ಚಿಕ್ಕೋಡಿ: ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ದೇವರಿಗಿಂತ ಗುರುವಿನ ಸ್ಥಾನ ದೊಡ್ಡದು. ಗುರುವಿಗಿಂತ ಹಿರಿಯರಾರಿಲ್ಲ. ಚಿಂಚಣಿಯ ಶಿರಗೂರ ಹಿಂದಿನ ಪೀಠಾಧಿಕಾರಿಗಳಾದ ಸದ್ಗುರು ಶ್ರೀ ಅಲ್ಲಮಪ್ರಭು ಮಹಾರಾಜರು ತಮ್ಮ ಜೀವನದುದ್ದಕ್ಕೂ ಅಧ್ಯಾತ್ಮದಲ್ಲಿಯೇ ಕಾಲ ಕಳೆದು ಶಿಷ್ಯಂದಿರಿಗೆ ಸತ್ಸಂಗ ತೋರಿದ ಮಹಾನುಭಾವರಾಗಿದ್ದಾರೆ ಎಂದು ಅಭಿನವ ಕಲ್ಮೇಶ್ವರ ಮಹಾರಾಜರು ಹೇಳಿದರು.
ಗೌರವ ಅತಿಥಿ ಮೋಜೆ ವಡಗಾಂವನ ಸದ್ಗುರು ವಿನಯಾನಂದ ಮಹಾರಾಜರು ಮಾತನಾಡಿ, ಸತ್ಸಂಗದಿಂದ ಸದ್ಗತಿ ಪ್ರಾಪ್ತವಾಗುತ್ತದೆ. ಮನುಷ್ಯ ತನ್ನ ಜನ್ಮ ಸಾರ್ಥಕ ಮಾಡಿಕೊಳ್ಳಲು ಸದ್ಗುರುವಿನ ವಾಣಿ ಆಲಿಸಿ ಕಾಯಕದ ಜೊತೆಗೆ ಪಾರಮಾರ್ಥಿಕವಾಗಿ ನಿಷ್ಠೆಯಿಂದ ನಡೆದು ಕೊಂಡು ಹೋದರೆ ನಮ್ಮನ್ನು ಮುಕ್ತಿಯ ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದರು.
ನೇತೃತ್ವವನ್ನು ಬಸವಪ್ರಭು ಮಹಾರಾಜರು, ಚಿಂಚಣಿ-ಮಜಲಟ್ಟಿ ಇವರು ವಹಿಸಿದ್ದರು. ವೇದಿಕೆಯ ಮೇಲೆ ಶರಣರಾದ ಮಹಾದೇವ ಜಾಂದಾರೆ, ರಾಯಪ್ಪಾ ವಟಗೂಡೆ, ಪ್ರೇಮಾ ಪಾಟೀಲ, ಸಾವಿತ್ರಿ ಪಾಟೀಲ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶರಣ ಶ್ರೀ ಪ್ರಕಾಶ ಪಾಟೀಲ ಇವರಿಗೆ ತುಲಾಭಾರ ನೇರವೇರಿಸಲಾಯಿತು.
Advertisement
ತಾಲೂಕಿನ ಚಿಂಚಣಿ ಗ್ರಾಮದಲ್ಲಿ ಆಯೋಜಿಸಿದ ಸದ್ಗುರು ಅಲ್ಲಮಪ್ರಭು ಮಹಾರಾಜರ ಜಯಂತಿ ಹಾಗೂ ಸದ್ಗುರುವಿನ ಜಾತ್ರೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಹಾರಾಜರ ಶಿಷ್ಯ ಬಳಗ ಕರ್ನಾಟಕ, ಮಹಾರಾಷ್ಟ್ರದ ಹಲವಾರು ಹಳ್ಳಿಗಳಲ್ಲಿ ಇದ್ದು, ಇಂತಹ ಸದ್ಗುರುಗಳ ಜಯಂತಿ ಉತ್ಸವ ಮಾಡುವುದು ಶ್ಲಾಘನೀಯ ಎಂದರು.
Related Articles
Advertisement
ಸದ್ಗುರು ಕಲ್ಮೇಶ್ವರ ಹಾಗೂ ಸದ್ಗುರು ಅಲ್ಲಮಪ್ರಭು ಮಹಾರಾಜರ ಭಾವಚಿತ್ರ ಮೆರವಣಿಗೆ ಕುಂಭಮೇಳ ವಾದ್ಯವೃಂದ, ಭಜನಾ ತಂಡಗಳೊಂದಿಗೆ ಗ್ರಾಮದಲ್ಲಿ ಜರುಗಿತು. ಚಿಂಚಣಿ, ವಡ್ರಾಳ, ಧುಳಗನವಾಡಿ, ನಾಯಿಂಗ್ಲಜ, ಶಿರಗೂರ, ಗಿರಗಾಂವ, ತೋರನಹಳ್ಳಿ, ಬಿದರೊಳ್ಳಿ, ಮಜಲಟ್ಟಿ, ಖಜಗೌಡನಟ್ಟಿ ಭಜನಾ ತಂಡದವರು ಪಾಲ್ಗೊಂಡಿದ್ದರು.
ಸುಜಾತಾ ಬಿ. ಮಗದುಮ್ಮ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿಗಳಾದ ಎಲ್.ಎಂ. ತೋರಣಹಳ್ಳಿ ಸ್ವಾಗತಿಸಿ, ವಂದಿಸಿದರು.