Advertisement

ಐಡಿಯಲ್‌ ಐಸ್‌ಕ್ರೀಮ್‌ಗೆ ಪ್ರತಿಷ್ಠಿತ ಎಂಟು ಅವಾರ್ಡ್‌ಗಳು

01:24 PM Nov 19, 2017 | Team Udayavani |

ಮಂಗಳೂರು : ಗುರ್ಗಾಂವ್‌ ನಲ್ಲಿ ನಡೆದ ದಿ ಗ್ರೇಟ್‌ ಇಂಡಿಯನ್‌ ಐಸ್‌ಕ್ರೀಮ್‌ ಆ್ಯಂಡ್‌ ಫ್ರೋಝನ್‌ ಡೆಸರ್ಟ್‌ ಕಾಂಟೆಸ್ಟ್‌ನಲ್ಲಿ ಮಂಗಳೂರಿನ ಪ್ರತಿಷ್ಠಿತ ಐಡಿಯಲ್‌ ಐಸ್‌ಕ್ರೀಮ್‌ ಮೂರು ಬೆಸ್ಟ್‌ ಇನ್‌ ಇಂಡಿಯಾ, ನಾಲ್ಕು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಸಹಿತ ಒಟ್ಟು ಎಂಟು ಅವಾರ್ಡ್‌ಗಳನ್ನು ಪಡೆದುಕೊಂಡಿದೆ.

Advertisement

ಈ ಕುರಿತು ಐಡಿಯಲ್‌ ಐಸ್‌ಕ್ರೀಮ್‌ ನ ಆಡಳಿತ ನಿರ್ದೇಶಕ ಮುಕುಂದ ಕಾಮತ್‌ ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾಹಿತಿ ನೀಡಿದರು. ಐಸ್‌ಕ್ರೀಮ್‌ ಪ್ರಿಯರ ಮನಗೆದ್ದಿರುವ ಐಡಿಯಲ್‌ ಸಂಸ್ಥೆಯು ಇದೀಗ ಎಂಟು ಅವಾರ್ಡ್‌ಗಳನ್ನು ಗಳಿಸಿಕೊಂಡು ದೇಶದ ಪ್ರತಿಷ್ಠಿತ ಐಸ್‌ಕ್ರೀಮ್‌ ಉತ್ಪಾದಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಡ್ಯುಪಾಂಟ್‌ ಹಾಗೂ ಇಂಡಿಯನ್‌ ಡೈರಿ ಅಸೋಸಿಯೇಶನ್‌ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 103 ಸಂಸ್ಥೆಗಳು ಭಾಗ ವಹಿಸಿದ್ದು, 6 ವಿಭಾಗಗಳಲ್ಲಿ 380ಕ್ಕೂ ಅಧಿಕ ಪ್ರವೇಶಗಳು ಬಂದಿದ್ದವು. ಅಂತಾರಾಷ್ಟ್ರೀಯ ಮಟ್ಟದ ಸ್ಪೆಷಲಿಸ್ಟ್‌ ಗಳು ಹಾಗೂ 25ಕ್ಕೂ ಅಧಿಕ ಅನುಭವಿ ತೀರ್ಪುಗಾರರು ಭಾಗವಹಿಸಿದ್ದರು. ಇದರಲ್ಲಿ ಐಡಿಯಲ್‌ ಹೆಚ್ಚಿನ ಅವಾರ್ಡ್‌ ಪಡೆದಿದೆ ಎಂದರು.

ಸರಣಿ ಪ್ರಶಸ್ತಿಗಳು ಸಂಸ್ಥೆಯು 2008ರಲ್ಲಿ 4 ಅವಾರ್ಡ್‌ ಗಳು, 2009ರಲ್ಲಿ 2 ಅವಾರ್ಡ್‌ಗಳು, 2010ರಲ್ಲಿ 3 ಅವಾರ್ಡ್‌ಗಳು, 2013 ರಲ್ಲಿ ಮೊದಲ ಬಾರಿಗೆ 2 ಚಿನ್ನದ ಪದಕ ಗಳು ಸಹಿತ 5 ಅವಾರ್ಡ್‌ಗಳು, 2016 ರಲ್ಲೂ ಹಲವು ಅವಾರ್ಡ್‌ಗಳನ್ನು ಪಡೆದು ಕೊಂಡಿದೆ. ಅತ್ಯಂತ ಶ್ರಮದಿಂದ ತಂಡ ವಾಗಿ ಕೆಲಸ ನಿರ್ವಹಿಸಿದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ಐಸ್‌ಕ್ರೀಮ್‌ ಗಳನ್ನು ನೀಡಲು ಸಾಧ್ಯವಾಗಿದೆ.

ಸಂಸ್ಥೆಯ ವೆನಿಲ್ಲಾ ಐಸ್‌ಕ್ರೀಮ್‌ ಸತತ 3ನೇ ಬಾರಿಗೆ ಚಿನ್ನವನ್ನು ಗಳಿಸಿ ಕೊಂಡಿದ್ದು ಗುಣಮಟ್ಟದ್ದಾಗಿದೆ. ಈಗಾಗಲೇ 40ಕ್ಕೂ ಅಧಿಕ ಫ್ಲೆàವರ್‌ಗಳನ್ನು ಪರಿಚಯಿಸಿದೆ. ದೇಶದಲ್ಲೇ ಐಡಿಯಲ್‌ನ ವೆನಿಲ್ಲಾ ಫ್ಲೆವರ್‌ಗೆ ಉತ್ತಮ ಬೇಡಿಕೆ ಇದ್ದರೆ, ಪಾರ್ಲರ್‌ನಲ್ಲಿ ಗಡ್‌ಬಡ್‌ ಉತ್ತಮ ಬೇಡಿಕೆಯನ್ನು ಗಳಿಸಿಕೊಂಡಿದೆ ಎಂದು ವಿವರಿಸಿದರು.

Advertisement

ಜಿಎಸ್‌ಟಿ – ಗ್ರಾಹಕರಿಗೆ ಲಾಭ ಜಿಎಸ್‌ಟಿ ಯಿಂದ ಐಡಿಯಲ್‌ ಗ್ರಾಹಕರಿಗೆ ಉತ್ತಮ ಲಾಭವಾಗಿದೆ. ಪ್ರತಿ ರಾಜ್ಯದಲ್ಲೂ ಒಂದೇ ಬೆಲೆಗೆ ಉತ್ಪನ್ನಗಳನ್ನು ನೀಡಲು ಅನುಕೂಲ ವಾಗಿದೆ. ತೆರಿಗೆ ಕಡಿತ ಹಿನ್ನೆಲೆಯಲ್ಲಿ ಉತ್ಪನ್ನಗಳ ಬೆಲೆಯನ್ನೂ ಕಡಿಮೆ ಮಾಡಿದ್ದೇವೆ. ಉತ್ಪಾದನೆಯನ್ನು ಹೆಚ್ಚಿಸಲು ಕಿನ್ನಿಗೋಳಿಯಲ್ಲಿ ಹೊಸ ಘಟಕ ಸ್ಥಾಪನೆಗೆ ಸಿದ್ಧತೆ ನಡೆಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಯಾ ಕಾಮತ್‌, ದಿವ್ಯಾ ಕಾಮತ್‌, ಜನರಲ್‌ ಮ್ಯಾನೇಜರ್‌ ಎಂ.ಎನ್‌. ಭಟ್‌, ಸಂಸ್ಥೆಯ ಸೀನಿಯರ್‌ ಮಾರ್ಕೆಟ್‌ ಮ್ಯಾನೇಜರ್‌ ಅಶ್ವಿ‌ನ್‌, ಮ್ಯಾನೇಜರ್‌ ನಾರಾಯಣ್‌ ಉಪಸ್ಥಿತರಿದ್ದರು. 

8 ಅವಾರ್ಡ್‌ಗಳು ಐಡಿಯಲ್‌ನ ಮ್ಯಾಂಗೋ ಸೊರ್ಬೆಟ್‌ಗೆ ಬೆಸ್ಟ್‌ ಇನ್‌ ಕ್ಲಾಸ್‌ ಫಾರ್‌ ಸೊರ್ಬೆಟ್‌, ಮಝಿ ಪಾನ್‌ಗೆ ಬೆಸ್ಟ್‌ ಇನ್‌ ಕ್ಲಾಸ್‌ ಫಾರ್‌ ಇನ್ನೋವೇಶನ್‌, ಬೆಸ್ಟ್‌ ಇನ್‌ ಕ್ಲಾಸ್‌ ಫಾರ್‌ ವೆನಿಲ್ಲಾ ಫ್ರೋಝನ್‌ ಡೆಸರ್ಟ್‌, ವೆನಿಲ್ಲಾ ಐಸ್‌ಕ್ರೀಮ್‌, ಸೊರ್ಬೆಟ್‌, ವೆನಿಲ್ಲಾ ಫ್ರೋಝನ್‌ ಡೆಸರ್ಟ್‌ಗೆ ಚಿನ್ನದ ಪದಕ ಹಾಗೂ ಸ್ವಿಸ್‌ ಚಾಕೊಲೆಟ್‌ಗೆ ಬೆಳ್ಳಿಯ ಪದಕ ಲಭಿಸಿರುತ್ತದೆ ಎಂದು ಮುಕುಂದ ಕಾಮತ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next