Advertisement

ಕೊಟ್ಟ ಭರವಸೆ 11, ಈಡೇರಿದ್ದು ಸೊನ್ನೆ!

08:58 AM Jun 18, 2019 | Suhan S |

ರಾಣಿಬೆನ್ನೂರು: ನಾಡ ದೊರೆಯೇ ಗ್ರಾಮಕ್ಕೆ ಬಂದು ವಾಸ್ತವ್ಯ ಮಾಡುವುದರಿಂದ ಗ್ರಾಮದ ಸಮಸ್ಯೆಗಳೆಲ್ಲ ಪರಿಹಾರವಾಗಲಿವೆ. ನಮ್ಮೆಲ್ಲ ಬೇಡಿಕೆಗಳು ಈಡೇರಲಿವೆ ಎಂದು ಭಾವಿಸಿದ್ದೇವು. ಆದರೆ, ಯಾವ ಪ್ರಮುಖ ಬೇಡಿಕೆಯೂ ಈಡೇರದೆ ನಮ್ಮ ನಿರೀಕ್ಷೆಗಳೆಲ್ಲ ಹುಸಿಯಾದವು.

Advertisement

-ಇದು ಎಚ್.ಡಿ. ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದ್ದ ರಾಣಿಬೆನ್ನೂರು ತಾಲೂಕು ಚಳಗೇರಿ ಗ್ರಾಮಸ್ಥರ ಅಸಮಾಧಾನದ ನುಡಿ. ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 17-3-2007ರಂದು ರಾಣಿಬೆನ್ನೂರು ತಾಲೂಕಿನ ಚಳಗೇರಿಯಲ್ಲಿ ವಾಸ್ತವ್ಯ ಮಾಡಿದ್ದರು. ಗ್ರಾಮದ ರಾಯಪ್ಪ ತೆಂಬದ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಬಳಿಕ ಗ್ರಾಮದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದರು. ಬೆಳಗಿನ ಜಾವ ಕೇವಲ ಒಂದು ತಾಸು ನಿದ್ರೆ ಮಾಡಿ ತೆರಳಿದ್ದರು.

ಅಹವಾಲು ಆಲಿಕೆ ಸಂದರ್ಭದಲ್ಲಿ ಗ್ರಾಮದ ಯುವಕರು ತಮ್ಮ ಗ್ರಾಮಕ್ಕೆ ಐಟಿಐ ಕಾಲೇಜು, ಕೆರೆ ತುಂಬಿಸುವುದು, ರಸ್ತೆ, ಸೇರಿದಂತೆ 11 ಬೇಡಿಕೆಗಳನ್ನು ಇಟ್ಟಿದ್ದರು. ಆಗ ಕುಮಾರಸ್ವಾಮಿ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಅದರಲ್ಲಿ ಒಂದೇ ಒಂದು ಬೇಡಿಕೆ ಸಹ ಈಡೇರದಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿಸಿದೆ.

ಮಾಸಾಶನ ಬೇಡಿಕೆ ಇತ್ಯರ್ಥ: ಅಹವಾಲು ಆಲಿಕೆ ಸಂದರ್ಭದಲ್ಲಿ ಸೇರಿದ್ದ ಗ್ರಾಮಸ್ಥರದಲ್ಲಿ ಅನೇಕರು ವಿಧವಾ ವೇತನ, ವೃದ್ಧಾಪ್ಯ, ವಿಕಲಚೇತನ ಮಾಸಾಶನದಂಥ ವೈಯಕ್ತಿಕ ಬೇಡಿಕೆ ಹೆಚ್ಚು ಪ್ರಮಾಣದಲ್ಲಿ ಪ್ರಸ್ತಾಪಿಸಿದ್ದರು. ಈ ಬೇಡಿಕೆಗಳನ್ನು ಈಡೇರಿಸಿರುವುದೇ ಸಿಎಂ ಗ್ರಾಮ ವಾಸ್ತವ್ಯದ ಪ್ರಮುಖ ಫಲವಾಯಿತು. ಆದರೆ, ಮೂಲ ಸೌಲಭ್ಯಗಳಿಂದ ವಂಚಿತ ಚಳಗೇರಿಯಲ್ಲಿ ರಸ್ತೆಗಳ ಅಭಿವೃದ್ಧಿ, ಚರಂಡಿಗಳ ನಿರ್ಮಾಣ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಬಡವರಿಗೆ ಮನೆ ಕಲ್ಪಿಸಬೇಕು ಎಂಬ ಬೇಡಿಕೆ ಸಿಎಂ ವಾಸ್ತವ್ಯದ ಬಳಿಕ ವಾಸ್ತವಕ್ಕೆ ಬರಲೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next