Advertisement

ಸಮಸ್ಯೆಗೆ ಸಂಘಟನಾತ್ಮಕ ಪರಿಹಾರ ಅಗತ್ಯ

10:00 AM Jun 24, 2019 | Team Udayavani |

ಗದಗ: ಸಾರ್ವಜನಿಕ ವಲಯದಲ್ಲಿ ಅಧಿಕ ಕಾರ್ಯಭಾರ ಹಾಗೂ ಒತ್ತಡದೊಂದಿಗೆ ಕೆಲಸ ಮಾಡುವ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಶಾಂತಿ, ಸಮಾಧಾನ ಅತ್ಯವಶ್ಯಕವಾಗಿ ಬೇಕು ಎಂದು ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಮಹೇಶ ಹಿರೇಮಠ ಹೇಳಿದರು.

Advertisement

ಸರಕಾರಿ ನೌಕರರ ಭವನದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ನೌಕರರು ಪರಸ್ಪರ ಸಮಸ್ಯೆ ಹಂಚಿಕೊಂಡು ಸಂಘಟನಾತ್ಮಕವಾಗಿ ಬಗೆಹರಿಸಿಕೊಳ್ಳಬೇಕು. ಪಿಡಿಒಗಳು ಹೆಚ್ಚೆಚ್ಚು ಸಂಘಟಿತರಾಗಿ ಸಂಘಟನೆ ಬಲಪಡಿಸಬೇಕು ಎಂದು ಕರೆ ನೀಡಿದರು.

ಪಿಡಿಒ ಎಸ್‌.ವೈ. ಕುಂಬಾರ ಮಾತನಾಡಿ, ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸರಕಾರದ ಯೋಜನೆಗಳಿಗೆ ಅರ್ಹರಿಗೆ ತಲುಪಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಬೇಕು. ಪ್ರತಿ ತಿಂಗಳು ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಸಭೆ ಆಯೋಜಿಸುವ ಮೂಲಕ ನೌಕರರ ಸಮಸ್ಯೆ ಹಾಗೂ ಅಭಿವೃದ್ಧಿ ಚಿಂತನೆಗಳ ಕುರಿತು ಚರ್ಚಿಸಬೇಕು ಎಂದು ಹೇಳಿದರು.

ಎಚ್.ಎಸ್‌. ಚಟ್ರಿ, ಪಿಡಿಒಗಳಾದ ಕುಮಾರ ಪ್ರಜಾರ, ಗೋವಿಂದರೆಡ್ಡಿ ಕಿಲುಬನವರ, ರುದ್ರಪ್ಪ ಬಾವಿ, ಸವಿತಾ ಸೋಮಣ್ಣವರ, ಸಂಜಯ ಚೌಡಾಳ, ಶಿಲ್ಪಾ ಕವಲೂರ, ಬೀರಣ್ಣ ಅಮ್ಮನವರ, ಬಸವರಾಜ ಬಳೂಟಗಿ, ಚೆನ್ನಪ್ಪ ಇಮ್ರಾಪುರ ಇದ್ದರು.

Advertisement

ಪದಾಧಿಕಾರಿಗಳ ಆಯ್ಕೆ: ಇದೇ ಸಂದರ್ಭದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಸಂಜಯ ಚೌಡಾಳ, ಉಪಾಧ್ಯಕ್ಷರಾಗಿ ಶಿವನಗೌಡ ಮೆಣಸಗಿ, ಸವಿತಾ ಸೋಮಣ್ಣವರ, ಪ್ರಧಾನ ಕಾರ್ಯದರ್ಶಿ ಎಸ್‌.ವೈ. ಕುಂಬಾರ, ಖಜಾಂಚಿಯಾಗಿ ಮಂಜುನಾಥ ಗಣಿ, ಸಂಘಟನಾ ಕಾರ್ಯದರ್ಶಿಯಾಗಿ ವಾಸುದೇವ ಪೂಜಾರ, ಚೆನ್ನಪ್ಪ ಇಮ್ರಾಪುರ, ಸಹ ಕಾರ್ಯದರ್ಶಿಯಾಗಿ ಯಲ್ಲಪ್ಪಗೌಡ ಸಂಕನಗೌಡ್ರ, ಲತಾ ಮಾನೆ, ಬಸವರಾಜ ಬಳೂಟಗಿ ಅವರನ್ನು ಆಯ್ಕೆ ಮಾಡಲಾಯಿತು. ಗದಗ ತಾಲೂಕು ಸಮಿತಿ ಅಧ್ಯಕ್ಷರನ್ನಾಗಿ ಗೋವಿಂದರೆಡ್ಡಿ ಕಿಲುಬನವರ, ಉಪಾಧ್ಯಕ್ಷರಾಗಿ ಬಿ.ಎನ್‌. ಬಚೇನಹಳ್ಳಿ, ಲತಾ ಮಾನೆ, ಪ್ರಧಾನ ಕಾರ್ಯದರ್ಶಿಯಾಗಿ ಕುಮಾರ ಪೂಜಾರ, ಸಹಾಯಕ ಕಾರ್ಯದರ್ಶಿಯಾಗಿ ಮಾಲತೇಶ ಮೇವುಂಡಿ, ಸಂಘಟನಾ ಕಾರ್ಯದರ್ಶಿ ವಾಸುದೇವ ಪ್ರಜಾರ, ಖಜಾಂಚಿಯಾಗಿ ಎಸ್‌.ವೈ. ಕುಂಬಾರ, ಸಹ ಕಾರ್ಯದರ್ಶಿಯಾಗಿ ರೆಹಮತ್‌ಬಾನು ಕಿರೇಸೂರ, ಶಿವಲೀಲಾ ಅಂಗಡಿ ಅವರನ್ನು ಆಯ್ಕೆ ಮಾಡಲಾಯಿತು.

ಮಾಲತೇಶ ಮೇವುಂಡಿ ನಿರೂಪಿಸಿದರು. ಕುಮಾರ ಪೂಜಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next