Advertisement

Election: ಸ್ಪರ್ಧೆ ವಯೋಮಿತಿ 18ಕ್ಕೆ ಇಳಿಕೆ ಪ್ರಸ್ತಾವ ಸ್ವಾಗತಾರ್ಹ ವಿಚಾರ

11:32 PM Aug 09, 2023 | Team Udayavani |

ದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುವವರ ವಯೋಮಿತಿಯನ್ನು 25ರಿಂದ 18ಕ್ಕೆ ಇಳಿಸಬೇಕೆಂದು ಈಚೆಗೆ ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ. ಇದರ ಸಾಧಕ-ಬಾಧಕಗಳೇನು? ಈ ಬಗ್ಗೆ ಚಾವಡಿಯಲ್ಲೊಂದು ಚರ್ಚೆ.

Advertisement

ಚುನಾವಣೆಗೆ ಸ್ಪರ್ಧೆ ಮಾಡುವ ವಯೋಮಿತಿ ಯನ್ನು 25ರಿಂದ 18ಕ್ಕೆ ಇಳಿಸಲು ಸಂಸದೀಯ ಸಮಿತಿ ಸಲಹೆ ನೀಡಿರು ವುದು ಸ್ವಾಗತಾರ್ಹ ವಿಚಾರವಾಗಿದೆ. ಭಾರತ ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿ 25 ವರ್ಷ ಮೇಲ್ಪಟ್ಟ ಭಾರತದ ಪ್ರಜೆ ಚುನಾವಣೆಗೆ ಸ್ಪರ್ಧೆ ಮಾಡಲು ಸಾಂವಿಧಾನಿಕ ಅವಕಾಶ ಇದೆ. 25 ವರ್ಷ ಇರುವ ಈ ನಿಯಮ ವನ್ನು 18ನೇ ವರ್ಷಕ್ಕೆ ಇಳಿಕೆ ಮಾಡುವುದು ದೇಶದ ಹಲವು ಅಭಿವೃದ್ಧಿ ವಿಚಾರಗಳಲ್ಲಿ ಪೂರಕವಾದ ಅಭಿಪ್ರಾಯವಾಗಿದೆ.

18 ವರ್ಷಕ್ಕೆ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆಗೆ ಸ್ಪರ್ಧೆ ಮಾಡುವುದಾದರೆ ಯುವಕರು ದೇಶವನ್ನು ಮುಂದಿನ ಪೀಳಿಗೆಯಲ್ಲಿ ಸದೃಢವಾಗಿ ನಿರ್ಮಾಣ ಮಾಡುವ ಗುರಿ ಸುಲಭವಾಗಿ ತಲುಪಬಹುದಾಗಿದೆ. ಹಾಗೂ ಬಹುಮುಖ್ಯ ವಾಗಿ ದೇಶಕ್ಕೆ ಮಾರಕವಾಗಿರುವ ಬಹುದೊಡ್ಡ ಪಿಡುಗು ಭ್ರಷ್ಟಾಚಾರವನ್ನು ತಡೆಯಲು ಇದು ಬಹಳ ಉಪಯುಕ್ತಕಾರಿಯಾಗಿದೆ. ಈ ನೂತನ ನಿಯಮದಿಂದ ಯುವ ಪ್ರತಿಭಾನ್ವಿತರನ್ನು ರಾಜಕೀಯ ಕ್ಷೇತ್ರಕ್ಕೆ ಹಾಗೂ ದೇಶದ ಸೇವೆಗೆ ಬಳಸಿಕೊಳ್ಳ ಬಹುದಾಗಿದೆ.

ಬಹುತೇಕ ಪ್ರತಿಭಾನ್ವಿತ ಯುವಕ ಯುವತಿಯರು 25 ವರ್ಷಗಳವರೆಗೆ ತಮ್ಮ ಶಿಕ್ಷಣವನ್ನು ಮುಗಿಸಿ ಅನಂತರ ತಮ್ಮ ವೃತ್ತಿ ಜೀವನದ ಕಡೆ ಗಮನವಹಿಸುತ್ತಾರೆ, ಆದರೆ ಒಂದು ಅಂದಾಜಿನ ಪ್ರಕಾರ ಹೆಚ್ಚು ಶಿಕ್ಷಣ ಪಡೆದವರು ರಾಜಕೀಯಕ್ಕೆ ಬರುತ್ತಿಲ್ಲ ಎನ್ನು ವುದು ಬಹಳಷ್ಟು ತಜ್ಞರ ಅಭಿಪ್ರಾಯವಾಗಿದೆ.

ಬಹುತೇಕ ಮಂದಿ ವಂಶ ಪರಂಪರೆಯಾಗಿ ಮತ್ತು ಉದ್ಯಮದ ದೃಷ್ಟಿಯಿಂದ ಚುನಾ ವಣೆಗಳಲ್ಲಿ ಸ್ಪರ್ಧೆ ಮಾಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಆದರೆ ಉದ್ಯಮಿಗಳು ಅಥವಾ ಶಿಕ್ಷಣ ಪಡೆಯದೆ ಇರುವವರು ಜನ ಪ್ರತಿನಿಧಿ ಗಳಾಗ ಬಾರದು ಎಂದು ಯಾವುದೇ ಕಾನೂನು ಇಲ್ಲ, ಎಲ್ಲರೂ ಸಮಾನರು ಎನ್ನುವ ಆಶಯ ನಮ್ಮ ಸಂವಿಧಾನದ್ದಾಗಿದೆ.

Advertisement

18ನೇ ವರ್ಷಕ್ಕೇ ಸ್ಪರ್ಧೆ ಮಾಡುವ ಅವಕಾಶ ದೊರೆತರೆ ಪ್ರತಿಭಾನ್ವಿತ ಯುವ ಪೀಳಿಗೆ ರಾಜಕೀಯಕ್ಕೆ ಬರುವುದಾದರೆ ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ದೇಶ ಅಭಿವೃದ್ಧಿ ಹೊಂದುತ್ತದೆ. ಈ ಹಿಂದೆ 18 ವರ್ಷಕ್ಕೆ ಮತದಾನ ಮಾಡುವ ಹಕ್ಕನ್ನು ಇಳಿಕೆ ಮಾಡಿದ್ದ ಲಾಭವನ್ನು ಇಂದು ನಾವು ಪಡೆಯುತ್ತಿದ್ದೇವೆ. ಅದರಂತೆ ಚುನಾವಣೆಗೆ ಸ್ಪರ್ಧೆ ಮಾಡುವ ವಯಸ್ಸನ್ನು ಇಳಿಕೆ ಮಾಡುವುದು ಹಲವು ಮಜಲುಗಳಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾಗಿದೆ.
ಸಂಸದೀಯ ಸಮಿತಿಯ ಈ ಸಲಹೆ ಒಂದು ರೀತಿಯಲ್ಲಿ ಸ್ವಾಗತಾರ್ಹವಾಗಿದೆ.

ಐಶ್ವರ್ಯ ಮಂಚನಹಳ್ಳಿ, ಎಐಸಿಸಿ ವಕ್ತಾರರು

Advertisement

Udayavani is now on Telegram. Click here to join our channel and stay updated with the latest news.

Next