Advertisement

ಮನೆ ಬಿಟ್ಟು ಹೊರಬಾರದ ಸಾರ್ವಜನಿಕರು!

01:48 PM Mar 28, 2020 | Suhan S |

ಯಾದಗಿರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿರುವ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮೊದ ಮೊದಲು ಅನಗತ್ಯವಾಗಿ ತಿರುಗುತ್ತಿದ್ದ ಜನರು ಪೊಲೀಸರ ಲಾಠಿ ರುಚಿ ನೋಡಿ ಮನೆಯಿಂದ ಅನಾವಶ್ಯಕ ಹೊರಬರುವುದನ್ನು ನಿಲ್ಲಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದು, ನಿತ್ಯದ ಅಗತ್ಯ ವಸ್ತಗಳು ದೊರೆಯಿತು. ತರಕಾರಿ, ಹಾಲು, ಕಿರಾಣಿ ಸುಲಭವಾಗಿ ಕೈಗೆಟಕಿತು. ಜಿಲ್ಲೆಯ ಎಲ್ಲೆಡೆ ಸಾಮಾಜಿಕ ಅಂತರ ಕಾಪಾಡುತ್ತಿರುವುದು ಕಂಡು ಬಂತು. ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿತ್ತು, ಇನ್ನು ಜಿಲ್ಲೆಯ ಸುರಪುರ ತಾಲೂಕಿನ ಮಂಗಿಹಾಳ ಗ್ರಾಮಕ್ಕೆ ಸುರಪುರ ಪಿಎಸ್‌ಐ ಚೇತನ್‌ ಭೇಟಿ ನೀಡಿ ಅನಾವಶ್ಯಕವಾಗಿ ಗ್ರಾಮಗಳಲಿ ತಿರುಗಾಡದಂತೆ ಸೂಚಿಸಿದರು. ಕೋವಿಡ್  19 ಲಕ್ಷಣಗಳನ್ನು ವಿವರಿಸಿದ ಅವರು ಯಾವುದೇ ಲಕ್ಷಣಗಳು ಕಂಡು ಬಂದರೆ ಸಹಾಯವಾಣಿ ಇಲ್ಲವೇ ಆರೋಗ್ಯ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ತಿಳಿಸಿದರು.

ಎಲ್ಲೆಡೆ ಕೋವಿಡ್ 19 ವೈರಸ್‌ ಆತಂಕದಿಂದ ಮಹಾನಗರ ಬೆಂಗಳೂರಿನಲ್ಲಿ ನೆಲೆಸಿದ್ದ ಜನರು ಸ್ವಗ್ರಾಮಗಳತ್ತ ಹಿಂತಿರುಗುತ್ತಿದ್ದು, ಗ್ರಾಮೀಣ ಜನರಲ್ಲಿ ತೀವ್ರ ಆತಂಕ ಹುಟ್ಟಿಸಿದೆ. ಬೆಂಗಳೂರಿನಲ್ಲಿ ಮಹಾಮಾರಿ ತಲ್ಲಣ ಸೃಷ್ಟಿಸಿದ್ದು, ಹೆಚ್ಚಿನ ಜನರು ತಮ್ಮ ಗ್ರಾಮಗಳತ್ತ ಹಿಂತಿರುಗುತ್ತಿದ್ದು ಆದರೇ ಯಾರಲ್ಲಿಯಾದರೂ ಸೋಂಕಿರಬಹುದೇ ಎನ್ನುವ ಭಯ ಆವರಿಸಿದೆ. ಹೊರಗಡೆಯಿಂದ ಜಿಲ್ಲೆಗೆ ಬರುವವರನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಬೇಕು, ಆದರೇ, ಹೊರಗಡೆಯಿಂದ ಬಂದವರನ್ನು ಆಸ್ಪತ್ರೆಗೆ ಕಳಿಸಲಾಗುತ್ತಿದೆ.

ಆದರೂ ಅವರ ವಿವರವನ್ನು ದಾಖಲಿಸಿಕೊಂಡು ಅವರನ್ನು ತಪಾಸಣೆ ಮಾಡುವ ಕಾರ್ಯ ನಡೆಯುತ್ತಿಲ್ಲ ಎನ್ನುವ ಮಾತುಗಳು ಅಧಿ ಕಾರಿ ವಲಯದಲ್ಲಿಯೇ ಕೇಳಿ ಬಂದಿದ್ದು, ಅತ್ಯಂತ ಆತಂಕಕ್ಕೆ ಕಾರಣವಾಗಿದೆ. ಒಬ್ಬರಲ್ಲಿಯೂ ಸೋಂಕಿನ ಲಕ್ಷಣವಿದ್ದರೆ ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ಹಾಗೂ ಸಮುದಾಯದ ಜನರಿಗೆ ಹರಡುವ ಭೀತಿ ಎದುರಾಗಿದೆ. ಜಿಲ್ಲಾಡಳಿತ ಹೊರಗಿನಿಂದ ಬಂದವರೆಲ್ಲರನ್ನು ತಪಾಸಣೆಗೆ ಒಳಪಡಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next