Advertisement

ವಯಸ್ಕರಲ್ಲಿ ಒಂಟಿತನದ ಸಮಸ್ಯೆ

03:43 PM Nov 29, 2019 | mahesh |

“ಮುಪ್ಪಿನಲ್ಲಿ ಬಿಳಿ ಕೂದಲಿನ ಅನುಭವವು ಯಾವ ಪುಸ್ತಕದಲ್ಲೂ ಸಿಗದು. “”60ಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನರಿಗೆ ಹಿರಿಯ ನಾಗರಿಕರು ಅಥವಾ ವಯೋವೃದ್ಧ ಎನ್ನುತ್ತಾರೆ. 2050ರ ಹೊತ್ತಿಗೆ. ವಿಶ್ವದ ಜನಸಂಖ್ಯೆ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಒಟ್ಟು 2 ಬಿಲಿಯನ್‌ ಆಗುವ ನಿರೀಕ್ಷೆಯಾಗಿದೆ. ಇದು 2015ರಲ್ಲಿ 900 ಮಿಲಿಯನ್‌ಗಿಂತ ಹೆಚ್ಚಾಗಿದೆ. ಇಂದು 125 ಮಿಲಿಯನ್‌ ಜನರು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಓರ್ವ ವ್ಯಕ್ತಿಯು ವಯಸ್ಸಾದಂತೆ ಅವರು ಹಲವಾರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವು ಅನೇಕ ಅಂಶಗಳಿಂದ ಉಂಟಾಗುತ್ತವೆ. “ಒಂಟಿತನವು’ ವಯಸ್ಸಾದ ಜನರು ಎದುರಿಸುತ್ತಿರುವ ಅಂತಹ ಒಂದು ಮಾನಸಿಕ ಸಮಸ್ಯೆಯಾಗಿದೆ. ಒಂದು ಶತಕೋಟಿಗೂ ಹೆಚ್ಚು ಜನರಿರುವ ಭಾರತದಲ್ಲಿ ಪ್ರತಿ ಇಬ್ಬರು ವೃದ್ಧರಲ್ಲಿ ಓರ್ವರು ಒಂಟಿತನದಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆಗಳು ಕಂಡುಹಿಡಿದಿವೆ. ಈ ಕಾರಣದಿಂದಾಗಿ ಭಾರತದ ಶೇ. 21.9 ಹಿರಿಯರು ಖನ್ನತೆಯಿಂದ ಬಳಲುತ್ತಿದ್ದಾರೆ.

Advertisement

ಸಮಾಜದಲ್ಲಿ ಜನರು ತಮ್ಮನ್ನು ತಾವು ಚಟುವಟಿಕೆಗಳಲ್ಲಿ ಭಾಗವಹಿಸದೇ ಇನ್ನೊಬ್ಬರೊಂದಿಗೆ ವ್ಯಕ್ತಿತ್ವವನ್ನು ವ್ಯಕ್ತಪಡಿಸದೇ ಸಮಾಜದಿಂದ ಬೇರ್ಪಡೆದು ಒಂಟಿತನವನ್ನು ಅನುಭವಿಸುತ್ತಾರೆ. ಹೀಗೆ ಮಾಡುವುದರಿಂದ ಜನರ ಗೆಳೆತನವನ್ನು ಕಳೆದುಕೊಂಡು, ಖನ್ನತೆಗೊಳಗಾಗಿ ಒಬ್ಬಂಟಿಯಾಗುತ್ತಾರೆ. ಇದರ ಪರಿಣಾಮದಿಂದಾಗಿ ಆಧುನಿಕ ಪ್ರಪಂಚದ ಜೀವನ ಚಕ್ರದಲ್ಲಿ ಸಿಲುಕಿ, ತಮ್ಮ ಜೀವನದ ಬಹುಮುಖ್ಯ ಅಂಗವಾಗಿರುವ ಸಂತೋಷವನ್ನೇ ಮರೆತುಬಿಡುತ್ತಾರೆ.

ಒಂಟಿತನವು ದೈಹಿಕವಾಗಿ ಕಾಣುವಂತಹ ಸ್ಥಿತಿ ಅಲ್ಲ. ಅದು ಒಂದು ಸಂಕೀರ್ಣ ಹಾಗೂ ಅಹಿತಕರವಾದ ಭಾವನಾತ್ಮಕ ಪ್ರತಿಕ್ರಿಯೆ. ಒಂಟಿತನವು ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಕಡೆಗಣಿಸುವ ಸಮಸ್ಯೆಯಲ್ಲ. ಏಕೆಂದರೆ ಮುಂದೆ ಅದು ಕೂಡ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.

ನಮ್ಮ ದೈನಂದಿನ ಜೀವನದಲ್ಲಿ ಅಡ್ಡಿಯಾಗುವವರೆಗೂ ನಮ್ಮ ಕಣ್ಣಿಗೆ ಅದು ಒಂದು ಸಣ್ಣ ವಿಷಯವಾಗುತ್ತದೆ. ಸಾಮಾನ್ಯವಾಗಿ ಎಲ್ಲ ವರ್ಗಗಳ ಜನರು ಒಂಟಿತನವನ್ನು ಅನುಭವಿಸಬಹುದು. ವಿಶೇಷವಾಗಿ ವಯಸ್ಸಾದ ಜನರು ಹೆಚ್ಚಿನ ಅಪಾಯದಲ್ಲಿರುತ್ತಾರೆ. ಒಬ್ಬರೇ ವಾಸಿಸುತ್ತಿರುವುದರಿಂದ. ಮನೆಯವರೊಂದಿಗೆ ಸಂಪರ್ಕದ ಕೊರತೆಯಿಂದಾಗಿ ಸ್ನೇಹಿತರೊಂದಿಗೆ ಸಂಪರ್ಕ ಸಡಿಲಗೊಳ್ಳುವುದು ಮುಂತಾದವುಗಳೆಲ್ಲ ಏಕಾಂಗಿತನವನ್ನು ಅನುಭವಿಸಲು ಕಾರಣವಾಗಿರುತ್ತವೆ. ಈ ಮುಂತಾದ ಕಾರಣಗಳಿಂದಾಗಿ ಜನರು ಸಮುದಾಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿಫ‌ಲರಾಗುತ್ತಾರೆ.

ಒಂಟಿತನ ಹಾಗೂ ಒಕ್ಯೂಪೇಶನಲ್‌ ಥೆರಪಿ
ಒಂಟಿತನವನ್ನು ದೂರ ಮಾಡಲು ಒಕ್ಯೂಪೇಶನಲ್‌ ಥೆರಪಿಸ್ಟ್‌ಗಳಿಂದ ಸಹಾಯ ಪಡೆಯಬಹುದು. ಒಕ್ಯೂಪೇಶನಲ್‌ ಥೆರಪಿಸ್ಟ್‌ ಗಳು ವಯಸ್ಕರಿಗೆ ದೈನಂದಿನ ಜೀವನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ, ವಿವಿಧ ರೀತಿಯ ಮನಸ್ಸಿಗೆ ಹಿತವನ್ನು ನೀಡುವ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರ ಆಸಕ್ತಿ ಹಾಗೂ ಹವ್ಯಾಸಗಳನ್ನು ಅನ್ವೇಷಿಸುವ ಮೂಲಕ ಹಲವಾರು ಹಿರಿಯ ನಾಗರಿಕ ಕ್ಲಬ್‌ಗಳ ಹಾಗೂ ಸಂಘಗಳಿಗೆ ಸಲಹೆ ನೀಡುವ ಮೂಲಕ ಒಂಟಿತನವನ್ನು ತಡೆಯುವ ತಂತ್ರಗಳನ್ನು ಹುಡುಕುವಲ್ಲಿ ಸಹಾಯ ಮಾಡುವರು.

Advertisement

ದಿನನಿತ್ಯದ ಕೆಲಸಗಳನ್ನು ಯಾವುದೇ ರೀತಿಯ ಅಡೆತಡೆ ಉಂಟಾಗದೆ ದಿನಾಲೂ ಮಾಡುವುದರಿಂದ ವಯಸ್ಸಾದ ವಯಸ್ಕರ ಸಮಯವನ್ನು ಸಕ್ರಮಗೊಳಿಸುವಂತೆ ಮಾಡುವುದರಲ್ಲಿ ಒಕ್ಯೂಪೇಶನಲ್‌ ಥೆರಪಿಸ್ಟ್‌ ಗಳ ಪಾತ್ರವೂ ಅತೀ ಮುಖ್ಯವಾಗಿದೆ. ಅದಲ್ಲದೆ ಸಾಮಾಜಿಕ ಜೀವನದೊಂದಿಗೆ ಸಂಯೋಜಿಸಲು ಸಹಾಯ ಮಾಡುತ್ತಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಮಾಜದಿಂದ ಬೇರ್ಪಡುವುದನ್ನು ತಡೆಯಬಹುದು. ಸಮಾರಂಭಗಳಲ್ಲಿ ಮತ್ತು ಹಿರಿಯ ನಾಗರಿಕ ಸಂಘಗಳಲ್ಲಿ ಭಾಗವಹಿಸುವ ಮೂಲಕ ಗೆಳೆಯರೊಂದಿಗೆ ಬೆರೆತು ತಮ್ಮ ಸಮಯವನ್ನು ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬಳಸಿಕೊಂಡು ತಮ್ಮ ಮನೋಭಾವನೆಗಳನ್ನು ಈಡೇರಿಸಿಕೊಳ್ಳಬಹುದು. ತಮ್ಮನ್ನು ತಾವು ಸ್ವಯಂ ಸೇವೆಯಲ್ಲಿ ಬಳಸುವುದರಿಂದ ಸಮಾಜದಿಂದ ಬೇರ್ಪಡುವುದನ್ನು ತಡೆಯಬಹುದು. ಇದರಿಂದಾಗಿ ಪೀಳಿಗೆಗಳ ನಡುವೆ ಇರುವ ಅಂತರವನ್ನು ದೂರ ಮಾಡಬಹುದು. ಅಷ್ಟು ಮಾತ್ರವಲ್ಲದೆ ತಮ್ಮ ಮೇಲಿನ ಅಭಿಪ್ರಾಯವನ್ನು ಸಕಾರಾತ್ಮಕವಾಗಿ ಬದಲಾಯಿಸಿ ಮಾನಸಿಕ ಅನಾರೋಗ್ಯ ಮತ್ತು ಖನ್ನತೆಯನ್ನು ತಡೆಗಟ್ಟಬಹುದು.

ಒಕ್ಯೂಪೇಶನಲ್‌ ಥೆರಪಿಸ್ಟ್‌ಗಳು ಸಮಸ್ಯೆಯಲ್ಲಿರುವ ವಯಸ್ಸಾದ ವ್ಯಕ್ತಿಗಳಿಗೆ ಹೊಸ ವಿರಾಮ ಚಟುವಟಿಕೆಗಳಲ್ಲಿ ಅಥವಾ ಅವರು ಇಷ್ಟಪಡುವ ವಿರಾಮ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹಾಯ ಮಾಡುತ್ತಾರೆ. ಪ್ರತಿಯೊರ್ವ ವ್ಯಕ್ತಿಯ ಜೀವನದಲ್ಲಿ ಬಿಡುವಿನ ಸಮಯವಂತೂ ಇದ್ದೇ ಇರುತ್ತದೆ.

ಈ ಸಮಯವನ್ನು ಹೆಚ್ಚಾಗಿ ಎಲ್ಲರೂ ಅವರು ಇಷ್ಟಪಡುವಂತಹ ಚಟುವಟಿಕೆಗಳಲ್ಲಿ ಭಾಗವಹಿಸಲು ಮೀಸಲಿಡುತ್ತಾರೆ. ಆದರೆ ಹಲವಾರು ಕಾರಣಗಳಿಂದಾಗಿ ಹೀಗೆ ಮಾಡಲು ಅಸಾಧ್ಯವಾಗಬಹುದು. ವಿರಾಮ ಚಟುವಟಿಕೆಗಳು ಮತ್ತು ಇಷ್ಟ – ಕಷ್ಟಗಳು, ಓರ್ವ ವ್ಯಕ್ತಿಯಿಂದ ಇನ್ನೋರ್ವವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರಿಗೆ ಅಡುಗೆ ಮಾಡುವುದು ವಿರಾಮ ಚಟುವಟಿಕೆಯಾಗಿದ್ದರೆ. ಇನ್ನು ಕೆಲವರಿಗೆ ತೋಟಗಾರಿಕೆ, ಆದ್ದರಿಂದ ವೃದ್ಧರಲ್ಲಿ ತಮ್ಮ ವಿರಾಮ ಚಟುವಟಿಕೆಗಳನ್ನು ಅನ್ವೇಷಿಸುವಲ್ಲಿ ಒಕ್ಯೂಪೇಶನಲ್‌ ಥೆರಪಿಸ್ಟ್‌ ಗಳು ಸಹಾಯವಾಗುತ್ತಾರೆ.

ಒಂಟಿತನದ ಲಕ್ಷಣಗಳು
ನಿದ್ರಾಹೀನತೆ
ಶಕ್ತಿ ಕಡಿಮೆಯಾಗುವುದು
ಹಸಿವು ಕಡಿಮೆಯಾಗುವುದು
ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಭಾವಿಸುವುದು
ಚಡಪಡಿಕೆಯ ಭಾವನೆ

ಒಂಟಿತನಕ್ಕೆ ಮುಖ್ಯವಾದ ಕಾರಣಗಳೆಂದರೆ
ನಿವೃತ್ತಿ
ಸಂಗಾತಿಯ ಮರಣ
ಸ್ನೇಹಿತರೊಂದಿಗೆ ಸಂಪರ್ಕ ಕಡಿತಗೊಳ್ಳುವುದು
ಅನಾರೋಗ್ಯ
ಮಕ್ಕಳು ಹೆತ್ತವರಿಂದ ದೂರವಾಗುವುದು
ವಾತಾವರಣದ ಬದಲಾವಣೆ
ಬೇರೆಯವರಿಗೆ ಹೊರೆಯಾಗುವ ಭಯ.

ಒಂಟಿತನದ ಪರಿಣಾಮಗಳು
ದೀರ್ಘ‌ಕಾಲದ ಅನಾರೋಗ್ಯ
ನಿದ್ರೆಯ ಗುಣಮಟ್ಟದಲ್ಲಿ ಬದಲಾವಣೆ
ಖನ್ನತೆ
ಒತ್ತಡ
ಇತರರೊಂದಿಗೆ ಬೆರೆಯುವುದು ಕಷ್ಟಕರವಾಗುವುದು
ಹೃದಯ ಕಾಯಿಲೆಗಳು ಹೆಚ್ಚುವುದು
ಹೆಚ್ಚಿನ ಅನಾರೋಗ್ಯಕರ ನಡವಳಿಕೆಗಳಿಗೆ ದಾರಿ ಮಾಡುವುದು.

ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಜನರು ಭಜನ ಮಂಡಳಿಗಳಿಗೆ, ಚರ್ಚ್‌ ಗುಂಪುಗಳಿಗೆ ಮತ್ತು ಧಾರ್ಮಿಕ ಗುಂಪುಗಳಿಗೆ ಸೇರಬಹುದು. ಇದರಿಂದಾಗಿ ಅವರು ಹೊಸ ಹೊಸ ಜನರನ್ನು ಭೇಟಿಯಾಗಬಹುದು ಹಾಗೂ ಅವರೊಡನೆ ಬೆರೆತು ಒಳ್ಳೆಯ ಖುಷಿ ಕ್ಷಣಗಳನ್ನು ಪಡೆಯಬಹುದು. ಅಷ್ಟು ಮಾತ್ರವಲ್ಲದೆ ತಾವು ಇಂತಹ ಸಮಸ್ಯೆಗಳಿಗೆ ಒಳಗಾಗುತ್ತಿಲ್ಲ. ಇನ್ನೂ ಹಲವಾರು ಜನರು ಇರುವರು ಎಂದು ಅರಿವು ಮೂಡಿ ಒಬ್ಬರಿಗೊಬ್ಬರು ಸಹಾಯ ಮಾಡಬಹುದು.

ಉದ್ಯೋಗದಿಂದಾಗಿ ಮನಸ್ಸಿನ ಚಿಂತೆಗಳು ದೂರವಾಗಿ ನೆಮ್ಮದಿ ಮತ್ತು ಖುಷಿಯನ್ನು ನೀಡುತ್ತವೆ. ಇದರಿಂದಾಗಿ ಒಂಟಿತನವನ್ನು ಕೂಡ ತಡೆಗಟ್ಟಬಹುದು.

ಕುಟುಂಬ ಪ್ರವಾಸಗಳು ಕೂಡ ಒಂಟಿತನವನ್ನು ದೂರ ಮಾಡುವುದರಲ್ಲಿ ಅತ್ಯುತ್ತಮ ಮಾರ್ಗವಾಗಿರುತ್ತವೆ. ಪ್ರಯಾಣದ ರೂಪದಲ್ಲಿ ತಿಂಗಳಿಗೊಮ್ಮೆ ಭೇಟಿಯಾಗಿ, ಉತ್ತಮ ಕ್ಷಣಗಳನ್ನು ಪಡೆಯುವುದರ ಮೂಲಕ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವನ್ನು ಸುಧಾರಿಸಬಹುದು.

ಪ್ರವಾಸಗಳ ಮೂಲಕ ದೂರದಲ್ಲಿರುವವರೊಂದಿಗೆ ಪರಸ್ಪರ ಸಂಪರ್ಕವನ್ನು ಅನುಭವಿಸಬಹುದು ಮತ್ತು ಇದು ಕುಟುಂಬ ಬಂಧನವನ್ನು ಉತ್ತೇಜಿಸಬಹುದು. ಈಗಿನ ಕಾರ್ಯನಿರತ ಜೀವನ ಶೈಲಿಯಲ್ಲಿ ನಮ್ಮ ಮನಸ್ಸಿಗೆ ವಿಶ್ರಾಂತಿ ನೀಡಿ. ಪುನರ್ಭತಿ ಮಾಡಬಹುದು.

ವಯಸ್ಸಾದ ವೃದ್ಧರು ತಮ್ಮ ಜೀವನದಲ್ಲಿ ಅನೇಕ ರೀತಿಯ ಅನುಭವಗಳನ್ನು ಪಡೆದಿರುತ್ತಾರೆ. ಕಷ್ಟ – ನಷ್ಟಗಳನ್ನು ಅನುಭವಿಸಿರುತ್ತಾರೆ. ಈ ಎಲ್ಲ ಅನುಭವಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಿ, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಮುಪ್ಪಿನಲ್ಲಿ ಖುಷಿಯಾಗಿ ಕಾಲ ಕಳೆದು ಒಂಟಿತನವನ್ನು ನಿವಾರಿಸಬಹುದಾಗಿದೆ.

ಜೆವಿಟ ಡಿ”ಸೋಜ, ರಿಯಾ ಗೊನ್ಸಾಲ್ವಿಸ್‌
(ಅಂತಿಮ ವರ್ಷದ BOT ವಿದ್ಯಾರ್ಥಿಗಳು)
ರಮ್ಯಾ ಕುಲಾಲ್‌, ದೀಪಾ ಪ್ರಭು (ಎರಡನೇ ವರ್ಷದ BOT ವಿದ್ಯಾರ್ಥಿಗಳು)
ಕೌಶಿಕ್‌ ಸೌ ಸಹಾಯಕ ಪ್ರಾಧ್ಯಾಪಕರು, ಒಕ್ಯೂಪೇಶನಲ್‌ ಥೆರಪಿ ವಿಭಾಗ ಎಂ.ಸಿ.ಎಚ್‌.ಪಿ.

Advertisement

Udayavani is now on Telegram. Click here to join our channel and stay updated with the latest news.

Next