Advertisement
ಒಂದು ನಗರ ಪ್ರದೇಶದಲ್ಲಿನ ನಾಗರಿಕರ ಸೌಲಭ್ಯದ ದೃಷ್ಟಿಯಿಂದ ನಗರದಲ್ಲಿ ಲಭ್ಯವಿರಲೇ ಬೇಕಾದ ಪ್ರಾಥಮಿಕ ಅಗತ್ಯಗಳಲ್ಲಿ ಶೌಚಾಲಯ ಪ್ರಮುಖವಾದುದು. ಪ್ರವಾಸಿಗಳು ಹಾಗೂ ಹೊರ ಊರುಗಳಿಂದ ಅಗಮಿಸುವ ಜನತೆ ಮಲ್ಪೆ ಬಸ್ಸು ನಿಲ್ದಾಣದಲ್ಲಿ ಶೌಚಗೃಹ ಹುಡುಕುವುದರಲ್ಲೆ ಸುಸ್ತಾಗುತ್ತಾರೆ. ಅನಿವಾರ್ಯವಾಗಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ಇದೆ.
Related Articles
ಮಲ್ಪೆ ಬಸ್ಸು ನಿಲ್ದಾಣದ ಸಮೀಪ ಒಂದು ಸುಸಜ್ಜಿತವಾದ ಶೌಚಾಲಯದ ನಿರ್ಮಾಣಕ್ಕೆ ಈಗಾಗಲೇ ಪ್ರೊಪೊಸಲ್ ಸಿದ್ಧವಾಗಿದೆ. ಆದರೆ ನಿರ್ಮಾಣ ಮಾಡಬೇಕಾದ ಜಾಗದ ತಾಂತ್ರಿಕ ಸಮಸ್ಯೆಯಿಂದ ಯೋಜನೆಗೆ ಸ್ವಲ್ಪ ಹಿನ್ನಡೆಯಾಗಿದೆ. ಜಾಗದ ಸಮಸ್ಯೆ ಇತ್ಯರ್ಥವಾದ ಕೂಡಲೇ ಕಾಮಗಾರಿ ನಡೆಸಲಾಗುವುದು.
-ಆನಂದ ಸಿ. ಕಲ್ಲೋಳಿಕರ್, ಪೌರಾಯುಕ್ತರು, ಉಡುಪಿ ನಗರಸಭೆ
Advertisement
ಸಾರ್ವಜನಿಕರ ಪರದಾಟನಿತ್ಯವೂ ಇಲ್ಲಿ ಸಾವಿರಾರು ಮಹಿಳೆಯರು, ವೃದ್ದರು ಮಕ್ಕಳು ನಗರಕ್ಕೆ ಆಗಮಿಸುತ್ತಾರೆ. ಶೌಚಗೃಹ ಇಲ್ಲದೆ ಇರುವುದರಿಂದ ಪರದಾಡುವಂತಾಗಿದೆ. ಸ್ಥಳೀಯಾಡಳಿತ ಜನರ ಸಮಸ್ಯೆಯನ್ನು ಅರಿತು ಬಸ್ಸು ನಿಲ್ದಾಣ ಅಥವಾ ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಬೇಕಾಗಿದೆ.
-ಹರೀಶ್, ಗೋಳಿದಡಿ,
ಸ್ಥಳೀಯರು