Advertisement

ಜಿಲ್ಲೆಯ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ

04:23 PM May 17, 2019 | pallavi |
ಬರದ ಭೀಕರತೆ ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿದೆ. ಕುಡಿಯುವ ನೀರಿಗಾಗಿ ಜನ ಪರಿತಪ್ಪಿಸುತ್ತಿರುವುದು ಮುಂದುವರಿದಿದೆ. 168 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮೀಣ ಪ್ರದೇಶ ಅಷ್ಟೇ ಅಲ್ಲ, ಈಗ ಕುಡಿಯುವ ನೀರಿನ ಸಮಸ್ಯೆ ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಹೆಚ್ಚಾಗಿದೆ. ನಗರದಲ್ಲಿ ಜನ ನೀರಿಗಾಗಿ ಬಿಂದಿಗೆ ಹಿಡಿದು ಬೀದಿ ಬೀದಿ ಸುತ್ತುತ್ತಿದ್ದಾರೆ. ನಗರಗಳಲ್ಲಿ ವಾರಕ್ಕೆ ಒಮ್ಮೆ, ತಿಂಗಳಿಗೆ 2 ಬಾರಿ ನೀರು ಕೊಡುವ ಪರಿಸ್ಥಿತಿ ಎಲ್ಲೆಡೆ ಕಂಡುಬರುತ್ತಿದ್ದು, ಜನರು ನೀರಿಗಾಗಿ ಪರಿತಪ್ಪಿಸುವ ಸ್ಧಿತಿ ಮುಂದುವರೆದಿದೆ.

ತುಮಕೂರು: ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ. ಸಕಾಲದಲ್ಲಿ ಮಳೆ ಬಾರದೇ ರೈತರು ಪರಿತಪ್ಪಿಸುತ್ತಿರುವುದು ಒಂದೆಡೆ ಯಾದರೆ, ಸುಡುಬಿಸಿಲ ಝಳ ತೀವ್ರವಾಗಿ ಜಿಲ್ಲೆಯಾ ದ್ಯಂತ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿದೆ. ಪ್ರತಿದಿನ ನೂರಾರು ಬೋರ್‌ವೆಲ್ಗಳು ಬತ್ತಿ ಹೋಗುತ್ತಿವೆ. ಜಿಲ್ಲೆಯ ಹತ್ತು ತಾಲೂಕು ಗಳ ನಗರ ಪ್ರದೇಶಗಳಲ್ಲಿ ಜನರು ನೀರಿಗಾಗಿ ಪರಿತಪ್ಪಿ ಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಗ್ರಾಮೀಣ ಪ್ರದೇಶ ದಲ್ಲಿ ಮಾತ್ರವಲ್ಲದೇ ನಗರ ಪ್ರದೇಶದಲ್ಲಿಯೂ ತೀವ್ರ ಗೊಂಡಿದೆ. ಜಿಲ್ಲೆಯ 86 ಗ್ರಾಮ ಪಂಚಾಯ್ತಿ ವ್ಯಾಪ್ತಿ 168 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಯಾಗಿದೆ. ದಿನೇ ದಿನೆ ನೀರಿನ ಸಮಸ್ಯೆ ಇರುವ ಗ್ರಾಮಗಳು ಹೆಚ್ಚುತ್ತಿವೆ. ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಾದ್ಯಂತ ತುರ್ತು ಕುಡಿಯುವ ನೀರು ಒದಗಿಸಲು 505 ಕೊಳವೆ ಬಾವಿ ಗಳನ್ನು ಹೊಸದಾಗಿ ಕೊರಸಲಾಗಿದ್ದು, ಅದರಲ್ಲಿ 313 ಕೊಳವೆ ಬಾವಿಗಳು ಸಫ‌ಲವಾಗಿವೆ. 192 ಕೊಳವೆ ಬಾವಿಗಳು ವಿಫ‌ಲಾಗಿವೆ.

Advertisement

ಸಫ‌ಲವಾಗಿರುವ ಕೊಳವೆ ಬಾವಿಗಳಿಗೆ ಮೋಟಾರ್‌ ಪಂಪ್‌ ಆಳವಡಿಸಿ ನೀರು ಸರಬರಾಜು ಮಾಡಲಾಗು ತ್ತಿದೆ. ಜಿಲ್ಲೆಯಾದ್ಯಂತ 1480 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಅನುಮೋದನೆ ಯಾಗಿದ್ದು, 1394 ಘಟಕಗಳನ್ನು ಅಳವಡಿಸಲಾಗಿದೆ. 1392 ಘಟಕಗಳು ಕಾರ್ಯಾರಂಭ ಮಾಡಿವೆ. 23 ಘಟಕಗಳು ಇನ್ನು ಕಾರ್ಯಾರಂಭ ಮಾಡಬೇಕಾಗಿದೆ.

ನೀರು ಸರಬರಾಜಿಗೆ ಕ್ರಮ ಅಗತ್ಯ: ಜಿಲ್ಲೆಯ 190 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೊರುವ ಸಾಧ್ಯತೆ ಇದೆ. 4,71 ಕೋಟಿ ಕ್ರಿಯಾ ಯೋಜನೆ ತಯಾರಿಸಿ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 194 ಗ್ರಾಮಗಳಲ್ಲಿ ತೀವ್ರ ಕುಡಿ ಯುವ ನೀರಿನ ಸಮಸ್ಯೆ ಉಂಟಾಗಿದ್ದು, ತುರ್ತಾಗಿ ಕೊರೆಯಲಾಗಿದ್ದ ಬೋರ್‌ವೆಲ್ಗಳಿಗೆ ಪೈಪ್‌ಲೈನ್‌, ಪಂಪ್‌ಮೋಟಾರ್‌ ವಿದ್ಯುತ್‌ ಆಳವಡಿಸಿ ನೀರು ಸರಬ ರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಅಷ್ಟೇ ಅಲ್ಲ, ನಗರ ಪ್ರದೇಶದಲ್ಲಿಯೂ ಕುಡಿಯು ನೀರಿನ ತತ್ವಾರ ಹೆಚ್ಚ ತೊಡಗಿದೆ. ನಗರ ಪ್ರದೇಶದ ಒಟ್ಟು 251 ವಾರ್ಡ್‌ಗಳ ಪೈಕಿ 110 ವಾರ್ಡ್‌ಗಳಲ್ಲಿ ವಾರಕ್ಕೆ ಒಮ್ಮೆ ನೀರು, ತಿಂಗಳಿಗೆ 2 ಬಾರಿ ನೀರು ಸರಬರಾಜು ಮಾಡಲಾಗು ತ್ತಿದೆ. ಜನ ನೀರಿಗಾಗಿ ಪರಿತಪ್ಪಿಸುತ್ತಿದ್ದಾರೆ. 44 ವಾರ್ಡ್‌ ಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ವಾರಕ್ಕೊಮ್ಮೆ ನೀರು ಸರಬರಾಜು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಇರುವ 35 ವಾರ್ಡ್‌ ಗಳಲ್ಲಿ 15 ವಾರ್ಡ್‌ಗಳಲ್ಲಿ 5 ದಿನಕ್ಕೆ, ಇನ್ನೂ 20 ವಾರ್ಡ್‌ ಗಳಲ್ಲಿ ವಾರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಶಿರಾ ನಗರಸಭೆ 35 ವಾರ್ಡ್‌ಗಳ ಪೈಕಿ 31 ವಾರ್ಡ್‌ ಗಳಲ್ಲಿಯೂ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ತಿಪಟೂರು ನಗರ ಸಭೆಯ 35 ವಾರ್ಡ್‌ಗಳ ಪೈಕಿ 10 ವಾರ್ಡ್‌ಗಳಲ್ಲಿ 3 ದಿನಕ್ಕೆ, 17 ವಾರ್ಡ್‌ಗಳಲ್ಲಿ 4 ದಿನಕ್ಕೆ, 4 ವಾರ್ಡ್‌ಗಳಲ್ಲಿ 6 ದಿನಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.

Advertisement

ಚಿಕ್ಕನಾಯಕನಹಳ್ಳಿ ಪುರಸಭೆಯ 23 ವಾರ್ಡ್‌ಗಳ ಪೈಕಿ 23 ವಾರ್ಡ್‌ಗಳಿಗೂ ವಾರಕ್ಕೆ ಒಮ್ಮೆ ನೀರು ಸರಬ ರಾಜು ಮಾಡಲಾಗುತ್ತಿದೆ. ಕುಣಿಗಲ್ ಪುರಸಭೆಯ 23 ವಾರ್ಡ್‌ಗಳ ಪೈಕಿ 13 ವಾರ್ಡ್‌ಗಳಿಗೆ 3 ದಿನಕ್ಕೆ ಒಮ್ಮೆ, 5 ವಾರ್ಡ್‌ಗಳಿಗೆ 5 ದಿನಕ್ಕೊಮ್ಮೆ, ಇನ್ನೂ 5 ವಾರ್ಡ್‌ಗಳಿಗೆ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ಪಾವಗಡ ಪುರಸಭೆಯ 23 ವಾರ್ಡ್‌ಗಳ ಪೈಕಿ 3 ವಾರ್ಡ್‌ಗಳಿಗೆ 5 ದಿನಕ್ಕೆ ಒಮ್ಮೆ, 6 ವಾರ್ಡ್‌ಗಳಿಗೆ 6 ದಿನಕ್ಕೆ ಒಮ್ಮೆ, 14 ವಾರ್ಡ್‌ಗಳಿಗೆ ವಾರಕ್ಕೆ ಒಮ್ಮೆ ನೀರು ಬಿಡಲಾಗುತ್ತಿದೆ. ಮಧುಗಿರಿ ಪುರಸಭೆಯ 23 ವಾರ್ಡ್‌ ಗಳ ಪೈಕಿ 2 ವಾರ್ಡ್‌ಗಳಿಗೆ 5 ದಿನಕ್ಕೆ ಒಮ್ಮೆ, 21 ವಾರ್ಡ್‌ಗಳಿಗೆ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಕೊರಟಗೆರೆ ಪಟ್ಟಣ ಪಂಚಾಯ್ತಿ ಯಲ್ಲಿ 15 ವಾರ್ಡ್‌ ಗಳ ಪೈಕಿ 2 ವಾರ್ಡ್‌ಗಳಿಗೆ 2 ದಿನಕ್ಕೆ ಒಮ್ಮೆ, 5 ವಾರ್ಡ್‌ಗಳಿಗೆ 2 ದಿನಕ್ಕೆ 8 ವಾರ್ಡ್‌ ಗಳಿಗೆ 5 ದಿನಕ್ಕೆ ಒಮ್ಮೆ ನೀರು ಸರಬರಾಜು ಮಾಡ ಲಾಗುತ್ತಿದೆ. ತುರುವೇಕೆರೆ ಪಟ್ಟಣ ಪಂಚಾಯ್ತಿಯಲ್ಲಿ 14 ವಾರ್ಡ್‌ ಗಳ ಪೈಕಿ 8 ವಾರ್ಡ್‌ಗಳಿಗೆ 5 ದಿನಕ್ಕೆ 6 ವಾರ್ಡ್‌ಗಳಿಗೆ ವಾರಕ್ಕೆ ಒಮ್ಮೆ ನೀರು ಬಿಡಲಾಗುತ್ತಿದೆ. ಗುಬ್ಬಿ ಪಟ್ಟಣ ಪಂಚಾಯ್ತಿ 17 ವಾರ್ಡ್‌ಗಳ ಪೈಕಿ 8 ವಾರ್ಡ್‌ಗಳಿಗೆ 3 ದಿನಕ್ಕೆ 9 ವಾರ್ಡ್‌ಗಳಿಗೆ 5 ದಿನಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಹುಳಿ ಯಾರು ಪಟ್ಟಣ ಪಂಚಾಯ್ತಿಯ 16 ವಾರ್ಡ್‌ಗಳಿಗೂ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ನೀರು ಸಂಗ್ರಹಿಸಲು ಪರದಾಟ: ಜಿಲ್ಲೆಯಲ್ಲಿ ಎಲ್ಲ ನಗರ, ಪಟ್ಟಣ ಪ್ರದೇಶಗಳಲ್ಲಿ ಕುಡಿಯು ನೀರಿನ ಸಮಸ್ಯೆ ತೀವ್ರಗೊಂಡಿದ್ದು, ನಗರದ ಜನರು ನೀರಿಗಾಗಿ ಪರಿತಪ್ಪಿಸುತ್ತಿದ್ದಾರೆ. ಜಿಲ್ಲೆಯ ಕೊರಟಗೆರೆ, ತುರುವೇ ಕೆರೆ ಪಟ್ಟಣ ಪಂಚಾಯ್ತಿಯಲ್ಲಿ ಮಾತ್ರ ಟ್ಯಾಂಕರ್‌ ನೀರು ಸರಬರಾಜು ಮಾಡುತ್ತಿಲ್ಲ. ಉಳಿದ ಎಲ್ಲ ನಗರ, ಪಟ್ಟಣಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಮಧುಗಿರಿ, ಕುಣಿಗಲ್, ತುಮಕೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಜನರು ನೀರಿಗಾಗಿ ಪರಿತಪ್ಪಿಸು ತ್ತಿದ್ದಾರೆ. ಟ್ಯಾಂಕರ್‌ ನೀರು ಬಂದ ತಕ್ಷಣ ನೀರನ್ನು ಸಂಗ್ರಹಿಸಲು ನಾ ಮುಂದು ತಾ ಮುಂದು ಎಂದು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ದಿನೇ ದಿನೆ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳು ತ್ತಿದೆ. ಜಿಲ್ಲಾಡಳಿತ ನೀರಿನ ಸಮಸ್ಯೆ ನೀಗಿಸಲು ಹೆಚ್ಚಿನ ಒತ್ತು ನೀಡುವುದು ಅಗತ್ಯವಾಗಿದೆ.

168 ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು
ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿ ಸಿರುವ ಹಿನ್ನೆಲೆಯಲ್ಲಿ ಸಾರ್ವ ಜನಿಕ ಕುಡಿಯುವ ನೀರಿಗೆ ಸಮಸ್ಯೆ ಯಾಗದಂತೆ ಜಿಲ್ಲೆಯ 86 ಗ್ರಾಮ ಪಂಚಾಯ್ತಿಗಳ 168 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ 452 ಟ್ರಿಪ್‌ ನೀರು ಸರಬರಾಜು ಮಾಡ ಲಾಗುತ್ತಿದೆ ಎಂದು ಜಿಪಂ ಸಿಇಒ ಶುಭಾ ಕಲ್ಯಾಣ್‌ ತಿಳಿಸಿ ದ್ದಾರೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವುದಲ್ಲದೆ, 198 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸ ಲಾಗಿದ್ದು, ಈ ಪೈಕಿ 135 ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರಸಕ್ತ ವರ್ಷದ ಜನವರಿ 1ರಿಂದ ಈವರೆಗೂ 1088 ಕೊಳವೆ ಬಾವಿ ಗಳನ್ನು ಕೊರೆಸಲಾಗಿದ್ದು, ಇದರಲ್ಲಿ 778 ಬೋರ್‌ವೆಲ್ಗಳು ಸಫ‌ಲವಾಗಿವೆ.

ಸಹಾಯವಾಣಿಯಲ್ಲಿ ದೂರು ಸ್ವೀಕಾರ: ಜಿಲ್ಲೆ ಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿ ಹರಿಸಲು ಸಾರ್ವಜನಿಕ ದೂರುಗಳನ್ನು ಸ್ವೀಕರಿ ಸುವ ಸಲುವಾಗಿ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಹಂತದಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ. ಸಹಾಯ ವಾಣಿ ಮೂಲಕ ಸ್ವೀಕರಿಸುವ ದೂರು ಗಳಿಗೆ 24 ಗಂಟೆಯೊಳಗಾಗಿ ಪರಿಹಾರ ಒದಗಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಇಂದು ಜನಸ್ಪಂದನ ಕಾರ್ಯಕ್ರಮ: ಸಾರ್ವಜನಿಕ ಕುಡಿಯುವ ನೀರಿನ ಸಮಸ್ಯೆಯಲ್ಲದೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಾರ್ವಜನಿಕ ಕುಂದು ಕೊರತೆ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ಅಹವಾಲು ಗಳನ್ನು ಸ್ವೀಕರಿಸಲು ಮೇ 17ರಂದು ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗು ತ್ತಿದೆ. ಮೇ 17ರ ಬೆಳಗ್ಗೆ 8 ಗಂಟೆಯಿಂದ 11.30 ರವರೆಗೆ ಗುಬ್ಬಿ ತಾಲೂಕು ನಿಟ್ಟೂರು ಗ್ರಾಮ ಪಂಚಾಯ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರಿಂದ ಅಹವಾಲು ಗಳನ್ನು ಸ್ವೀಕರಿಸ ಲಾಗುವುದು. ಸಾರ್ವಜನಿಕರು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಮನವಿ ಮಾಡಿದ್ದಾರೆ.

ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕುಡಿಯುವ ನೀರಿನ ಸಮಸ್ಯೆಯನ್ನು
ಬಗೆ ಹರಿಸಲು ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಕಂಡು ಬರುವ ವಾರ್ಡ್‌ಗಳಿಗೆ ತಕ್ಷಣ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅಗತ್ಯವಿರುವ ಕಡೆ
ಬೋರ್‌ವೆಲ್‌ ಕೊರಸಿ ನೀರು ನೀಡಲಾಗುತ್ತಿದೆ. ಯಾವುದೇ ರೀತಿಯ ನೀರಿನ ಸಮಸ್ಯೆ ಬರದಂತೆ ಕ್ರಮ ಕೈಗೊಳ್ಳಲಾಗುತ್ತದೆ.
● ಡಾ.ಕೆ.ರಾಕೇಶ್‌ ಕುಮಾರ್‌, ತುಮಕೂರು ಜಿಲ್ಲಾಧಿಕಾರಿ

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next