ಮೈಸೂರು: ಸಮಾಜದಲ್ಲಿ ಬಾಬು ಜಗಜೀವನರಾಂ ಅವರ ಚಿಂತನೆಗಳು ಕಾರ್ಯಗತಗೊಂಡಾಗ ಮಾತ್ರ ದಲಿತರು, ಹಿಂದುಳಿದ ಮತ್ತು ಅಸ್ಪೃಶ್ಯ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದು ಕೆಪಿಎಸ್‌ಸಿ ಸದಸ್ಯ ಪೊ›. ಎಚ್.ಗೋವಿಂದಯ್ಯ ಹೇಳಿದರು.
ಮೈಸೂರು ವಿವಿಯ ಡಾ.ಬಾಬು ಜಗಜೀವನರಾಂ ಅಧ್ಯಯನ ಸಂಶೋ ಧನ ಮತ್ತು ವಿಸ್ತರಣಾ ಕೇಂದ್ರ ದಿಂದ ಆಯೋಜಿಸಿದ್ದ ಬಾಬೂ ಜಗಜೀವನ ರಾಂ ಚಿಂತನೆಗಳ ಪ್ರವೇಶಿಕೆ ಎಂಬ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾ ಗಾರ ಉದ್ಘಾಟಿಸಿ ಮಾತನಾಡಿದರು.
ಡಾ. ಬಾಬು ಜಗಜೀವನರಾಂ ಅತ್ಯಂತ ಕ್ರಿಯಾಶೀಲ ರಾಜಕಾರಣಿ ಯಾಗಿದ್ದರು. ಮತಾಂತರದ ವಿರೋಧಿ ಯಾಗಿದ್ದ ಅವರು ಮತಾಂತರ ಪ್ರಕ್ರಿಯೆ 2ನೇ ದರ್ಜೆಯ ಗುಲಾಮಗಿರಿ ಸಮುದಾಯವನ್ನು ಸೃಷ್ಟಿಸುತ್ತದೆ ಎಂಬ ಭಾವನೆ ಹೊಂದಿದ್ದರು. ಹೀಗಾಗಿ ಅವರು ಮತಾಂತರದ ಹುನ್ನಾರವನ್ನು ತಪ್ಪಿಸುವ ಪ್ರಯತ್ನ ಮಾಡಿದ್ದರು ಎಂದರು.
ಅವರ ಚಿಂತನೆಯಲ್ಲಿ ಮತಾಂತರ ವನ್ನು ಕೈಬಿಡಬೇಕು ಎಂಬ ಪ್ರತಿಪಾದನೆ ಕಾಣಬಹುದಾಗಿದೆ. ಅವರ ಸಮಾನತೆಯ ಚಿಂತನೆಗಳನ್ನು ಇಂದು ನಾವು ಕಾಪಾಡಿಕೊಳ್ಳಬೇಕಿದ್ದು, ಅವರ ಚಿಂತನೆಗಳ ಬಗ್ಗೆ ಗಂಭೀರವಾಗಿ ಚರ್ಚೆಗಳನ್ನು ನಡೆಸುವ ಜತೆಗೆ ಅವುಗಳ ಕಡೆಗೆ ವಿನಮ್ರವಾಗಿ ಪ್ರವೇಶಿಸಬೇಕಿದೆ ಎಂದು ತಿಳಿಸಿದರು.
ಡಾ. ಬಾಬು ಜಗಜೀವನರಾಂ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ ಮಾತನಾಡಿ, ಜಗಜೀವರಾಂ ಸಮಾನತೆ ಮತ್ತು ಜಾತ್ಯತೀತತೆ ಪ್ರತಿಪಾದಿಸಿದ್ದರು. ಜತೆಗೆ ಅದರ ಮುಂದುವರೆದ ಭಾಗವೆಂಬಂತೆ ಒಳಮೀಸಲಾತಿ ಜಾರಿಗೆ ತರಬೇಕೆಂದು ಪ್ರಸ್ತಾಪಿಸಿದ್ದರು. ನಾಯಕನಾದವನು ಒಂದು ಸಮುದಾಯದ ಅಂಚಿ ನಲ್ಲಿರುವ ಎಲ್ಲಾ ಜಾತಿಗಳನ್ನು ಜೊತೆಗೆ ಕೊಂಡೊಯ್ಯಬೇಕು.
ರಾಜಕಾರಣದ ಜತೆಗೆ ಸಮಾನತೆ ಪ್ರತಿಪಾದಿಸಬೇಕೆಂಬ ಮನಸ್ಥಿತಿ ಹೊಂದಿದ್ದ ವಿರಳ ರಾಜ ಕಾರಣಿಗಳಲ್ಲಿ ಜಗಜೀವನ ರಾಂ ಕೂಡ ಒಬ್ಬರಾಗಿದ್ದರು ಎಂದು ಹೇಳಿದರು. ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ರಾಜಣ್ಣ, ಡಾ.ಎಂ.ಶ್ರೀನಿವಾಸಮೂರ್ತಿ, ಡಾ. ಚಿಕ್ಕಮಾದು ಹಾಜರಿದ್ದರು.