Advertisement

ಧರ್ಮ ಪರಿಪಾಲನೆಯಿಂದ ನೆಮ್ಮದಿ

02:47 PM Jan 15, 2021 | Team Udayavani |

ಹೊನ್ನಾಳಿ: ಭಾರತೀಯ ಸಂಸ್ಕೃತಿಯಲ್ಲಿ ಸತ್ಯ ಮತ್ತು ಧರ್ಮಕ್ಕೆ ಬೆಲೆಯಿದೆ. ನಡೆ-ನುಡಿ ಒಂದಾಗಿ ಬಾಳುವುದು ಮುಖ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ| ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ನ್ಯಾಮತಿ ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ದೇವಿಯ ಪುನರ್‌ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮಾನವ ಜನ್ಮ ಅಮೂಲ್ಯವಾದುದು. ಸತ್ಯ-ಧರ್ಮ ಪರಿಪಾಲನೆಯಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಸಾಧ್ಯ ಎಂದರು.

ಇದನ್ನೂ ಓದಿ:ತುಂಗಭದ್ರೆ ಮಡಿಲಲ್ಲಿ ಸಂಕ್ರಾಂತಿ ಸಂಭ್ರಮ

ವೀರಶೈವ ಧರ್ಮದಲ್ಲಿ ಆಧ್ಯಾತ್ಮ ಸಂಪತ್ತು ಹೆಚ್ಚಿದೆ. ಪಂಚಪೀಠಗಳು ಭಕ್ತರ ಕಲ್ಯಾಣ, ಸಂಸ್ಕಾರಕ್ಕೆ ಪ್ರಯತ್ನಿಸುತ್ತಿವೆ. ಧರ್ಮದಲ್ಲಿ ರಾಜಕೀಯ ಪ್ರವೇಶ ಮಾಡಿದರೆ ಅವನತಿ ಖಂಡಿತ. ಧರ್ಮ, ಸಂಸ್ಕೃತಿ, ಪರಂಪರೆ ಎತ್ತಿ ಹಿಡಿಯುವಲ್ಲಿ ಸಮಾಜ ಕೈಜೋಡಿಸಬೇಕೆಂದರು. ಕೋಹಳ್ಳಿಮಠದ ವಿಶ್ವರಾಧ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲ ಹಳ್ಳೂರು ಕರುಣಾಕರ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಪಂಚಪೀಠಗಳ ಕುರಿತು ಉಪನ್ಯಾಸ ನೀಡಿದರು. ಮಾಜಿ ಶಾಸಕ ಡಾ| ಡಿ.ಬಿ. ಗಂಗಪ್ಪ, ಎನ್‌.ಡಿ. ಪಂಚಾಕ್ಷರಪ್ಪ, ಬಳೆಗಾರ ಗುರುಶಾಂತಪ್ಪ ಮಾತನಾಡಿದರು. ಸುನಂದಾ ಪ್ರಾರ್ಥಿಸಿದರು, ವೀರೇಶ ಹಲಗೇರಿ ಸ್ವಾಗತಿಸಿದರು. ಎನ್‌.ಜೆ. ವಾಗೀಶ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next