Advertisement

ಕುಸಿದ ಕುಕ್ಕುಜೆ ಸೇತುವೆಗೆ ಶಾಶ್ವತ ಪರಿಹಾರದ ಭರವಸೆ

08:12 AM Jun 06, 2020 | mahesh |

ಬೆಳ್ತಂಗಡಿ: ನಾರಾವಿ ಗ್ರಾ.ಪಂ.ಗೆ ಒಳಪಟ್ಟ ಕುತ್ಲೂರು ಗ್ರಾಮದ ಕುಕ್ಕುಜೆ ಯಲ್ಲಿ ಮೇ 28ರಂದು ಕುಸಿದು ಬಿದ್ದ ಕುಕ್ಕುಜೆ ಸೇತುವೆಗೆ ಮುಂದಿನ ವರ್ಷ 3 ಕೋ.ರೂ. ವೆಚ್ಚದಲ್ಲಿ ಶಾಶ್ವತ ಸಂಪರ್ಕ ಸೇತುವೆ ನಿರ್ಮಿ ಸಲು ಕ್ರಿಯಾಯೋಜನೆ ರೂಪಿಸುವಂತೆ ಸಚಿವ ಈಶ್ವರಪ್ಪ ಭರವಸೆ ನೀಡಿದ್ದಾರೆ ಎಂದು ಶಾಸಕ ಹರೀಶ್‌ ಪೂಂಜ ತಿಳಿಸಿದ್ದಾರೆ.

Advertisement

ಕುಸಿದು ಬಿದ್ದ ಕುಕ್ಕುಜೆ-ಅಳಂಬ ಸಂಪರ್ಕ ಸೇತುವೆ ಸ್ಥಳಕ್ಕೆ ಶುಕ್ರವಾರ ಸಂಜೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಹರೀಶ್‌ ಪೂಂಜ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಳೆದ ವರ್ಷ ಸೇತುವೆ ಸಂಪೂರ್ಣ ಕುಸಿದಿರುವ ವಿಚಾರ ನನ್ನ ಗಮನಕ್ಕೆ ಬಂದಿತ್ತು. ಈ ವಿಚಾರವನ್ನು ಸಚಿವ ಈಶ್ವರಪ್ಪ ಅವರ ಗಮನಕ್ಕೆ ತಂದಿದ್ದೇನೆ. ಮಳೆಗಾಲದ ಬಳಿಕ ಗ್ರಾಮ್‌ ಸಡಕ್‌ ಯೋಜನೆಯಡಿ 3 ಕೋಟಿ ರೂ. ವೆಚ್ಚದ ಸೇತುವೆ ಹಾಗೂ 2 ಕೋಟಿ ರೂ. ವೆಚ್ಚದ ಸುಸಜ್ಜಿತ ಸಂಪರ್ಕ ರಸ್ತೆ ರಚಿಸಲು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

ಮೋರಿ ಬಳಸಿ ತಾತ್ಕಾಲಿಕ ರಸ್ತೆ
ಸೇತುವೆ ಕುಸಿದಿದ್ದರಿಂದ ಅಳಂಬ ವ್ಯಾಪ್ತಿಯಲ್ಲಿ ವಾಸಿಸುವ 160 ಅಧಿಕ ಕುಟುಂಗಳು ಜನರಿಗೆ ಮಳೆಗಾಲದಲ್ಲಿ ಸಂಚರಿಸಲು ಸಾಧ್ಯವಾಗದೆ ಅತಂತ್ರವಾಗ ಲಿದೆ. ಈ ನಿಟ್ಟಿನಲ್ಲಿ ಅಗತ್ಯವಾಗಿ ತಾತ್ಕಾಲಿಕ ಮೋರಿ ಬಳಸಿ 5 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಮುಗ್ರೋಡಿ ಕನ್‌ಸ್ಟ್ರಕ್ಷನ್‌ ಅವರ ಬಳಿ ಮಾತುಕತೆ ನಡೆಸಿ ಮುಂಗಡ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದರು.

ಗುತ್ತಿಗೆದಾರರಾದ ಸುಧಾಕರ್‌ ಶೆಟ್ಟಿ, ಎಂಜಿನಿಯರ್‌ ಉದಯ್‌ ಕುಮಾರ್‌, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌, ನಾರಾವಿ ಗ್ರಾ. ಪಂ. ಸದಸ್ಯ ಉದಯ್‌ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಭಟ್‌, ನಾರಾವಿ ಗ್ರಾಮ ಪಂಚಾಯತ್‌ ಸದಸ್ಯೆ ಪ್ರಮೀಳಾ ಭಟ್‌, ರವೀಶ್‌ ಕುತ್ಲೂರು, ರತ್ನಾಕರ್‌ ಸಾಲ್ಯಾನ್‌, ತುಂಗಪ್ಪ ಪೂಜಾರಿ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next