Advertisement

ರೈತರಿಗೆ ಅನುಕೂಲ ಕಲ್ಪಿಸುವುದೇ ಉದ್ದೇಶ

06:05 PM May 11, 2020 | mahesh |

ನಾಗಮಂಗಲ: ಮೈಷುಗರ್‌ ಕಾರ್ಖಾನೆ ಯಾರು ನಡೆಸುತ್ತಾರೆ ಅನ್ನುವುದು ಮುಖ್ಯವಲ್ಲ. ಸಕಾಲದಲ್ಲಿ ಕಬ್ಬು ಕಟಾವು ಮಾಡಿ, ರೈತರಿಗೆ ನಿಗದಿತ ಬೆಲೆ ಸಿಗುವುದು ಮುಖ್ಯ ಎಂದು ಸಂಸದೆ ಸುಮಲತಾ ಹೇಳಿದರು. ಆದಿಚುಂಚನಗಿರಿ ಕ್ಷೇತ್ರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಖಾನೆ ಖಾಸಗಿಯವರು ನಡೆಸಿದರೆ ರೈತರಿಗೆ ಒಳ್ಳೆಯದಾಗಬಹುದು ಅನ್ನುವುದು
ನನ್ನ ಅಭಿಪ್ರಾಯ. ಸರ್ಕಾರ ನಡೆಸುತ್ತಿದ್ದ ಇಷ್ಟು ದಿನಗಳಲ್ಲಿ ಏನೇನು ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇನ್ನು ಮುಂದೆ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂಬುದೇ ನನ್ನ ಹೇಳಿಕೆಯ ಉದ್ದೇಶವಾಗಿತ್ತು ಎಂದು ಸ್ಪಷ್ಟಪಡಿಸಿದರು.

Advertisement

ಜನಪ್ರತಿನಿಧಿಗಳ ವಿರೋಧ ತಪ್ಪು: ಕೋವಿಡ್  ಸೋಂಕಿತರು, ಸಂಪರ್ಕಿತರನ್ನು ಸಮೀಪದಲ್ಲಿ ಕ್ವಾರಂಟೈನ್‌ ಮಾಡಿದರೆ ಸೋಂಕು ಹರಡುವುದಿಲ್ಲ. ಕೋವಿಡ್ ಸೋಂಕಿನ ತಿಳಿವಳಿಕೆ, ಮಾಹಿತಿ ನೀಡಬೇಕಾದ ಜವಾಬ್ದಾರಿ ಯುತ ಜನಪ್ರತಿನಿಧಿಗಳೇ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುವುದು ಸರಿಯಲ್ಲ ಎಂದರು. ಬಳಿಕ ಶ್ರೀಮಠದ ಪೀಠಾಧ್ಯಕ್ಷ ಶ್ರೀ  ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ತಟ್ಟಹಳ್ಳಿ: ತಾಲೂಕಿನ ತಟ್ಟಹಳ್ಳಿಯಲ್ಲಿ ಜಿಲ್ಲಾ ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಆಹಾರ ಪದಾರ್ಥ ಗಳ ಕಿಟ್‌ ವಿತರಿಸಿದ ಮಾತನಾಡಿ, ಸಾರ್ವ ಜನಿಕರು ಅನಗತ್ಯವಾಗಿ ಹೊರಗೆ ಓಡಾಟ ಮನೆಯಲ್ಲಿಯೇ ಇದ್ದು ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು. ಮನ್‌ಮುಲ್‌ ಅಧ್ಯಕ್ಷ ರಾಮಚಂದ್ರು, ನಿರ್ದೇಶಕ ನೆಲ್ಲಿಗೆರೆ ಬಾಲು, ಪಾಂಡವಪುರ ಎಸಿ ಶೈಲಜಾ, ತಹಶೀಲ್ದಾರ್‌ ಕುಂಞ ಅಹಮದ್‌, ಡಾ.ಧನಂಜಯ, ತಾಪಂ ಇಒ ಅನಂತರಾಜು, ಸಿಪಿಐ ರಾಜೇಂದ್ರ ಇತರರಿದ್ದರು.

ಸಾತೇನಹಳ್ಳಿಗೂ ಭೇಟಿ: ನಿಬಂಧಿತ ವಲಯ ಸಾತೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂಸದೆ ಸುಮಲತಾ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಗ್ರಾಮಸ್ಥರಲ್ಲಿ ಧೈರ್ಯ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next