ಬೇಳ: ವೇದಗಳ ಉಚ್ಚಾರ ಣೆಯಿಂದ ಉಂಟಾಗುವ ಧ್ವನಿ ತರಂಗಗಳು ಮನುಷ್ಯನ ಮೇಲೆ ತುಂಬ ಮಹತ್ತರವಾದ ಪರಿಣಾಮ ಬೀರುತ್ತವೆೆ ಎಂದು ವಿಜ್ಞಾನಿಗಳು ತಮ್ಮ ಸಂಶೋಧನೆಯಿಂದ ಕಂಡು ಹಿಡಿ ದಿದ್ದಾರೆ ಎಂಬುದಾಗಿ ಕುಮಾರಮಂಗಲ ದೇಗುಲದ ಶರವಣ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ವೇ|ಮೂ| ಗೋಪಾಲಕೃಷ್ಣ ಭಟ್ ಹೇಳಿದರು.
ಈಗಲಾದರೂ ನಾವು ಎಚ್ಚೆತ್ತುಕೊಂಡು ಸಾಂಪ್ರದಾಯಿಕವಾಗಿ ಬಂದ ವೇದಾಧ್ಯಯನ ಪರಂಪರೆಯನ್ನು ರಕ್ಷಿಸಿ, ವೇದವನ್ನು ಓದು ವವರಿಗೆ ಪ್ರೋತ್ಸಾಹ ನೀಡುವುದು ಅತೀ ಅಗತ್ಯವಾಗಿದೆ ಎಂದೂ ಅವರು ಅಭಿಪ್ರಾ ಯಪಟ್ಟರು.
ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆ ಹಾಗೂ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇಗುಲದ ಶರವಣ ಸೇವಾ ಟ್ರಸ್ಟ್ ಜಂಟಿಯಾಗಿ ಹಮ್ಮಿಕೊಂಡ ವಸಂತ ವೇದಪಾಠ ಶಿಬಿರದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ, ಶರವಣ ಟ್ರಸ್ಟ್‌ನ ನಿರ್ದೇಶಕರೂ, ಪ್ರಸ್ತುತ ದೇವಾಲಯದ ಪ್ರಧಾನ ಅರ್ಚಕರೂ ಆದ ಬೇಳ ರಾಮಚಂದ್ರ ಅಡಿಗ, ಹಿರಿಯ ಧಾರ್ಮಿಕ ಮುಂದಾಳುಗಳಾದ ಕೆ.ವಿಷ್ಣು ಭಟ್ ಕಕ್ಕೆಪ್ಪಾಡಿ, ಮಧೂರು ದೇಗುಲದ ಪವಿತ್ರಪಾಣಿಗಳಾದ ರತನ್ ಕುಮಾರ್ ಕಾಮಡ, ಶಿಬಿರದ ಅಧ್ಯಾಪಕರಾದ ಶಿವಾನಂದ ಮಯ್ಯ, ಗೋವಿಂದ ಜೋಯಿಸ, ವೆಂಕಟ್ರಾಜ ಕಾರಂತ ಹಾಗು ಕರ್ಣಾಟಕ ಬ್ಯಾಂಕ್‌ನ ನೀರ್ಚಾಲು ಶಾಖೆಯ ವ್ಯವಸ್ಥಾಪಕರಾದ ಅನಂತ ಗೋಪಾಲಕೃಷ್ಣ ಮಯ್ಯ, ಪ್ರಸ್ತುತ ದೇವಾಲಯದ ಮೆನೇಜರ್ ಎಂ.ಜಿ.ರಾಮಕೃಷ್ಣ ಭಟ್ ಮುಂತಾದವರು ಶುಭವನ್ನು ಹಾರೈಸಿ ಮಾತನಾಡಿದರು.
ಕೂಟ ಮಹಾಜಗತ್ತು ಕಾಸರಗೋಡು ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಅವರು ಮಧೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಪ್ರಿಲ್ ಮೇ ತಿಂಗಳುಗಳಲ್ಲಾಗಿ ನಡೆದ ಪ್ರಸ್ತುತ ವೇದಪಾಠ ಶಿಬಿರದಲ್ಲಿ ಋಗ್ವೇದ ಯಜುರ್ವೇದಗಳಲ್ಲಾಗಿ ಸುಮಾರು ಐವತ್ತರಷ್ಟು ಶಿಬಿರಾರ್ಥಿಗಳು ಭಾಗವ ಹಿಸಿದ್ದರು.
ಶಂಕರನಾರಾಯಣ ಹೇರಳ ಉಡುವ ಸ್ವಾಗತಿಸಿದರು. ಎಂ.ನರಸಿಂಹ ರಾಜ್ ಪುತ್ತಿಗೆ ವಂದಿಸಿದರು. ಚಂದ್ರಶೇಖರ ರಾವ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.