Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಸದನ ಮೊಟಕುಗೊಳಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನನಗೂ ಅತ್ಯಂತ ನೋವು ತರಿಸಿದೆ ಎಂದರು.
Related Articles
Advertisement
ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂಸದೀಯ ವ್ಯವಸ್ಥೆಯನ್ನು ಎತ್ತಿ ಹಿಡಿಬೇಕು. ವ್ಯವಸ್ಥೆ ಶಿಥಿಲವಾಗಬಾರದು. ಭಿನ್ನಾಭಿಪ್ರಾಯ ಏನೇ ಇದ್ದರೂ ಜನರ ಅಂಗಳದಲ್ಲಿ ತೀರ್ಮಾನ ಆಗಲಿ ಎಂದು ತಿಳಿಸಿದರು.
ಚುನಾವಣ ವ್ಯವಸ್ಥೆ ಸುಧಾರಣೆ ಕುರಿತು ಮಾ.4ರಿಂದ ನಡೆಯಲಿರುವ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಚರ್ಚಿಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.
ಸಮಾಜದ ವಾತಾವರಣವನ್ನು ನಾವೆಲ್ಲರೂ ಪ್ರಬುದ್ಧತೆ ಹಾಗೂ ಉತ್ತಮ ಸಂಸ್ಕಾರಯುತವಾಗಿ ಬೆಳೆಸಬೇಕಿದೆ. ಸದನದ ಒಳಗೆ, ಹೊರಗೆ ಆಡುವ ಮಾತುಗಳು ಸಮಾಜದಲ್ಲಿ ಸಾಮರಸ್ಯ ಮೂಡುವಂತೆ ಇರಬೇಕು ಎಂದು ಹೇಳಿದರು.
ಮಾತನಾಡುವ ಸ್ವಾತಂತ್ರ ಇದೆ ಎಂದು ಇತ್ತೀಚಿನ ದಿನಗಳಲ್ಲಿ ವಿವಾದ ಸೃಷ್ಟಿಸಿಕೊಂಡು ನಾಯಕತ್ವ ಬೆಳೆಸಿಕೊಳ್ಳುವ ಮಾನಸಿಕತೆ ನಿರ್ಮಾಣ ಆಗಿದೆ. ಇದು ಸಮಾಜಕ್ಕೆ ಉಪಯುಕ್ತ ಕೊಡುಗೆ ಅಲ್ಲ. ಸಮಾಜದ ಸಾಮರಸ್ಯ ಕದಡುತ್ತೆ ಎನ್ನುವ ಸಂದರ್ಭದಲ್ಲಿ ವೈಭವೀಕರಣ ಬೇಡ ಎಂದು ತಿಳಿಸಿದರು.