Advertisement

ಕಳಪೆಗೆ ಕಾಮಗಾರಿಗೆ ಅವಕಾಶವಿಲ್ಲ: ಕೋಟ

01:41 AM Nov 12, 2019 | Sriram |

ಕೋಟ: ಸಮುದ್ರದ ತಡೆಗೋಡೆ ಹಾಗೂ ಮೀನುಗಾರಿಕೆ ಬಂದರು ಅಭಿವೃದ್ಧಿ ಸೇರಿದಂತೆ ಹಲವಾರು ಕಾಮಗಾರಿಗಳು ಈ ಹಿಂದೆ ಕಳಪೆಗೊಂಡು ಕೋಟ್ಯಂತರ ರೂ. ನಷ್ಟವಾದ ಉದಾಹರಣೆ ಇದೆ. ಆದ್ದರಿಂದ ಮುಂದೆ ಜಾರಿಗೊಳ್ಳಲಿರುವ ಸಮಗ್ರ ಮೀನು ಗಾರಿಕೆ ನೀತಿಯಲ್ಲಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳು ಕಳಪೆಯಾಗ ದಂತೆ ನಿಯಮಗಳನ್ನು ಅನುಷ್ಠಾನಿಸ ಲಾಗುವುದು ಎಂದು ಮೀನುಗಾರಿಕೆ, ಬಂದರು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

Advertisement

ಅವರು ಸೋಮವಾರ ಕೋಡಿ ಕನ್ಯಾಣ ಮೀನುಗಾರಿಕೆ ಜೆಟ್ಟಿಗೆ ಆಗಮಿ ಸಿದ ಸಂದರ್ಭ ಮೀನುಗಾರರನ್ನು ದ್ದೇಶಿಸಿ ಮಾತನಾಡಿದರು.

ಸಮಗ್ರ ಮೀನುಗಾರಿಕೆ ನೀತಿಯಲ್ಲಿ ಮೀನುಗಾರರ ರಕ್ಷಣೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳನ್ನು ಅಳವಡಿಸಲಾಗುವುದು. ಮೀನುಗಾರಿಕೆ ಮನೆಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡುವ ಸಲುವಾಗಿ ವಸತಿ ನಿಗಮದಿಂದ ಪ್ರತ್ಯೇಕಿಸಿ ಮೀನುಗಾರಿಕೆ ಇಲಾಖೆಗೆ ಒಳಪಡಿಸಲಾಗುವುದು ಎಂದು ಅವರು ಹೇಳಿದರು.

ಬೇಡಿಕೆಗಳಿಗೆ ಪೂರಕ ಸ್ಪಂದನೆ
ಹಂಗಾರಕಟ್ಟೆ ಅಳಿವೆಗೆ ಬ್ರೇಕ್‌ ವಾಟರ್‌ ನಿರ್ಮಾಣ ಸೇರಿದಂತೆ ಮೀನುಗಾರರ ಹಲವು ಬೇಡಿಕೆಗಳಿಗೆ ಸಚಿವರು ಪೂರಕವಾಗಿ ಸ್ಪಂದಿಸಿದರು.

ದ.ಕ., ಉಡುಪಿ ಜಿಲ್ಲಾ ಮೀನುಗಾರಿಕೆ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ ಮಾತನಾಡಿ, ಬಿಜೆಪಿ ನೇತೃತ್ವದ ಸರಕಾರ ಮೀನುಗಾರರ ಅಭಿವೃದ್ಧಿ ಸಾಕಷ್ಟು ಕಾರ್ಯ ಕ್ರಮಗಳನ್ನು ಅಳವಡಿಸಿಕೊಂಡಿದೆ ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಾಕಷ್ಟು ಅಭಿವೃದ್ಧಿ ಪರಿಕಲ್ಪನೆಯನ್ನು ಹೊಂದಿದ್ದು ಆ ನಿಟ್ಟಿನಲ್ಲಿ ಮುಂದೆ ಸಾಗುತ್ತಿದ್ದಾರೆ ಎಂದರು.

Advertisement

ಮೀನುಗಾರಿಕೆ ಇಲಾಖೆಯ ಜಿಲ್ಲಾ ನಿರ್ದೇಶಕ ಗಣೇಶ್‌, ಪಿಡಬ್ಲೂ Âಡಿ ಇಲಾಖೆಯ ಮಂಚೇಗೌಡ, ಸಹಾಯಕ ನಿರ್ದೇಶಕ ಕಿರಣ್‌, ಎಇಇ ಉದಯ ಹಾಗೂ ಜೇವಿಯರ್‌ ಡಯಾಸ್‌ ಮತ್ತು ಕೋಡಿ ಮೀನುಗಾರರ ಸಂಘದ ಅಧ್ಯಕ್ಷ ಚಂದ್ರ ಕಾಂಚನ್‌, ಮಹಾಬಲ ಕುಂದರ್‌, ಜಗನ್ನಾಥ ಅಮೀನ್‌, ಅಶೋಕ್‌, ಕ್ಯಾ| ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು. ಪ್ರಭಾಕರ ಮೆಂಡನ್‌ ಕಾರ್ಯಕ್ರಮ ನಿರೂಪಿಸಿದರು.

ಅನರ್ಹರು ಈಗ ಬಿಜೆಪಿಗರಂತೆ
ಅನರ್ಹ ಶಾಸಕರು ಮೊದಲಿದ್ದ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿರುವುದರಿಂದ ಆ ಪಕ್ಷದ ಸದಸ್ಯರಲ್ಲ; ಈಗವರು ಹೆಚ್ಚು ಕಮ್ಮಿ ನಮ್ಮ ಪಕ್ಷದಲ್ಲಿದ್ದಾರೆ. ಅವರಿಗೆ ಬಿಜೆಪಿಯಿಂದ ಟಿಕೆಟ್‌ ನೀಡುವ ಕುರಿತು ಸುಪ್ರೀಂ ತೀರ್ಪಿನ ಅನಂತರ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.

ರಾಜ್ಯದ 15 ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದರೆ ನಿಶ್ಚಿತವಾಗಿ ಬಿಜೆಪಿ 12ಕ್ಕಿಂತ ಅ ಧಿಕ ಸ್ಥಾನವನ್ನು ಗೆಲ್ಲಲಿದೆ ಎಂದರು.

ಮಹಾನಗರಪಾಲಿಕೆ ಬಿಜೆಪಿಗೆ
ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಕುರಿತು ಕೇಳಿದ ಪ್ರಶ್ನೆಗೆ, ಮಂಗಳೂರಿನಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಯಾರೇನೇ ತಂತ್ರಗಾರಿಕೆ ಮಾಡಿದರೂ ಫಲಿಸದು ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next