Advertisement

ಹೊಳೆಗಳಿದ್ದರೂ ಕುಡಿಯುವ ನೀರಿನ ಬವಣೆ ತಪ್ಪಿಲ್ಲ

12:30 AM Feb 17, 2019 | |

ಕಟಪಾಡಿ: ಪಾಪನಾಶಿನಿ, ಪಿನಾಕಿನಿ ಹೊಳೆ ಹರಿಯುತ್ತಿದ್ದರೂ ಕಟಪಾಡಿ, ಕೋಟೆ, ಉದ್ಯಾವರ, ಕುರ್ಕಾಲು, ಮಣಿಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.  

Advertisement

ಈ ಹೊಳೆಗಳಲ್ಲಿ ಸಮುದ್ರದಿಂದ ಒಳನುಗ್ಗುವ ಉಪ್ಪುನೀರು ಇದ್ದು, ಪರಿಸರದಲ್ಲೂ ಸಿಹಿ ನೀರು ಅಲಭ್ಯತೆ ಇದೆ. ಸೂಕ್ತವಾದ ಸ್ಥಳಗಳಲ್ಲಿ ಅಣೆಕಟ್ಟು ನಿರ್ಮಿಸಿದಲ್ಲಿ ಶಾಶ್ವತವಾದ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂಬ ಜನಾಭಿಪ್ರಾಯಕ್ಕೂ ಮನ್ನಣೆ ಸಿಗದೆ ಯೋಜನೆಗಳು ಕಾರ್ಯರೂಪಕ್ಕಿಳಿಯುತ್ತಿಲ್ಲ. 

ಕಟಪಾಡಿ ಗ್ರಾ.ಪಂ. 
ಯೇಣಗುಡ್ಡೆ, ಮೂಡಬೆಟ್ಟು ಗ್ರಾಮಗಳನ್ನೊಳ ಗೊಂಡ ಕಟಪಾಡಿ ಗ್ರಾ.ಪಂ.ನಲ್ಲಿ ಕುಡಿಯುವ ನೀರನ್ನು ಟ್ಯಾಂಕರ್‌ ಮೂಲಕ ಪೂರೈಸುವುದು ಮಾಮೂಲಿಯಾಗಿದೆ.  ಬೇಸಗೆಯಲ್ಲಿ ಪಡುಏಣಗುಡ್ಡೆ, ಜೆ.ಎನ್‌.ನಗರ, ಕಜಕೊಡೆ, ನಾಯ್ಕರ ತೋಟ, ಚೊಕ್ಕಾಡಿ, ದುರ್ಗಾನಗರ, ಶಿವಾನಂದ ನಗರ, ವಿದ್ಯಾನಗರ, ಸರಕಾರಿಗುಡ್ಡೆ, ಪೊಸಾರ್‌ ಕಂಬಕಟ್ಟ, ಸಾಣತೋಟ, ಗೋಕುಲ ಪ್ರದೇಶಗಳು ನೀರಿನ ಸಮಸ್ಯೆ ಹೆಚ್ಚಾಗಿ ಕಾಡುವ ಭಾಗಗಳಾಗಿವೆ. ಇಲ್ಲೆಲ್ಲ ಟ್ಯಾಂಕರ್‌ ನೀರು ಪೂರೈಕೆಗೆ ಈಗ ಪಂಚಾಯತ್‌ ಸಿದ್ಧಗೊಳ್ಳುತ್ತಿದೆ. ಶಾಶ್ವತ ಪರಿಹಾರಕ್ಕಾಗಿ ಎಸ್‌.ವಿ.ಎಸ್‌. ಶಾಲೆಯ ಬಳಿ ಕೊಳವೆ ಬಾವಿ ರಚಿಸಲಾಗಿದೆ. ಗರಡಿ ರಸ್ತೆ ಬಳಿ 1 ಕೊಳವೆ ಬಾವಿ ರಚಿಸಲಾಗಿದೆ. ಶಂಕರಪುರ ಎಸ್‌ ಸಿ ಕಾಲನಿಯಲ್ಲಿ ಕೊಳವೆ ಬಾವಿ ಹಾಗೂ ಟ್ಯಾಂಕ್‌ ರಚನೆ ಮಾಡಲಾಗಿದೆ. ಚೊಕ್ಕಾಡಿ ಪ್ರದೇಶಕ್ಕೆ ಕೊಳವೆ ಬಾವಿ, ಪೈಪ್‌ಲೈನ್‌ ವಿಸ್ತರಣೆ, ದುರ್ಗಾನಗರದಲ್ಲಿ ಹೆಚ್ಚುವರಿ ಕೊಳವೆ ಬಾವಿ ತೋಡಲಾಗಿದೆ. 

ಕೋಟೆ ಗ್ರಾ.ಪಂ.  
ಮಟ್ಟು ಮತ್ತು ಕೋಟೆ ಎಂಬ 2 ಗ್ರಾಮಗಳಿರುವ ಈ ಗ್ರಾ.ಪಂ.ನಲ್ಲಿ ಉಪ್ಪು ನೀರಿನ ಬಾಧೆ ಇದೆ. ಇಲ್ಲಿನ ಇಂದಿರಾ ನಗರ, ವಿನೋಬಾ ನಗರ, ಕೋಟೆ ಕಂಡಿಗೆ, ಕೋಟೆಬೆ„ಲ್‌, ಸಮಾಜ ಮಂದಿರ, ತೌಡಬೆಟ್ಟು, ಮದೀನಾ ಪಾರ್ಕ್‌, ಕಿನ್ನಿಗುಡ್ಡೆ, ಕೋಟೆಬೆ„ಲು, ಕಂಡಿಗೆ, ಪೂೆಂಕುದ್ರು ಭಾಗದಲ್ಲಿ  ಕಳೆದ ಬಾರಿ ಟ್ಯಾಂಕರ್‌ ನೀರು ಸರಬರಾಜಾಗಿತ್ತು. ಈ ಬಾರಿ ನೀರಿನ ಕೊರತೆ ತೀವ್ರವಾಗಿದೆ.

ಉದ್ಯಾವರ ಗ್ರಾ.ಪಂ.  
ಈ ಭಾಗದಲ್ಲಿ ಗಡಸು ನೀರು ಲಭ್ಯವಾಗುತ್ತಿದ್ದು ಮನೆ ಬಳಕೆಗೆ ಉಪುೂàಗಿಸಿಲು ಅಡ್ಡಿಯಿಲ್ಲ. ಆದರೆ ಕುಡಿಯುವ ನೀರಿನ ಕೊರತೆ ಇದೆ. ಗುಡ್ಡೆಯಂಗಡಿಯಲ್ಲಿ ಪ.ಜಾತಿ ಕಾಲೊನಿಯಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ಹೊಸ ಟ್ಯಾಂಕ್‌ ನಿರ್ಮಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕವನ್ನೂ ನಿರ್ಮಿಸಲಾಗಿದೆ. ಮಠದಕುದ್ರುವಿನಲ್ಲಿ 4 ಲಕ್ಷ 50 ಸಾವಿರ ರೂ. ವೆಚ್ಚದಲ್ಲಿ ಪೈಪ್‌ಲೈನ್‌  ಕಾಮಗಾರಿಗಾಗಿ ಮಂಜೂರಾತಿಗೊಂಡಿದೆ. ಕುಜುಂಬಕುದ್ರು ಪ್ರದೇಶ ದಲ್ಲಿ ಪೈಪ್‌ಲೈನ್‌, ಪಿತ್ರೋಡಿಯಲ್ಲಿ ಹೊಸ ಬಾವಿ ರಚನೆ ಪ್ರಗತಿಯಲ್ಲಿದೆ. ಪಿತ್ರೋಡಿ, ಬೊಳೆjಯಲ್ಲಿ ನೀರು ಶುದ್ಧೀಕರಣ ಘಟಕ ಜಿ.ಪಂ. ಮತ್ತು ಗ್ರಾ.ಪಂ. ವತಿಯಿಂದ ಸ್ಥಾಪಿಸಲಾಗುತ್ತಿದೆ. 
 
ಮಣಿಪುರ ಗ್ರಾ.ಪಂ.  
ಮರ್ಣೆ ಮತ್ತು ಮಣಿಪುರ ಗ್ರಾಮವನ್ನೊಳ ಗೊಂಡ ಇಲ್ಲಿನ ಗ್ರಾ.ಪಂ.ನಲ್ಲಿ ಹೊಳೆಗೆ ಅಳವಡಿಸಲಾದ ಅಣೆಕಟ್ಟೆಯಿಂದಾಗಿ ತುಸು ಸಿಹಿನೀರು ಲಭ್ಯ. ಆದರೆ ಅದು ಹೆಚ್ಚು ಸುಸ್ಥಿತಿಯಲ್ಲಿಲ್ಲದೆ ಇರುವುದು ಸಮಸ್ಯೆಯಾಗಿದೆ. ಮಣಿಪುರ ವೆಸ್ಟ್‌, ಕೋಟೆ, ಗುಜ್ಜಿ, ದೇವಳ ಗುಜ್ಜಿ, ಕೊಡಂಗಳ, ಮರ್ಣೆ, ಪಟ್ಲ, ಫ್ರೆಂಡ್ಸ್‌ ಸರ್ಕಲ್‌ ಜಂಕ್ಷನ್‌ ಭಾಗಕ್ಕೆ ಹೆಚ್ಚು ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಕುಂತಳನಗರ ಕಲ್ಮಂಜೆ ಭಾಗದಲ್ಲಿ ಎಸ್‌.ಸಿ. ಮತ್ತು ಎಸ್‌.ಟಿ. ಕಾಲನಿಗೆ ಕುಡಿಯುವ ಶುದ್ಧ ನೀರಿನ ಘಟಕ ಮತ್ತು ಮಣಿಪುರದ ಮೂಡು ಕಲ್ಮಂಜೆ ಮತ್ತು ಮಣಿಪುರ ದೇವಳ ಗುಜ್ಜಿ ಭಾಗದಲ್ಲಿ ಶುದ್ಧೀಕರಣ ಘಟಕವನ್ನು ಅಳವಡಿಸಿಕೊಳ್ಳಲಾಗಿದೆ. 

Advertisement

ಕುರ್ಕಾಲು ಗ್ರಾ.ಪಂ.
ಈ ಗ್ರಾ.ಪಂ.ನ 2ನೇ ವಾರ್ಡು, 4, 5, 6 ನೇ ವಾರ್ಡುಗಳ ನಾಯ್ಕರ ತೋಟ, ಅಚ್ಚಡ, ಕುಂಜಾರುಗಿರಿ ಭಾಗದಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಅದಕ್ಕಾಗಿ 4 ಬೋರ್‌ವೆಲ್‌, 8 ಬಾವಿಗಳ ನೀರನ್ನು ಬಳಸಿಕೊಂಡು 3 ಓವರ್‌ಹೆಡ್‌ ಟ್ಯಾಂಕಿಯ ಮೂಲಕ ನೀರಿನ ಸರಬರಾಜು ಆಗುತ್ತದೆ. ಮೆನ್ನಲಾ ಎಂಬಲ್ಲಿ ಜಿಲ್ಲಾ ಪಂಚಾಯ ತ್‌ 20 ಲಕ್ಷ ರೂ. ಅನುದಾನದಡಿ ತೆರೆದ ಬಾವಿ ನಿರ್ಮಿಸಿ ಪಂಪು ಅಳವಡಿಸಿ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಪಾಜೈ ಬಳಿ ಜಿ.ಪಂ. 20 ಲಕ್ಷ ರೂ. ಅನುದಾನದಲ್ಲಿ ತೆರೆದ ಬಾವಿ ಪಂಪು ಅಳವಡಿಸಲಾಗಿದೆ. 50 ಸಾವಿರ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕುಂಜಾರುಗಿರಿಯಲ್ಲಿ ಕೆ.ಆರ್‌.ಐಡಿಎಲ್‌. ಮೂಲಕ ಅಳವಡಿಸಲಾಗಿದೆ.

ಟ್ಯಾಂಕರ್‌ ನೀರು ಅನಿವಾರ್ಯ 
ಮಟ್ಟು ಭಾಗದಲ್ಲಿ ಕುಡಿಯುವ ನೀರಿನ ಮೂಲ ಇಲ್ಲ. ಉಪ್ಪು ನೀರಿನ ಸಮಸ್ಯೆ ಇದೆ. ಮಟ್ಟು ಭಾಗಕ್ಕೆ ವರ್ಷವಿಡೀ ಕುಡಿಯುವ ನೀರಿನ ಸರಬರಾಜು ಮಾಡಬೇಕಾಗುತ್ತದೆ. ಉತ್ತಮ ಮಳೆಯಾಗದಿದ್ದರೆ ಟ್ಯಾಂಕರ್‌ ನೀರು ಸರಬರಾಜು ಅನಿವಾರ್ಯ. 
– ಸುರೇಖಾ,ಪಿ.ಡಿ.ಒ.ಕೋಟೆ ಗ್ರಾ.ಪಂ.

ಲಭ್ಯ ನೀರಿನ ಹಂಚಿಕೆ
ಕುಡಿಯುವ ನೀರಿನ ಸರಬರಾಜು ಸರಿಯಾಗಿ ಮಾಡಲಾಗುತ್ತಿದೆ. ಇದ್ದ ನೀರಿನ ಮೂಲವನ್ನು ಬಳಸಿಕೊಂಡು ಕುಡಿಯುವ ನೀರನ್ನು ಹಂಚಿಕೆ ಮಾಡಲಾಗುತ್ತದೆ. 
– ಚಂದ್ರಕಲಾ, 
ಪಿ.ಡಿ.ಒ ಕುರ್ಕಾಲು ಗ್ರಾ.ಪಂ.

– ವಿಜಯ ಆಚಾರ್ಯ,ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next