Advertisement

ಸಂಘಟನೆ ವೇಳೆ ಸಮಸ್ಯೆ ಸಾಮಾನ್ಯ

04:30 PM Aug 26, 2018 | |

ಶಹಾಪುರ: ಯಾವುದೇ ಸಮಾಜ, ಸಂಘ ಸಂಘಟನೆ ಮಾಡುವಾಗ ಹಲವಾರು ಸಮಸ್ಯೆಗಳು ಉದ್ಭವವಾಗುವುದು ಸಹಜ. ಅವುಗಳನ್ನೆಲ್ಲ ಮೆಟ್ಟಿ ನಿಲ್ಲುವ ಮೂಲಕ ಸಮಾಜದ ಅಭಿವೃದ್ಧಿಗೆ ಆತ್ಮಸಾಕ್ಷಿಯೊಂದಿಗೆ ಉತ್ತಮ ಕಾರ್ಯ ಕೈಗೊಂಡಾಗ ಮಾತ್ರ ಸಮಾಜದ ಸಂಘಟನೆ ಸಾಧ್ಯ ಎಂದು
ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಸ್ವಕುಳ ಸಾಳಿ ಸಮಾಜ ಜೀವೇಶ್ವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಮಾಜದಲ್ಲಿ ಉತ್ತಮ ಸಂಘಟನೆ ಮಾಡುವಾಗ ಕೆಲವರು ಸಮಸ್ಯೆ ಸೃಷ್ಟಿಸುತ್ತಾರೆ. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಸಂಘಟನೆ ಮುಂದುವರಿಸಬೇಕು. ಸಮಾಜದ ಅಭಿವೃದ್ಧಿಗೆ ಯಾರಾದರೂ ಶ್ರಮವಹಿಸಬಹುದು. ಅದು ಒಳ್ಳೆಯ ಕಾರ್ಯಕ್ರಮವಾಗಿದ್ದರೆ ತಾನಾಗಿಯೇ ಎಲ್ಲರೂ ಸಹಕರಿಸಲಿದ್ದಾರೆ.

ತಾಲೂಕಿನಲ್ಲಿ ಸ್ವಕುಳ ಸಾಳಿ ಸಮಾಜ ಕಳೆದ 20-25 ವರ್ಷಗಳಿಂದಲೂ ಸಂಘಟಿತರಾಗಿ ಎಲ್ಲ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಅಲ್ಲದೆ ಉಳಿದ ಸಮಾಜಗಳಿಗಿಂತ ಉತ್ತಮ ಸಂಘಟನೆ ಹೊಂದಿದ್ದು, ಸಮಾಜದ ಮಕ್ಕಳ ಪ್ರತಿಭೆ ಗುರುತಿಸುವುದು ಸೇರಿದಂತೆ
ಶೆ„ಕ್ಷಣಿಕ ಪ್ರತಿಭೆಗಳಿಗೆ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಸುವ ಮೂಲಕ ಸಮಾಜದ ಯುವ ಸಮುದಾಯಕ್ಕೆ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿರುವುದು ಸಮಾಜದ ಬೆಳವಣಿಗೆಗೆ ಕಾರಣವಾಗಲಿದೆ. ಮನುಷ್ಯನಿಗೆ ಸಮಾಜ ಏನು ಮಾಡಿದೆ ಎಂಬುದಕ್ಕಿಂತ ಸಮಾಜಕ್ಕೆ ತಾನೂ ಯಾವ ಕೊಡುಗೆ ನೀಡಿದ್ದಾನೆ ಎಂಬುದನ್ನು ಅರಿಯಬೇಕಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ ಮಾತನಾಡಿ, ಸಮಾಜವನ್ನು ಮುನ್ನಡೆಸುವಾಗ ಒಳಿತು ಮಾಡಿದರೂ ಎರಡು ಮಾತು ಬರುವುದು ಸಹಜ. ಅಂತಹ ಟೀಕೆಗಳಿಗೆ ಮಹತ್ವ ನೀಡಬೇಕಿಲ್ಲ. ಅಂದವರು ನಮ್ಮವರೇ ಎಂದು ಎಲ್ಲವನ್ನು ಮರೆತು ತಾವು ಹಾಕಿಕೊಂಡಿರುವ ಕಾರ್ಯಕ್ರಮ ಉತ್ತಮವಾಗಿದ್ದಲ್ಲಿ ಎಡಬಿಡದೆ ಅದನ್ನು ಮುಗಿಸುವ ಧಾವಂತ ಹೊಂದಿರಬೇಕು.

ಉತ್ತಮ ಕಾರ್ಯ ಪೂರ್ಣಗೊಂಡಾಗ ಜನರಿಗೆ ಅದರ ಬಗ್ಗೆ ತಿಳಿಯಲಿದೆ. ಆಗ ಕಾರ್ಯಕ್ರಮದ ಯಶಸ್ಸಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಸಾಕಷ್ಟು ಸಮಾಜಗಳು ಸಂಘಟನೆ ಮಾಡುತ್ತಿವೆ. ಆದರೆ ನಿರಂತರವಾಗಿ ಸಂಘಟನೆ ಮಾಡಲು ಆಗುತ್ತಿಲ್ಲ. ನಿಮ್ಮದು ಅವೆಲ್ಲಕ್ಕಿಂತ ಮಿಗಿಲಾಗಿದ್ದು,
ಉತ್ತಮ ಸಂಘಟನೆಯೊಂದಿಗೆ ಸಮಾಜದ ಬೆಳವಣಿಗೆ ಸದಾ ಸ್ಪಂದಿಸುವ ಸಮಾಜ ನಿಮ್ಮದಾಗಿದೆ ಎಂದು ಹೇಳಿದರು.
ಸಮಾಜದ ಅಧ್ಯಕ್ಷ ಸಿದ್ಧಣ್ಣ ಮಾಸ್ತರ ಶಿರವಾಳ ಅಧ್ಯಕ್ಷತೆ ವಹಿಸಿದ್ದರು.

Advertisement

ಮುಖಂಡ ಹಣಮಂತ್ರಾಯ ಹಳಿಸಗರ, ಜನಾರ್ಧನ ಮಾನು, ಪತ್ರಕರ್ತ ಮಲ್ಲಿಕಾರ್ಜುನ ಮುದನೂರ, ಯುವ ಮುಖಂಡ ರಾಜಕುಮಾರ ಚಿಲ್ಲಾಳ, ಮುಖಂಡರಾದ ಮಲ್ಲಯ್ಯ ಪಿರಂಗಿ, ರಾಮು ಮಿರ್ಜಿ, ತಿಪ್ಪಣ್ಣ, ಸತೀಶ ಮಿರ್ಜಿ, ನಂದು ಚಿಲ್ಲಾಳ, ಸಂತೋಷ ಮಾನು, ಮಲ್ಲಿಕಾರ್ಜುನ, ಅಶೋಕ ಇದ್ದರು. ಸುರೇಖಾ ಏಕಬೋಟೆ ಮತ್ತು ಲಕ್ಷ್ಮೀಪಿರಂಗಿ  ನಿರೂಪಿಸಿದರು. ಜಯಂತಿ ಅಂಗವಾಗಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಪದಕ, ಕಪ್‌ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು

Advertisement

Udayavani is now on Telegram. Click here to join our channel and stay updated with the latest news.

Next