Advertisement
ನೀವೂ ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದಿದ್ದೀರಿ…
Related Articles
Advertisement
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿಯಂತೆ ಗುಂಪುಗಾರಿಕೆ ಶುರುವಾಗುತ್ತಾ? ಇದೆಲ್ಲ ಅದರ ಸೂಚನೆನಾ?
ನೋಡಿ 2013ರಲ್ಲಿ ನಾವು ಸಾಮೂಹಿಕನಾಯಕತ್ವದಲ್ಲಿ ಚುನಾವಣೆ ಎದುರಿಸಿದೆವು.ಪಕ್ಷಅಧಿಕಾರಕ್ಕೆ ಬಂತು, ಸಿದ್ದರಾಮಯ್ಯ ಅವರುಮುಖ್ಯಮಂತ್ರಿಯಾದರು. ಐದು ವರ್ಷಉತ್ತಮ ಆಡಳಿತ ಕೊಟ್ಟರು. ನಾವೂ ಎಲ್ಲರೂಸಹಕರಿಸಿದೆವು. ಒಂದು ದಿನ ವಾದರೂ ನಮ್ಮಲ್ಲಿ ನಾಯಕತ್ವ ಬದಲಾವಣೆ ಕೂಗುಕೇಳಿ ಬಂತಾ?ಸ್ಥಿರ ಸರ್ಕಾರ ಕೊಡಲಿಲ್ಲವಾ? ನಮ್ಮಲ್ಲಿಹೈಕಮಾಂಡ್ ಗಟ್ಟಿಯಿದೆ, ಯಾವಗುಂಪುಗಾರಿಕೆಯೂ ನಡೆಯಲ್ಲ.
ಮತ್ತೇಕೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವೆ ಶೀತಲ ಸಮರ?
ಆ ರೀತಿ ಏನೂ ಇಲ್ಲ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಗೋ ಸಾಮರ್ಥ್ಯಇರುವವರುಒಂದು ಡಜನ್‌ನಾಯಕರಿದ್ದಾರೆ. ಒಬ್ಬೊಬ್ಬರೂ ಅವರದೇ ಆದಶಕ್ತಿಸಾಮರ್ಥ್ಯ,ಸಂಘಟನಾಪ್ರಭಾವಹೊಂದಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಹೋದರೆಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ.ಪ್ರತಿಯೊಬ್ಬ ನಾಯಕರಿಗೂ ವೈಯಕ್ತಿಕ ಹಾಗೂಸಾಮುದಾಯಿಕವಾಗಿಯೂಒಂದೊಂದು ಶಕ್ತಿಇದೆ.
ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗಪಕ್ಷದ ನಾಯಕರಲ್ಲಿ ಹೊಂದಾಣಿಕೆ ಇಲ್ಲ ಎಂದು ಅನಿಸುತ್ತಿಲ್ಲವೇ?
ನನಗೇನೂ ಹಾಗೆ ಅನಿಸುತ್ತಿಲ್ಲ. ಕೆಲವೊಮ್ಮೆಯಾರಿಗೂ ಬರದ ಅನುಮಾನ ಮಾಧ್ಯಮದವರಿಗೆ ಬಂದುಬಿಡುತ್ತೆ. ಏನು ಮಾಡೋಣ?ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆಹೊಂದಾಣಿಕೆ ಚೆನ್ನಾಗಿದೆ.
ಇಷ್ಟುದಿನ ಸುಮ್ಮನಿದ್ದ ನೀವು, ದಿಢೀರಾಗಿ ಮೊನ್ನೆ ಕೆಪಿಸಿಸಿ ಅಧ್ಯಕ್ಷರೇ ಸುಪ್ರೀಂ ಎಂದು ಹೇಳಿದಿರಿ. ಏನಿದರ ಮರ್ಮ?
ಹೌದು, ಪಕ್ಷದ ವಿಚಾರ ಬಂದರೆ ಅಧ್ಯಕ್ಷರು,ಶಾಸಕಾಂಗ ಪಕ್ಷದ ವಿಚಾರ ಬಂದರೆ ಶಾಸಕಾಂಗಪಕ್ಷದ ನಾಯಕರೇ ಸುಪ್ರೀಂ. ಎಲ್ಲರೂ ಪಕ್ಷದಶಿಸ್ತಿಗೆ ಬದ್ಧರು. ನಾನು ಅÐà ಹೆr ೇಳಿದ್ದು.
ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಎಂದು ಶಿವಕುಮಾರ್ ಪದೇ ಪದೆ ಯಾಕೆ ಹೇಳ್ತಾರೆ? ಯಾರು ಅವರ ಟಾರ್ಗೆಟ್?
ಅವರು ಹೇಳುವುದು ಸರಿಯಾಗಿದೆ. ಪಕ್ಷದಅಧ್ಯಕ್ಷರಾಗಿ ಅವರ ಕರ್ತವ್ಯ ಅವರು ಮಾಡುತ್ತಾರೆ. ಪಕ್ಷವೇ ಎಲ್ಲರಿಗಿಂತ ಮುಖ್ಯ ಅಲ್ಲವೇ.
ಹಿಂದೊಮ್ಮೆ ಅವಕಾಶ ಇದ್ದರೂ ಸಿಎಂ ಹುದ್ದೆಕೈ ತಪ್ಪಿದ ಬಗ್ಗೆ ಬೇಸರ ಇಲ್ಲವೇ?
ಖಂಡಿತಾ ಇದೆ. ಅನೇಕ ಸಂದರ್ಭಗಳಲ್ಲಿಒಂದಲ್ಲ, ಹತ್ತಾರು ಬಾರಿ ಬೇಸರ ಆಗಿದೆ.ಯಾಕಪ್ಪಾ ಹೀಗಾಗುತ್ತದೆ ಎಂದು ಅನಿಸಿದೆ.ಯಾವ ಮಾನದಂಡ, ಏನು ಕೊರತೆ ಎಂದುಯೋಚಿಸಿದ್ದೂ ಇದೆ. ಅಂತಿಮವಾಗಿ ಪಕ್ಷದತೀರ್ಮಾನ, ಆಯಾ ಸಮಯ ಸಂದರ್ಭದಅನಿವಾರ್ಯತೆಗೆ ತಲೆಬಾಗಬೇಕಾಗುತ್ತದೆ.ಇದೆಲ್ಲ ಒಂದು ರೀತಿ ಗೇಮ್. ಪಾಲಿಟಿಕ್ಸ್‌ನಲ್ಲಿಹೀಗೇ ಆಗುತ್ತೆ ಎಂದು ಹೇಳಲಾಗದು. ಇಲ್ಲಿಪಾಯಿಂಟ್ಸ್, ಸ್ಕೋರ್ ಮುಖ್ಯ. ಸೋತೋರು,ಗೆಧ್ದೋರು. ರಾಜಕೀಯ ಪರಿಸ್ಥಿತಿ ಹೀಗೆಏನೇನೋ ಲೆಕ್ಕಾಚಾರ ಆಗುತ್ತೆ.
ಸಿದ್ದು ಸಿಎಂ ಎಂಬ ಶಾಸಕರ ಅಭಿಪ್ರಾಯ ಪಕ್ಷದೊಳಗಿನ ಧ್ವನಿಯೇ ಅಲ್ಲವೇ?
ಇಲ್ಲ, ಶಾಸಕರು ವೈಯಕ್ತಿಕವಾಗಿಅಭಿಪ್ರಾಯ ಪ್ರೀತಿಯಿಂದ ಅಭಿಮಾನದಿಂದಹೇಳಬಹುದು. ಆದರೆ, ಅದೇ ಪಕ್ಷದ ಧ್ವನಿಎಂದಾಗುವುದಿಲ್ಲ. ಈವಿಚಾರದಲ್ಲಿಯಾರಿಗೂವೈಯಕ್ತಿಕ ಪ್ರತಿಷ್ಠೆ ಇರಬಾರದು.
ಮುಂದಿನ ಮುಖ್ಯಮಂತ್ರಿ ಕುರಿತ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆಎಂದು ನಿಮ್ಮ ಪಕ್ಷದ ಹಿರಿಯರಿಗೆ ತಿಳಿದಿಲ್ವಾ?
ಹೌದು, ತಳಮಟ್ಟದ ಕಾರ್ಯಕರ್ತ ರುಹಾಗೂ ಮುಖಂಡರಲ್ಲಿ ಗೂಂೆ ದಲಉಂಟಾಗುತ್ತ ದೆ. ನಮ್ಮ ನಮ್ಮ ಫಾಲೋವರ್ಇರುತ್ತಾರೆ. ನಮ್ಮ ಜತೆಯಲ್ಲಿಗುರುತಿಸಿಕೊಳ್ಳೋರು ಇರುತ್ತಾರೆ. ಅವರೆಲ್ಲಾಬೇರೆ ಬೇರೆ ತರಾ ಆಗುತ್ತಾರೆ. ಅದಕೇ ® R ಾವುಸಾಮೂಹಿಕ ನಾಯಕತ್ವದಲ್ಲಿ ಹೋಗೋಣಎಂದು ಹೇಳುತ್ತಿರುವುದು. ಸಿದ್ದರಾಮಯ್ಯ ಅವರೇಯಾರೂ ಮಾತನಾಡಬಾರದುಎಂದು ಹೇಳಿದ್ದಾರಲ್ಲಾ ಅಲ್ಲಿಗೆ ವಿಷಯ ಮುಕ್ತಾಯ ಅಷ್ಟೇ.
ಸಿದ್ದರಾಮಯ್ಯ ಅವರು ಹೇಳಿದ್ದು ತಡವಾಗಲಿಲ್ಲವಾ?
ವಿವಾದಭುಗಿಲೆದ್ದಮೇಲೆಹೇಳಿದರು ಅವರು.ತಡ ಅಂತೇನೂ ಇಲ್ಲ. ಸಿದ್ದರಾಮಯ್ಯನವರು ಬಹಳ ಸೂಕ್ತವಾಗಿ ಕರೆಕ್ಟ್ ಆಗಿಹೇಳಿದ್ದಾರೆ. ಇ®à¾ೆ ಲೆ ಮಾತನಾಡಿದರೆ ಪಕ್ಷದಶಿಸ್ತು ಸಮಿತಿ ನೋಡಿಕೊಳ್ಳುತ್ತದೆ.
ಪಕ್ಷದ ಹಿರಿಯ ನಾಯಕರಾಗಿ,ಕೆಪಿಸಿಸಿ ಮಾಜಿ ಅಧ್ಯಕ್ಷರಾಗಿ ನೀವು ಶಾಸಕರಿಗೆ ಕಿವಿಮಾತು ಹೇಳಬಹುದಲ್ಲವೇ ?
ನನ್ನ ಸಲಹೆ ಏನೆಂದರೆ ಈ ಬಗ್ಗೆಸಾರ್ವಜನಿಕವಾಗಿ ಚಚì Ê ೆ Þಡದೆ ಪಕ್ಷಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹೆಚ್ಚುಚರ್ಚೆಯಾಗಬೇಕು. ಎಲ್ಲ ಕಾರ್ಯತಂತ್ರಮೋಡೋಣ,ತಪ್ಪುಒಪ್ಪುಸರಿಪಡಿಸಿಕೊಳ್ಳೋಣ.ಸಾಮೂಹಿಕ ನಾಯಕತ್ವ¨ಲ್ಲಿ ಹೋಗೋಣನಮ್ಮ ನಮ್ಮಲ್ಲಿ ವ್ಯತ್ಯಾಸ ಇದ್ದರೆಸರಿಪಡಿಸಿಕೊಳ್ಳೋಣ.
ಎಸ್.ಲಕ್ಷ್ಮೀನಾರಾಯಣ