Advertisement
ಕಳೆದ ಎರಡು ವರ್ಷಗಳ ಹಿಂದೆ ತುಳು ಚಲನಚಿತ್ರ ನಿರ್ಮಾಪಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಈಗಾಗಲೇ ಅನೇಕ ಮಂದಿ ನಿರ್ದೇ ಶಕರು ಇದರ ಸದಸ್ಯರಾಗಿದ್ದಾರೆ. ಸಂಘದ ಅನೇಕ ಮಂದಿ ಹಿರಿಯರು ಈಗಾಗಲೇ ಕೆಲ ನಿಯಮಗಳನ್ನು ರೂಪಿಸಿದ್ದಾರೆ. ಇದರ ಪ್ರಕಾರ ತುಳು ಭಾಷೆಯಲ್ಲಿ ವಾರದಲ್ಲಿ ಒಂದೇ ಚಲನ ಚಿತ್ರಗಳು ಬಿಡುಗಡೆ ಮಾಡಬೇಕು. ಒಂದು ಚಲನಚಿತ್ರದಿಂದ ಮತ್ತೂಂದು ಚಲನಚಿತ್ರ ಬಿಡು ಗಡೆಗೆ ಕನಿಷ್ಠ ಮೂರು ವಾರಗಳ ಅಂತರ ವಿರಬೇಕು. ಯಾವ ಚಲನಚಿತ್ರ ಮೊದಲು ಸೆನ್ಸಾರ್ ಆಗಿದೆಯೋ ಆ ಚಿತ್ರ ಬಿಡುಗಡೆಗೆ ಪ್ರಾಶಸ್ತÂ ನೀಡಬೇಕು ಎಂಬ ನಿಯಮ ಮಾಡಿದೆ. ಆದರೆ ಈ ನಿಯಮವನ್ನು ಇತ್ತೀಚಿನ ಕೆಲ ನಿರ್ದೇಶಕರು ಗಾಳಿಗೆ ತೂರುತ್ತಿರುವುದು ನಿರ್ಮಾಪಕ ಸಂಘದ ವೈಮನಸ್ಸಿಗೆ ಕಾರಣವಾಗಿದೆ.
ಡಿಜಿಟಲ್ ಸೇವಾ ಪೂರೈಕೆದಾರರಿಂದ ವಿಧಿಸಲಾಗಿರುವ ವರ್ಚುವಲ್ ಮುದ್ರಣ ಶುಲ್ಕ (ವಿಪಿಎಫ್) ವಿರೋಧಿಸಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದು, ಈ ಸಮಯದಲ್ಲಿ ದ.ಭಾರತದ ಯಾವುದೇ ಹೊಸ ಚಲನಚಿತ್ರಗಳು ಬಿಡುಗಡೆಗೆ ದಿನಾಂಕ ನಿಗದಿಪಡಿಸುವಂತಿಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಸೂಚನೆ ನೀಡಿದೆ. ಆದರೆ ಈ ಸಮಯದಲ್ಲಿ ಅಪ್ಪೆ ಟೀಚರ್ ಮತ್ತು ತೊಟ್ಟಿಲು ಚಲನಚಿತ್ರಗಳು ಬಿಡುಗಡೆ ದಿನಾಂಕ ನಿಗದಿಪಡಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
Related Articles
Advertisement
ಯಾಕಿಷ್ಟು ಪೈಪೋಟಿ? ಒಂದೇ ದಿನದಲ್ಲಿ 2 ತುಳು ಚಲನಚಿತ್ರ ಬಿಡುಗಡೆಯಾಗಲೂ ಕಾರಣವಿದೆ. ಏಕೆಂದರೆ, ಮುಂದಿನ ದಿನಗಳಲ್ಲಿ ಹೈಬಜೆಟ್
ಕನ್ನಡ ಚಲನಚಿತ್ರಗಳು ಬಿಡುಗಡೆ ಯಾಗಲಿವೆ. ಆ ವೇಳೆಯಲ್ಲಿ ಚಿತ್ರಮಂದಿರಗಳ ಸಮಸ್ಯೆ ಕಂಡು ಬರಬಹುದು. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಐಪಿಎಲ್, ಸಿಪಿಎಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಬಳಿಕ ಚುನಾ ವಣೆ ನಡೆಯಲಿದೆ. ಈ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮಾ. 23 ರಂದು 2 ಚಿತ್ರ ಬಿಡುಗಡೆಗೆ ಪಟ್ಟುಹಿಡಿಯಲಾಗುತ್ತಿದೆ. “ಅಪ್ಪೆ ಟೀಚರ್ ಚಲನಚಿತ್ರ ಕಳೆದ ಗುರುವಾರ ಸೆನ್ಸಾರ್ ಆಗಿ ಯು/ಎ ಪ್ರಮಾಣ ಪತ್ರ ದೊರೆತಿದೆ. ಸೋಮವಾರದಂದು ಸೆನ್ಸಾರ್ ಪ್ರಮಾಣಪತ್ರ ಸಿಗಲಿದೆ. “ತೊಟ್ಟಿಲು’ ಚಲನಚಿತ್ರ ಸೆನ್ಸಾರ್ ಆಗಿ 4 ತಿಂಗಳುಗಳು ಕಳೆದಿದ್ದು, ನಮ್ಮ ಚಲನಚಿತ್ರ ಬಿಡುಗಡೆ ಸಮಯದಲ್ಲಿಯೇ ದಿನಾಂಕ ನಿಗದಿ ಪಡಿಸಿದ್ದು ಸರಿಯಲ್ಲ.’
– ಕಿಶೋರ್ ಮೂಡಬಿದಿರೆ,
ಅಪ್ಪೆ ಟೀಚರ್ ಚಲನಚಿತ್ರ ನಿರ್ದೇಶಕ “ನಮ್ಮ ಚಿತ್ರ 4 ತಿಂಗಳ ಹಿಂದೆಯೇ ಸೆನ್ಸಾರ್ ಆಗಿದೆ. ಆದ್ದರಿಂದ ಮಾ.23ರಂದು ಬಿಡುಗಡೆ ಮಾಡಲಿದ್ದೇವೆ. ಈ ಬಗ್ಗೆ ಸಂಘದ ಗಮನಕ್ಕೆ ತಂದಿದ್ದೇವೆ.’
– ಪ್ರಜ್ವಲ್ ಕುಮಾರ್ ಅತ್ತಾವರ,
ತೊಟ್ಟಿಲು ಚಲನಚಿತ್ರದ ನಿರ್ದೇಶಕ “ಎರಡೂ ಚಿತ್ರತಂಡದವರು ಸಮಸ್ಯೆ ಬಗೆಹರಿಸುವಂತೆ ನಿರ್ಮಾಪಕರ ಸಂಘಕ್ಕೆ ಯಾವುದೇ ಲಿಖೀತ ಮನವಿ ನೀಡಲಿಲ್ಲ. ಮನವಿ ನೀಡಿದರೆ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತೇವೆ. ವಿಪಿಎಫ್ ವಿರೋಧಿಸಿ ಈಗಾಗಲೇ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ದಿನಾಂಕ ನಿಗದಿ ಮಾಡಿದ್ದು ತಪ್ಪು. ತುಳು ಚಲನಚಿತ್ರ ರಂಗವನ್ನು ಮುಜುಗರಕ್ಕೆ ಒಳಪಡಿಸದಿದ್ದರೆ ಸಾಕು.’
– ರಾಜೇಶ್ ಬ್ರಹ್ಮಾವರ,
ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ