Advertisement

Mangaluru: “ತಾರತಮ್ಯದ ಕಾರ್ಯಾಚರಣೆ’ ಎಂದು ಆರೋಪಿಸಿ ಪ್ರತಿಭಟನೆ

03:00 PM Aug 03, 2024 | Team Udayavani |

ಸ್ಟೇಟ್‌ಬ್ಯಾಂಕ್‌: ನಗರದಲ್ಲಿ ಅನಧಿಕೃತ ಬೀದಿ ಬದಿ ವ್ಯಾಪಾರವನ್ನು ತೆರವುಗೊಳಿಸುವ ಟೈಗರ್‌ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು.

Advertisement

ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದ ಎದುರಿನಲ್ಲಿ ಫ‌ುಟ್‌ಪಾತ್‌ ಮೇಲೆ ಅನಧಿಕೃತವಾಗಿ ನಡೆಯುತ್ತಿದ್ದ ಬೀದಿ ಬದಿಯ ವ್ಯಾಪಾರವನ್ನು ತೆರವು ಮಾಡಲಾಯಿತು. ಜತೆಗೆ ಪರವಾನಿಗೆ ಹೊಂದಿದ್ದರೂ ಷರತ್ತುಗಳನ್ನು ಮೀರಿ ವ್ಯಾಪಾರ ನಡೆಯುತ್ತಿದ್ದ ಅಂಗಡಿಯೊಂದರ ವಿರುದ್ಧವೂ ಕಾರ್ಯಾಚರಣೆ ನಡೆಸಲಾಯಿತು.

ಹಾಲು, ಹಾಲಿನ ಉತ್ಪನ್ನಗಳನ್ನು ಮಾತ್ರಮಾರಾಟ ಮಾಡಲು ಪರವಾನಿಗೆ ಪಡೆದಿದ್ದಮಿಲ್ಕ್ ಪಾರ್ಲರ್‌ನಲ್ಲಿ ಚಹಾ, ತಿಂಡಿ ಸಹಿತ ಇತರ ವ್ಯಾಪಾರ ಕೂಡ ಮಾಡಿ ನಿಯಮ ಉಲ್ಲಂ ಸುತ್ತಿದ್ದ ಹಿನ್ನೆಲೆಯಲ್ಲಿ ಆ ಪಾರ್ಲರ್‌ನ್ನು ಅಧಿಕಾರಿಗಳು ಸೀಜ್‌ ಮಾಡಿ ಬೀಗ ಜಡಿದರು. ಅಲ್ಲದೆಅಂಗಡಿಯ ಮೇಲ್ಛಾವಣಿಯ ಭಾಗವೊಂದು ನಿಗದಿತ ಸ್ಥಳವನ್ನು ಮೀರಿ ಫ‌ುಟ್‌ಪಾತ್‌ ಆಕ್ರಮಿಸಿಕೊಂಡಿದ್ದರಿಂದ ಅದನ್ನು ಜೆಸಿಬಿ ಬಳಸಿ ತೆರವುಗೊಳಿಸಿದರು. ಪಾರ್ಲರ್‌ನವರು ಹೊರಭಾಗದಲ್ಲಿ ಇಟ್ಟಿದ್ದ ಫ್ರಿಜ್‌ ಮತ್ತಿತರ ಪರಿಕರಗಳನ್ನು ಕೂಡ ತೆರವುಗೊಳಿಸಲಾಯಿತು. ಮೂರು ಕೆಎಸ್‌ ಆರ್‌ಪಿ ತುಕಡಿಗಳ ಸಹಿತವಾಗಿ ಬಂದರು ಠಾಣೆಯ ಪೊಲೀಸರು ಬಂದೋಬಸ್ತ್ ನಡೆಸಿದರು.

ತೆರವಿಗಾಗಿ ಪ್ರತಿಭಟನೆ!

ನಾಲ್ಕು ದಿನಗಳಿಂದ ಅನಧಿಕೃತ ಬೀದಿ ವ್ಯಾಪಾರ ತೆರವಿನ ವಿರುದ್ಧ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟಿಸುತ್ತಿದ್ದ ಕೆಲವು ವ್ಯಾಪಾರಸ್ಥರು, ಸಂಘಟನೆಯವರು ಶುಕ್ರವಾರ ಅನಧಿಕೃತ ವ್ಯಾಪಾರ ತೆರವುಗೊಳಿ ಸುವುದಕ್ಕೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ನಡೆ ಸಲಾಗುತ್ತಿದೆ. ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ಎದುರಿನ ಮಿಲ್ಕ್ ಪಾರ್ಲರ್‌ವೊಂದನ್ನು ತೆರವುಗೊಳಿ ಸಿಲ್ಲ ಎಂದು ದೂರಿದರು. ಅದನ್ನು ಕೂಡ ತೆರವುಗೊಳಿಸಲೇಬೇಕೆಂದು ಪಾಲಿಕೆಯ ಅಧಿಕಾರಿಗಳನ್ನು ಆಗ್ರಹಿಸಿದರು.

Advertisement

ಮಿಲ್ಕ್ ಪಾರ್ಲರ್‌ಗೆ ಪರವಾನಿಗೆ ಇದೆ ಎಂದು ಅಧಿಕಾರಿಗಳು ಮನವರಿಕೆ ಮಾಡಲು ಯತ್ನಿಸಿದರೂ ಪ್ರತಿಭಟನಕಾರರು ಹಿಂದೆ ಸರಿಯಲಿಲ್ಲ. ನಿಯಮಗಳನ್ನು ಮೀರಿ ವ್ಯಾಪಾರ ನಡೆಸಲಾಗುತ್ತಿದೆ ಎಂದು ದೂರಿದರು.

ಹಾಲು, ಹಾಲಿನ ಉತ್ಪನ್ನಗಳ ಹೊರತಾಗಿ ಇತರ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ಮಿಲ್ಕ್ ಪಾರ್ಲರ್‌ನ ಶಟರ್‌ ಹಾಕಿಸಿ ಬೀಗ ಹಾಕಿ ಸೀಜ್‌ ಮಾಡಿದರು.

ಪ್ರತಿಭಟನಕಾರರು – ಅಧಿಕಾರಿಗಳ ನಡುವೆ ವಾಗ್ವಾದ

ಬೀದಿ ಬದಿ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಬಿ.ಕೆ. ಇಮಿ¤ಯಾಜ್‌, ಸುನೀಲ್‌ ಕುಮಾರ್‌ ಬಜಾಲ್‌ ಮೊದಲಾದವರು ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಅಧಿಕಾರಿಗಳು ಮತ್ತು ಪ್ರತಿಭಟನಕಾರರ ನಡುವೆ ವಾಗ್ವಾದ ನಡೆಯಿತು. ಬೀದಿಬದಿ ವ್ಯಾಪಾರಗಳ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡಲು ಅವಕಾಶ ನೀಡುವುದಿಲ್ಲ ಎಂದು ಇಮ್ತಿಯಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next