Advertisement
ಈ ಬಾರಿಯ ಪ್ರದರ್ಶನ ಹೆಚ್ಚು ಹೆಚ್ಚು ಯುವಕರನ್ನು ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ಕುರುಕುಲ ತಿಂಡಿ, ಸಾಂಬಾರ, ಮಸಾಲೆ ಹಾಗೂ ಪುಳಿಯೊಗರೆ ತಯಾರಿಕೆ, ಆಯುರ್ವೇದ ಔಷಧಿ ನಿರ್ಮಾಣ, ಸಿಮೆಂಟ್ ಬ್ರಿಕ್ಸ್, ನೆಲಹಾಸು ನಿರ್ಮಾಣ, ಕಂಪ್ಯೂಟರ್ ಗ್ರಾμಕ್ಸ್ ಸಹಾಯದಿಂದ ಕಟ್ಟಿಗೆ ಕೆಲಸ, ಖಾದಿ ಗ್ರಾಮೋದ್ಯೋಗದ ಸಾಧ್ಯತೆಗಳನ್ನು ಪರಿಚಯಿಸುವ ಪ್ರದರ್ಶನವಾಗಿದೆ.
Related Articles
Advertisement
ಪ್ರದರ್ಶನದಲ್ಲಿ ಒಟ್ಟು 65 ಮಳಿಗೆಗೆಳಲ್ಲಿ ಉತ್ಪನ್ನಗಳು ಪ್ರದರ್ಶನಕ್ಕೆ ಇದ್ದವು. ನಾಳೆಯಿಂದ ಇನ್ನಷ್ಟು ಉತ್ಪಾದಕರು, ಮುಖ್ಯವಾಗಿ ಬೂಟ್, ಸಾಕ್ಸ್, ಪುಸ್ತಕಗಳು, ದಾಲ್ ಮಿಲ್, ಅಕ್ಕಿ ಮಿಲ್‌ಗಳ ಮಾಲೀಕರು ತಮ್ಮ ಮಳಿಗೆ ತೆರೆಯುವ ಮೂಲಕ ವೀಕ್ಷಣೆಗೆ ಮತ್ತು ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಉತ್ಪಾದನಾ ವಲಯ ಹೆಚ್ಚಳಕ್ಕೆ ಇನ್ನಷ್ಟು ಉತ್ತೇಜನ ನೀಡಲಿದ್ದಾರೆ.
ಪತಿ, ಪತ್ನಿ ಉತ್ಪಾದಕರು: ಮೇಳದಲ್ಲಿ ಕಮಲ್ ಕುರುಕಲು ತಿಂಡಿಗಳ ಮಳಿಗೆ ಗಮನ ಸೆಳೆಯುತ್ತಿದೆ. ಒಂದೇ ಮಳಿಗೆಯಲ್ಲಿ ಪತಿ ಮುಕುಂದ ವರು ಹಾಗೂ ಪತ್ನಿ ರಶ್ಮಿ ಮುಕುಂದ ಅವರು ಇಬ್ಬರು ತಾವು ಉತ್ಪಾಧಿಸುತ್ತಿರುವ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಕಮಲ್ ಬ್ರಾಂಡಿನ ಅಡಿಯಲ್ಲಿ ಮುಕುಂದ ಅವರು 22 ರೀತಿಯ ತಿಂಡಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.
ಇದಕ್ಕೆ ಪೈಪೋಟಿ ಎನ್ನುವಂತೆ ಪತ್ನಿ ರಶ್ಮಿ ವರು ಕೂಡ ಉತ್ಪಾಧಿಸಿರುವ ಕಿವಿಯೋಲೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇಬ್ಬರು ತಮ್ಮ ಕ್ಷೇತ್ರಗಳಲ್ಲಿ ಮಹತ್ವಾಂಕಾಂಕ್ಷೆ ಹೊಂದಿದ್ದು, ಜಿಲ್ಲಾ ಕೈಗಾರಿಕೆ ಕೇಂದ್ರದ ಸಹಕಾರ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
* ಸೂರ್ಯಕಾಂತ ಎಂ.ಜಮಾದಾರ