Advertisement

ಅನುಮಾಸ್ಪದ ವ್ಯಕ್ತಿಯನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

05:29 PM Dec 09, 2019 | sudhir |

ಬಂಟ್ವಾಳ: ತಾಲೂಕಿನ ಪಿಲಿಮೊಗರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಡಿ. 8ರಂದು ಮುಂಜಾನೆ ನಡೆದಿದೆ.

Advertisement

ವ್ಯಕ್ತಿಯು ಮಾಜಿ ಸೈನಿಕರಾಗಿದ್ದು ರಮಣನ್(55) ಎಂದು ಗುರುತಿಸಲಾಗಿದೆ.

ಪಣಂಬೂರು ಎನ್.ಎಂ.ಪಿ.ಟಿ.ಕಾಲಿನಿಯಲ್ಲಿ ವಾಸವಾಗಿದ್ದ ಅವರು ಡಿ. 5ರಂದು ನಾಪತ್ತೆಯಾಗಿರುವ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಬಂಟ್ವಾಳ ಗ್ರಾಮಾಂತರ ಪೊಲೀಸರು ಅವರನ್ನು ಪಣಂಬೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next