Advertisement

ರಾಬಕೊ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷರಾಯ್ಕೆ ಕಸರತ್ತು

11:12 AM May 23, 2019 | Suhan S |

ಗಂಗಾವತಿ: ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಮೇ 25ರಂದು ನಿಗದಿಯಾಗಿದ್ದು, ಅಧ್ಯಕ್ಷರ ಹುದ್ದೆಗೆ ಅವಿರೋಧ ಆಯ್ಕೆ ನಡೆಸಲು ಸಹಕಾರಿ ಮುಖಂಡರು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಮೂರು ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ 12 ಜನ ಹಾಗೂ ಬೆಂಗಳೂರು ಕೆಎಂಎಫ್‌ನ ಎಂಡಿ, ಸಹಕಾರಿ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಪಶುಸಂಗೋಪನಾ ಇಲಾಖೆಯ ಒಬ್ಬ ಅಧಿಕಾರಿ ಸೇರಿ ಒಟ್ಟು 15 ಜನ ನಿರ್ದೇಶಕರು ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾವಣೆಯ ಅಧಿಕಾರ ಪಡೆದಿರುತ್ತಾರೆ. ಈ ಭಾರಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲು ಸಹಕಾರಿ ಧುರೀಣರು ಮೂರು ಜಿಲ್ಲೆಯ ಜನಪ್ರತಿನಿಧಿಗಳು ಬಹುತೇಕ ನಿರ್ಧಾರ ಮಾಡಿದ್ದು, ಪ್ರತಿ ಜಿಲ್ಲೆಗೆ 20 ತಿಂಗಳ ಅವಧಿಯಂತೆ ಹಂಚಿಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಹಗರಿಬೊಮ್ಮನಹಳ್ಳಿ ಶಾಸಕ ಎಂ. ಭೀಮಾನಾಯ್ಕ ಅವರನ್ನು ಕೆಎಂಎಫ್‌ ರಾಜ್ಯ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಲು ತೀರ್ಮಾನವಾಗಿದೆ.

Advertisement

ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತುತ ಕೊಪ್ಪಳ ಜಿಲ್ಲೆಯಿಂದ ಮರಿವಾಡ ಸತ್ಯನಾರಾಯಣ, ವೆಂಕನಗೌಡ ಹಿರೇಗೌಡರ್‌, ರಾಯಚೂರಿನಿಂದ ಜಿ. ಸತ್ಯನಾರಾಯಣ, ಬಳ್ಳಾರಿ ಜಿಲ್ಲೆಯಿಂದ ಮರುಳುಸಿದ್ಧನಗೌಡ ಅವರ ಹೆಸರು ಕೇಳಿ ಬರುತ್ತಿದೆ. ಮೊದಲ ಅವಧಿಯಲ್ಲಿ ತಾವೇ ಅಧ್ಯಕ್ಷರಾಗಬೇಕೆಂದು ಬಹುತೇಕರು ಪಟ್ಟುಹಿಡಿದಿದ್ದಾರೆ. ಮೂರು ಜಿಲ್ಲೆಯ ಶಾಸಕರು, ಸಂಸದರು ಮತ್ತು ಸಚಿವರು ಆಯಾ ಜಿಲ್ಲೆಗೆ ಅಧ್ಯಕ್ಷ ಸ್ಥಾನ ಸಿಗಲಿ ಎಂಬ ಲಾಭಿ ನಡೆಸುತ್ತಿದ್ದಾರೆ.

•ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next