Advertisement
ಅಪ್ರಸ್ತುತವಾದ ವ್ಯವಸ್ಥೆ!ಅಂಚೆ ಇಲಾಖೆಯು ಹಳ್ಳಿಗಳ ಜನರ ಮಾಹಿತಿಯನ್ನು ಪತ್ರದ ಮೂಲಕ ರವಾನಿಸಲು ಗ್ರಾಮಕ್ಕೊಂದರಂತೆ ಅಂಚೆ ಡಬ್ಬಿಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಆ ಮೂಲಕ ಊರಿನ ಜನರು ಪತ್ರ ಬರೆದು ಡಬ್ಬಿಗಳಿಗೆ ಹಾಕುತ್ತಿದ್ದರು. ಅಂಚೆಯಣ್ಣ ಲೆಟರ್ ಡಬ್ಬ ತೆರೆದು ಅದರಲ್ಲಿನ ಪತ್ರಗಳನ್ನು ರವಾನಿಸುವ ಕೆಲಸ ಮಾಡುತ್ತಿದ್ದರು. ಆದರೆ ಈ ವ್ಯವಸ್ಥೆ ಈಗ ನಿಷ್ಕ್ರಿಯಗೊಂಡು ಅಂಚೆ ಡಬ್ಬಿಗಳು ಇದ್ದ ಜಾಗದಲ್ಲಿಯೇ ತುಕ್ಕು ಹಿಡಿದು ಕಣ್ಮರೆಯಾಗುತ್ತಿವೆ.
ಉಡುಪಿ ಡಿವಿಜನ್‌ನಲ್ಲಿ 600 ಅಂಚೆ ಪೆಟ್ಟಿಗೆಗಳಿದ್ದು, ಅದರಲ್ಲಿ ಕೆಲ ಲೆಟರ್ ಬಾಕ್ಸ್‌ಗಳು ತುಕ್ಕುಹಿಡಿದಿವೆ. ಬಹುತೇಕ ಗ್ರಾಮಗಳಲ್ಲಿ ಅಂಚೆ ಡಬ್ಬಿಗಳೇ ಇಲ್ಲ. ನಗರದ ಬಹುತೇಕ ಕಡೆಯೂ ಅಂಚೆ ಡಬ್ಬಿಗಳ ಬಾಗಿಲನ್ನೂ ತೆರೆಯುವುದೇ ಇಲ್ಲ. ಸುಸ್ಥಿರ ಅಂಚೆ
ಡಬ್ಬಿಗಳಿಗೆ ಪತ್ರ
ಈಗ ಜನರೂ ಒಂದಲ್ಲ ಒಂದು ನೆಪದಲ್ಲಿ ನಗರಗಳಿಗೆ ಓಡಾಡುತ್ತಾರೆ. ಹೀಗಾಗಿ ತುಕ್ಕು ಹಿಡಿದ ಅಂಚೆ ಡಬ್ಬಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಂಚೆ ಕಚೇರಿಗಳಲ್ಲಿರುವ ಸುಸ್ಥಿರವಾದ ಅಂಚೆ ಡಬ್ಬಿಗಳಿಗೆ ಕಾಗದ ಪತ್ರಗಳನ್ನು ಹಾಕುತ್ತಿದ್ದಾರೆ.
Related Articles
-ರವೀಂದ್ರ ಕುಮಾರ್,
ಉಡುಪಿ.
Advertisement