Advertisement

ಸುಯೋಗ ಬಜಾರ್‌ ಪ್ರದರ್ಶನಕ್ಕೆ ಚಾಲನೆ

07:23 AM Jan 13, 2019 | Team Udayavani |

ಮೈಸೂರು: ಯೋಗ-ಸಂಬಂಧಿತ ಉತ್ಪನ್ನಗಳಲ್ಲಿ  ಪರಿಣತಿ ಹೊಂದಿರುವ ನಗರದ ಸುಯೋಗ ಮಳಿಗೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಸುಯೋಗ ಬಜಾರ್‌ ಪ್ರದರ್ಶನಕ್ಕೆ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಚಾಲನೆ ನೀಡಿದರು.

Advertisement

ಗ್ರಾಹಕರನ್ನು ಮತ್ತು ಪ್ರದರ್ಶಕರನ್ನು ಒಟ್ಟುಗೂಡಿಸುವ ಎರಡು ದಿನಗಳ ಈ ಮೇಳದಲ್ಲಿ ಉದಯೋನ್ಮುಖ ಕಲಾವಿದರು, ಕುಶಲಕರ್ಮಿಗಳು, ವಿನ್ಯಾಸಕಾರರು ಮತ್ತು ರಚನೆಕಾರರ ಮೂಲ ಆಭರಣಗಳು, ಉಡುಪುಗಳು, ಪಾದರಕ್ಷೆಗಳು, ಮನೆಯ ಅಲಂಕಾರಿಕ ವಸ್ತುಗಳು ಮತ್ತು ಕಲಾಕೃತಿಗಳ ಸಂಗ್ರಹಗಳನ್ನು ಕಾಣಬಹುದು.

ಗ್ರಾಹಕರು ಟ್ಯಾರೋಟ್‌ ಕಾರ್ಡ್‌, ಸಂಖ್ಯಾಶಾಸ್ತ್ರ, ಸ್ಫಟಿಕ ಚಿಕಿತ್ಸೆ, ಮತ್ತು ಹಬ್ಬದ ಇತರ ವಿನೋದ ಚಟುವಟಿಕೆಗಳನ್ನು ಸಹ ಅನುಭವಿಸಬಹುದು. ಸುಯೋಗ ಮಳಿಗೆಯ ಮಾಲಿಕರಾದ ಶೃತಿ ರಂಗ ಮಾತನಾಡಿ, ಸುಯೋಗ ಬಜಾರ್‌ನಂತಹ ಉತ್ಸವ ಸ್ಥಳೀಯ ಕುಶಲಕರ್ಮಿಗಳ ಕೌಶಲ ಮತ್ತು ಕಲೆಯ ಮೇಲೆ, ಅವರ ಕರಕುಶಲ ಕೆಲಸದ ಮೇಲೆ ಬೆಳಕು ಚೆಲ್ಲುತ್ತದೆ.

ಗ್ರಾಹಕರಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳು ಒಂದೇ ವೇದಿಕೆಯಲ್ಲಿ ಸಿಗುವುದಲ್ಲದೇ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸ್ಥಳೀಯ ಕಲಾವಿದರಿಗೆ ಒಂದು ವೇದಿಕೆಯನ್ನು ಒದಗಿಸುವ ಗುರಿ ಈ ಉತ್ಸವದ ಹಿಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next