Advertisement

ಠಾಣೆ ಆವರಣದಲ್ಲೇ ಸಮಸ್ಯೆ ಇತ್ಯರ್ಥ

06:34 AM Jul 06, 2020 | Lakshmi GovindaRaj |

ಮುಳಬಾಗಿಲು: ಕೋವಿಡ್‌ 19 ಸೋಂಕು ಪೊಲೀಸರಿಗೂ ಹರಡುತ್ತಿರುವ ಕಾರಣ, ಸಿಬ್ಬಂದಿ ಹಾಗೂ ಜನರ ಹಿತದೃಷ್ಟಿಯಿಂದ ಎಸ್ಪಿ ಕಾರ್ತಿಕ್‌ರೆಡ್ಡಿ ಸೂಚನೆಯಂತೆ ತಾಲೂಕು ಪೊಲೀಸರು ಠಾಣೆ ಆವರಣದಲ್ಲಿಯೇ ದೂರುಗಳನ್ನು  ಸ್ವೀಕರಿಸಿ, ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆ.

Advertisement

ತಾಲೂಕಿನ ನಂಗಲಿ ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ಈ ಕಾರ್ಯ ಆರಂಭವಾಗಿದ್ದು, ಪಿಎಸ್‌ಐ ಅನಿಲ್‌ಕುಮಾರ್‌, ಠಾಣೆ ಒಳಗಡೆ ಯಾವುದೇ ವ್ಯಕ್ತಿಗಳು ಅನಗತ್ಯವಾಗಿ  ಪ್ರವೇಶಿಸದಂತೆ, ಆವರಣದಲ್ಲಿ ಟೇಪ್‌ ಕಟ್ಟಿ, ಪೆಂಡಾಲ್‌, ಚೇರ್‌ ಹಾಕಿ ಅಲ್ಲಿಯೇ ಜನರ ದೂರು ಸ್ವೀಕರಿಸಲಾಗುತ್ತಿದೆ.

ಠಾಣಾ ವ್ಯಾಪ್ತಿಯಲ್ಲಿರುವ 186 ಹಳ್ಳಿಗಳ ಜನರಿಂದ ದೂರು ಸ್ವೀಕಾರ, ರಾಜಿ ಸಂಧಾನ ನಡೆಸಿ, ಪ್ರಕರಣ ಇತ್ಯರ್ಥಕ್ಕೆ  ಶ್ರಮಿಸಲಾಗುತ್ತಿದೆ. ಅದರಂತೆ ಠಾಣೆ ಆವರಣದಲ್ಲಿ ಹಾಕಲಾಗಿರುವ ಟೆಂಟ್‌ನಲ್ಲಿ ಠಾಣಾಧಿಕಾರಿ ಎಎಸ್‌ಐ ವೆಂಕಟರಾಜು ಜನರ ಸಮಸ್ಯೆ ಇತ್ಯರ್ಥ ಪಡಿಸುತ್ತಿದ್ದ ದೃಶ್ಯ ಭಾನುವಾರ ಕಂಡು ಬಂತು. ಒಂದು ವೇಳೆ ಘಟನೆಯು ಮತ್ತಷ್ಟು ಜಠಿಲಗೊಂಡಿದ್ದರೆ ಪ್ರಕರಣ ದಾಖಲಿಸಿಕೊಂಡು ಪಿಪಿಇ ಕಿಟ್‌ ಧರಿಸಿ ಆರೋಪಿ ಬಂಧಿಸಿ,

ನೇರವಾಗಿ ಆಸ್ಪತ್ರೆಗೆ ಕರೆದೊಯ್ದು ಅಗತ್ಯ ವೈದ್ಯಕೀಯ ಪರೀಕ್ಷೆ ಮಾಡಿಸಿ ನಿರ್ದಿಷ್ಟ ಅವಧಿಯವರೆಗೂ ನಿಗದಿತ ಸ್ಥಳದಲ್ಲಿ ಆರೋಪಿಯನ್ನು  ಕ್ವಾರಂಟೈನ್‌ ಮಾಡಿ, ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟೀವ್‌ ವರದಿ ಬಂದ ನಂತ ಕೋರ್ಟ್‌ಗೆ ಹಾಜರು ಪಡಿಸುವ ಕೆಲಸವನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಪಿಎಸ್‌ಐ ಅನಿಲ್‌ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next