ಬೆಂಗಳೂರು : ‘ಬಿಜೆಪಿ ಉಪಾಧ್ಯಕ್ಷ ಹುದ್ದೆ ಸಣ್ಣದಲ್ಲ, ಅದು ಸಣ್ಣ ಹುದ್ದೆ ಎಂದು ಪರಿಗಣಿಸಿದರೆ ಏನು ಹೇಳಬೇಕೋ ಗೊತ್ತಿಲ್ಲ’ ಎಂದು ‘ವಿಜಯೇಂದ್ರ ಅವರಿಗೆ ಸ್ಥಾನ ಮಾನ’ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಉಪಾಧ್ಯಕ್ಷ ಹುದ್ದೆ ಸಣ್ಣ ಹುದ್ದೆ ಅಲ್ಲ ಎಂದು ಪ್ರತಿಪಾದಿಸಿ, ಇವತ್ತು ಹಲವು ಕಾರ್ಯಕರ್ತರು ಬಂದು ಭೇಟಿ ಆಗಿದ್ದರು .ನಿಗಮ ಮಂಡಳಿ ನೇಮಕ ವಿಳಂಬಕ್ಕೆ ಹಲವು ಕಾರ್ಯಕರ್ತರ ಅಸಮಾಧಾನ ಇದೆ. ಹಲವರು ಪರಿಸ್ಥಿತಿಯ ಲಾಭ ಪಡೆದು ಎಂಜಾಯ್ ಮಾಡ್ತಿದ್ದಾರೆ. ಪಕ್ಷಕ್ಕೆ ಕೊಡುಗೆ ನೀಡದವರನ್ನ ಕೈ ಬಿಡಬೇಕು’ ಎಂದು ಹೇಳಿದರು.
ಈಗಾಗಲೇ ನಿಗಮ ಮಂಡಳಿ ನೇಮಕ ಆಗಬೇಕಿತ್ತು, ಈವರೆಗೂ ಯಾಕೆ ಆಗಿಲ್ಲ ಎಂಬುದು ಗೊತ್ತಿಲ್ಲ. ಮಾಧ್ಯಮದವರು ಮುಖ್ಯ ಮಂತ್ರಿ, ಸಚಿವರನ್ನು ಸೇರಿ ಎಲ್ಲರನ್ನೂ ಬದಲಿಸುತ್ತೀರಿ ಎಂದು ವ್ಯಂಗ್ಯವಾಡಿದರು.
ವಿಜಯೇಂದ್ರಗೆ ಸ್ಥಾನ ಮಾನ ವಿಚಾರ ಖಾತೆಗೂ, ಪಕ್ಷಕ್ಕೂ ನ್ಯಾಯ ನೀಡದ, ಪಕ್ಷಕ್ಕೂ ಹೊರೆ ಆಗಿರದವರ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಬೇಕು.ಕಾಂಗ್ರೆಸ್ ನವರು ಹಳೆ ಗಂಡನ ಪಾದವೇ ಗತಿ ಎಂದು ಮುಳುಗಿದ್ದಾರೆ. ಕಾಂಗ್ರೆಸ್ ನವರು ಸೋಲಿನ ಮೇಲೆ ಸೋಲು ಕಂಡರೂ ಸೋನಿಯಾ ಗಾಂಧಿಯೇ ಬೇಕು ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಪಾರ್ಲಿಮೆಂಟರಿ ಬೋರ್ಡ್ ಸಭೆಯ ನಂತರ ಗೋವಾ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಹೋಳಿ ನಂತರ ಗೋವಾ ಸರ್ಕಾರ ರಚನೆಯಾಗುತ್ತದೆ ಎಂದು ಹೇಳಿದರು.