Advertisement

ಸೈನಾಗೆ ಕಾಡಿದ ಗಾಯದ ಸಮಸ್ಯೆ

01:09 AM Jul 24, 2019 | Team Udayavani |

ಹೈದರಾಬಾದ್‌: ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಕೊನೆಯ ಕ್ಷಣದಲ್ಲಿ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದಿಂದ ಹಿಂದೆ ಸರಿದಿದ್ದಾರೆ.

Advertisement

ಕೆಲವು ಸಮಯದಿಂದ ಸೈನಾ ನೆಹ್ವಾಲ್‌ ಅವರಿಗೆ ಗಾಯಗಳೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿವೆ. ಹೀಗಾಗಿ ಸೈನಾ ಕಳೆದ ವಾರ ನಡೆದ ಇಂಡೋನೇಶ್ಯ ಓಪನ್‌ ಬ್ಯಾಡ್ಮಿಂಟನ್‌ನಲ್ಲೂ ಆಡಿರಲಿಲ್ಲ. ಇದೀಗ ಜಪಾನ್‌ ಕೂಟದಿಂದಲೂ ದಿಢೀರ್‌ ಎಂದು ಹಿಂದಕ್ಕೆ ಸರಿದಿದ್ದಾರೆ.

ಮೂಲಗಳ ಪ್ರಕಾರ ವಿಶ್ವದ 8ನೇ ರ್‍ಯಾಂಕಿನ ಸೈನಾ ಮುಂದಿನ ತಿಂಗಳಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ಗೆ ಸಿದ್ಧವಾಗುತ್ತಿದ್ದಾರೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಸೈನಾ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು. ಈ ಋತುವಿನಲ್ಲಿ ಪ್ರಶಸ್ತಿ ಗೆದ್ದ ಏಕೈಕ ಆಟಗಾರ್ತಿ ಅವರಾಗಿದ್ದಾರೆ. ಆದರೆ ಈ ಪ್ರಶಸ್ತಿ ಬಳಿಕ ಅವರಿಗೆ ಗಾಯದ ಸಮಸ್ಯೆ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next