿ ಹೆಸರಿಟ್ಟಿದ್ದಾರೆ. ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ. ದೇಶದ ನಾಗರಿಕರ ಹಕ್ಕು, ಸಂಪತ್ತನ್ನು ಖಾಸಗಿ ಕಂಪನಿಗಳಿಗೆ ಕೊಡುತ್ತಿದ್ದಾರೆ. ಇದೇ ರೀತಿ ಆದರೆ ದೇಶ ಉಳಿಯುತ್ತದಾ ಎಂದು ಪ್ರಶ್ನಿಸಿದರು.

ಶ್ರೀಮಂತರ ಕೈಗೆ ಸರ್ಕಾರ: ಅದಾನಿ, ಅಂಬಾನಿಯಂಥ ಆಗರ್ಭ ಶ್ರೀಮಂತರ ಕೈಗೆ ದೇಶದ ಆಸ್ತಿ ನೀಡುವುದೇ ಸರ್ಕಾರದ ಅಜೆಂಡಾ ಆಗಿದೆ. ಎಲ್ಲವನ್ನೂ ವರ್ಗಾಯಿಸುವುದರ ಮೊದಲ ಹೆಜ್ಜೆಯಾಗಿ ಕೃಷಿ, ಕೃಷಿ ಮಾರುಕಟ್ಟೆಯನ್ನು ಕಂಪನಿಗಳಿಗೆ ವರ್ಗಾಯಿಸಿ, ಬಹುಸಂಖ್ಯಾತ ಜನರನ್ನು ಬರಿದು ಮಾಡುವುದೇ ಅವರ ಹಿಂದಿನ ಉದ್ದೇಶ. ಇದನ್ನು ವಾಪಸ್‌ ಪಡೆಯುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಜಲನೀತಿ ಸರಿ ಇಲ್ಲ: ಪ್ರಸ್ತುತ ಇರುವ ಜಲ ನೀತಿಗಳು ಸರಿಯಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ಜಾರಿಗೆ ತಂದಿದ್ದಾರೆ. ಆದರೆ ಕೃಷ್ಣ ನಿರ್ವಹಣಾ ಮಂಡಳಿ ಏಕೆ ಜಾರಿಗೆ ತಂದಿಲ್ಲ. ಪ್ರಸ್ತುತ ಇರುವ ನೀತಿಗಳು ಅವೈಜಾnನಿಕವಾಗಿದೆ. ರಾಷ್ಟ್ರೀಯ ಜಲ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಗ್ರಾಪಂ ಅಧಿಕಾರಕ್ಕಾಗಿ ಆಕಾಂಕ್ಷಿಗಳಿಂದ ಸದಸ್ಯರಿಗೆ ಪ್ರವಾಸ ಭಾಗ್ಯ

Advertisement

ಮೈಷುಗರ್‌ ಗುತ್ತಿಗೆ ಸಲ್ಲದು: ಮೈಷುಗರ್‌ ಕಾರ್ಖಾನೆಯನ್ನು 40 ವರ್ಷ ಗುತ್ತಿಗೆ ನೀಡಿರುವುದು ಸರಿಯಲ್ಲ. ಸರ್ಕಾರಿ ಸ್ವಾಮ್ಯ ದಲ್ಲಿರುವ ಕಾರ್ಖಾನೆಯನ್ನು ಎಂದಿಗೂ ಖಾಸಗೀಕರಣ ಮಾಡಬಾರದು. ದುಡ್ಡು ಬಾಚಿಕೊಂಡ ಕಳ್ಳರ ವಿರುದ್ಧ ತನಿಖೆ ನಡೆಸಿ ಜೈಲಿಗೆ ಕಳುಹಿಸಬೇಕು. ಆದರೆ, ಸರ್ಕಾರ ಕಳ್ಳರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಎಫ್‌ಆರ್‌ಪಿ ಜಾರಿಗೆ ತರಲಿ: ಸರ್ಕಾರ ಕಬ್ಬು ಬೆಳೆಗಾರರ ಬಗ್ಗೆ ಹಿತಾಸಕ್ತಿ ಇದ್ದರೆ ಎಫ್‌ಆರ್‌ಪಿ ಜತೆಗೆ ಎಸ್‌ಎಪಿಯನ್ನು ಜಾರಿಗೆ ತರುತ್ತಿತ್ತು. ಆದರೆ, ಇಲ್ಲಿಯವರೆಗೂ ಅದನ್ನು ಮಾಡಿಲ್ಲ. ಖಾಸಗಿ ಬಂಡವಾಳದ ಅಸ್ತ್ರ ಜಾರಿಗೆ ತರುವುದೇ ಸರ್ಕಾರದ ಮುಖ್ಯ ಉದ್ದೇಶ. ಖಾಜಿ ನ್ಯಾಯ ಮಾಡಿ ಅಧಿ ಕಾರ ಉಳಿಸಿಕೊಳ್ಳಲು ಸೀಮಿತ ಕಾರ್ಯಕ್ರಮಗಳನ್ನು ಮಾತ್ರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯ ದರ್ಶಿ ಭೈರೇಗೌಡ, ರೈತ ಮುಖಂಡ ರಾದ ಸಿದ್ದಲಿಂಗಸ್ವಾಮಿ, ಕವಿತಾ, ರಮೇಶ್‌, ಕೃಷ್ಣ, ಮಹೇಶ್‌, ಆನಂದ್‌ ಪಟೇಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next