ಉಡುಪಿ: ಸದೃಢ ರಾಷ್ಟ್ರ ನಿರ್ಮಾಣದ ಸಲುವಾಗಿ ಕೈಗೊಂಡಿದ್ದ ಅನೇಕ ದಿಟ್ಟ ನಿಲುವುಗಳಿಂದಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದಿಗೂ ವಿಶ್ವದ ಅಗ್ರಮಾನ್ಯ ನಾಯಕಿಯಾಗಿದ್ದಾರೆ ಎಂದು ಆಹಾರ ಸಚಿವ ಯು.ಟಿ. ಖಾದರ್‌ಹೇಳಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಿದ್ದ ಇಂದಿರಾ ಗಾಂಧಿ ಜನ್ಮ ಶತ ಸಂಭ್ರಮ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು. ಅಜ್ಜರಕಾಡಿನ ಭುಜಂಗ ಪಾರ್ಕ್ ನಲ್ಲಿರುವ ಗಾಂಧಿ ಪ್ರತಿಮೆಗೆ ಹಾರ ಹಾಕಿ, ಪ್ರತೀ ಬ್ಲಾಕ್‌ನಿಂದ ನೂರು ದೀಪ ನಮನ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡ ಲಾಯಿತು. ಉದ್ಘಾಟಕರಾದ ಸಚಿವ ಪ್ರಮೋದ್ ಮಧ್ವರಾಜ್, ಶೋಷಿತ ಮಹಿಳೆಯರು, ಕಾರ್ಮಿಕರು, ರೈತರು, ಹಿಂದುಳಿದ ವರ್ಗದವರು ತಲೆ ಎತ್ತಿ ಬದುಕುವಂತೆ ರಾಷ್ಟ್ರದ ಸಾಮಾಜಿಕ ಸ್ಥಿತಿಗತಿಯನ್ನು ಬದಲಾಯಿಸಿದ ಕೀರ್ತಿ ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನಮ್ಮ ಮಹಿಳೆಯರು ದಿಟ್ಟತನವನ್ನು ಮೈಗೂಡಿಸಿಕೊಂಡು ಸದೃಢ ಸಮಾ ಜದ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಕಾರ್ಯಕರ್ತೆ ಜಯಶ್ರೀ ಭಟ್‌ರಿಗೆ “ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ’ಯನ್ನು ನೀಡಿ ಗೌರವಿಸ ಲಾಯಿತು. ಜಿಲ್ಲೆಯ 10 ಬ್ಲಾಕ್‌ಗಳಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಹತ್ತು ಮಹಿಳೆಯರನ್ನು ಸಮ್ಮಾನಿಸಲಾಯಿತು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಗೀತಾ ವಾಗೆ ಅವರಿಗೆ ನಿಕಟಪೂರ್ವ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ ಅಧಿಕಾರ ಹಸ್ತಾಂತರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಮಾಜಿ ಶಾಸಕ ಗೋಪಾಲ ಭಂಡಾರಿ, ಉಸ್ತುವಾರಿಗಳಾದ ಶೈಲಾ ಕುಟ್ಟಪ್ಪ, ಜಿ.ಎ. ಬಾವಾ, ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ.ಎ. ಗಫೂರ್, ಶ್ಯಾಮಲಾ ಭಂಡಾರಿ, ಜಯಶ್ರೀ ಕೃಷ್ಣರಾಜ್, ಸರಳಾ ಕಾಂಚನ್, ಸರಸು ಬಂಗೇರ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಬ್ಲಾಕ್ ಮಹಿಳಾ ಅಧ್ಯಕ್ಷರಾದ ಸಂಧ್ಯಾ ಶೆಟ್ಟಿ, ಗೋಪಿ ನಾಯಕ್, ಮಮತಾ ಶೆಟ್ಟಿ, ಜ್ಯೋತಿ ಪುತ್ರನ್, ಗೌರಿ ದೇವಾಡಿಗ, ಲಲಿತಾ ಗಾಣಿಗ, ಸುಜಾತಾ ಆಚಾರ್ಯ, ಚಂದ್ರಿಕಾ ಶೆಟ್ಟಿ, ನಳಿನಿ ಆಚಾರ್ಯ, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫಜಾìನಾ ಸಂಜಯ್, ಸೇವಾದಳದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಾಯಕರಾದ ಅಮೃತ್ ಶೆಣೈ, ವಿಶ್ವಾಸ್ ಅಮೀನ್, ಕ್ರಿಸ್ಟನ್ ಅಲ್ಮೇಡಾ, ಐರಿನ್ ಅಂದ್ರಾದೆ, ಮಲ್ಲಿಕಾ ಪೂಜಾರಿ ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಡಾ| ಸುನಿತಾ ಶೆಟ್ಟಿ ಹಾಗೂ ರೋಶನಿ ಒಲಿವರ್ ಕಾರ್ಯಕ್ರಮ ನಿರ್ವಹಿಸಿ ಉಪಾಧ್ಯಕ್ಷೆ ಜ್ಯೋತಿ ಹೆಬ್ಟಾರ್ ವಂದಿಸಿದರು.