Advertisement

ರಾಷ್ಟ್ರಪತಿಗಳಿಗೆ ಗೊತ್ತಿರಲಿಕ್ಕಿಲ್ಲ: ಚಿಮೂ

07:05 AM Oct 27, 2017 | |

ಬೆಂಗಳೂರು: ಟಿಪ್ಪು ಭಾರತದ ಹಿಟ್ಲರ್‌. ಅಂತಹ ಕ್ರೌರ್ಯ ವ್ಯಕ್ತಿಯ ಜಯಂತಿಯನ್ನು ಸರ್ಕಾರ ಆಚರಿಸುವುದು ಖಂಡನೀಯ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದೆಂದು ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಆಗ್ರಹಿಸಿದ್ದಾರೆ. 

Advertisement

“ಟಿಪ್ಪು ಅತ್ಯಂತ ಧೈರ್ಯಶಾಲಿ ಆಗಿರಬಹುದು. ಆದರೆ, ಅಷ್ಟೇ ಕ್ರೂರಿಯೂ, ನರಹಂತಕನೂ ಆಗಿದ್ದನು. ಹಿಟ್ಲರ್‌, ಔರಂಗಜೇಬ ಮತ್ತು ಟಿಪ್ಪು ಇವೆರಲ್ಲರೂ ಒಂದೇ ಸಾಲಿನಲ್ಲಿ ನಿಲ್ಲುವವರು. ಅಂತಹ ಕ್ರೂರ ವ್ಯಕ್ತಿಯನ್ನು ಸರ್ಕಾರದಿಂದಲೇ ಆರಾಧನೆ ಮಾಡುವುದು ಎಷ್ಟು ಸರಿ? ಈ ಹಿಂದೆಯೂ ಇದನ್ನು ವಿರೋಧಿಸಿದ್ದೆನು.

ತಕ್ಷಣ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಟಿಪ್ಪು ಸುಲ್ತಾನ್‌ನ ಕ್ರೌರ್ಯದ ಬಗ್ಗೆ ಗೊತ್ತಿಲ್ಲದೆ, ರಾಷ್ಟ್ರಪತಿಗಳು ಟಿಪ್ಪು ಅನ್ನು ಹೊಗಳಿರಬಹುದು. ಆದರೆ ಸರ್ಕಾರದಿಂದ ಟಿಪ್ಪು ಜನ್ಮದಿನ ಆಚರಿಸಬಾರದು ಎಂದು ಅವರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next