Advertisement

ತೆರಿಗೆ ವಿನಾಯಿತಿ ಪಿಎಫ್ ಎಲ್ಲರಿಗೂ ವಿಸ್ತರಣೆ ಸಾಧ್ಯತೆ

12:14 AM Jan 23, 2022 | Team Udayavani |

ಹೊಸದಿಲ್ಲಿ: ಮುಂಬರುವ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ವ್ಯಾಪ್ತಿಯ ಭವಿಷ್ಯ ನಿಧಿ (ಪ್ರಾವಿಡೆಂಟ್‌ ಫಂಡ್ ) ಮೊತ್ತದ ಮಿತಿಯನ್ನು ಎಲ್ಲರಿಗೂ ಅನ್ವಯವಾಗುವಂತೆ 5 ಲಕ್ಷ ರೂ.ಗಳಿಗೆ ಏರಿಕೆ ಮಾಡುವ ಸಾಧ್ಯತೆಗಳಿವೆ.

Advertisement

2021-22ನೇ ಸಾಲಿನ ಮುಂಗಡ ಪತ್ರ ಮಂಡಿಸುವ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತೆರಿಗೆ ವಿನಾಯಿತಿ ಮೊತ್ತ ಪ್ರಮಾಣವನ್ನು 2.5 ಲಕ್ಷ ರೂ.ಗೆ ಪರಿಷ್ಕರಿಸಿದ್ದರೂ ಅನಂತರ ಅದನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದ್ದರು. ಆದರೆ ಈ ಸವಲತ್ತು ಕೇವಲ ಸರಕಾರಿ ಉದ್ಯೋಗಿಗಳಿಗೆ ಮಾತ್ರ ಲಭಿಸುತ್ತಿದೆ. ಅದನ್ನೂ ಎಲ್ಲ ರೀತಿಯ ವೇತನದಾರರಿಗೆ ವಿಸ್ತರಿಸಬೇಕು ಎಂಬ ಬೇಡಿಕೆ ಪ್ರಬಲವಾಗತೊಡಗಿದೆ.
ಅದಕ್ಕೆ ಪೂರಕವಾಗಿ ವಿವಿಧ ಕೇಂದ್ರ ಸರಕಾರದ ಉದ್ಯೋಗಿಗಳ ಸಂಘಟನೆಗಳೂ ಕೂಡ ಸರಕಾರದ ನಿರ್ಧಾರದ ಲಾಭ ಎಲ್ಲರಿಗೂ ಆಗುವಂತೆ ನೀತಿ ರೂಪಿಸಬೇಕು ಎಂದು ಕೇಂದ್ರ ವಿತ್ತ ಸಚಿವಾಲಯಕ್ಕೆ ಮನವಿಗಳೂ ಸಲ್ಲಿಕೆಯಾಗಿದ್ದವು.

ಭವಿಷ್ಯ ನಿಧಿಗೆ ಕೊಡುಗೆ ನೀಡದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವವರಿಗೆ ಕೇಂದ್ರದ ಈ ನಿರ್ಧಾರದಿಂದಾಗಿ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತೆರಿಗೆ ಪರಿಣತರು ಮತ್ತು ಭವಿಷ್ಯ ನಿಧಿ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next