Advertisement
ಇದು ಶಾಸಕ ಯೋಗೀಶ್ ಭಟ್ ಅವರ ಕನಸಿನ ಯೋಜನೆ. ಪ್ರವಾಸೋದ್ಯ ಮಕ್ಕೆ ಒತ್ತು ನೀಡಲು 2010ರ ಆ.23 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯೋಜನೆಗೆ ಮೊದಲ ಬಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಮೂರು ವರ್ಷದ ಬಳಿಕ 2013ರಲ್ಲಿ ಆಗಿನ ಜಿಲ್ಲಾ ಉಸ್ತುವಾಗಿ ಸಚಿವ ಸಿ.ಟಿ. ರವಿ ಮತ್ತೆ ಶಿಲಾನ್ಯಾಸ ನೆರವೇರಿಸಿದ್ದರು. ಆರಂಭದಲ್ಲಿ 3 ಮೀಟರ್ ಆಗಲ ಹಾಗೂ 410 ಮೀ. ಉದ್ದದ ತೂಗು ಸೇತುವೆ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಿತ್ತು. ಬಳಿಕ ಇದು 10 ಅಡಿಗೆ ವಿಸ್ತರಣೆಯಾಗಿ ಯೋಜನಾ ವೆಚ್ಚ 12 ಕೋಟಿ. ರೂ.ಗೆ ತಲುಪಿತು. 2012ರಲ್ಲಿ ಟೆಂಡರ್ ಪ್ರಕ್ರಿಯೆ ನಡೆದು,ದ.ಕ. ನಿರ್ಮಿತಿ ಕೇಂದ್ರದ ಮೂಲಕ ಸಂಸ್ಥೆಯೊಂದಕ್ಕೆ ಯೋಜನೆ ನೀಡಲಾಯಿತು. ಆದರೆ ಯೋಜನೆಗೆ ಸರಕಾರದಿಂದ ಅನುದಾನ ಬಿಡುಗಡೆಯಾಗುವಲ್ಲಿ ವಿಳಂಬವಾದ ಕಾರಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಿದರೂ ಬಳಿಕ ಕಡತವೇ ಮುಂದೆ ಸಾಗಲಿಲ್ಲ.