Advertisement

ಮಠಾಧೀಶರು ದಾರಿ ತಪ್ಪಬಾರದು

12:23 PM Dec 12, 2017 | Team Udayavani |

ಬೆಂಗಳೂರು: ಕೆಲವು ಮಠಾಧೀಶರು ಚಾರಿತ್ರ್ಯ ಹರಣ ಮಾಡಿಕೊಳ್ಳುತ್ತಿದ್ದಾರೆ. ಇಂಥವರಿಂದ ಉತ್ತಮ ಸಮಾಜದ ನಿಮಾರ್ಣ ಹೇಗೆ ಸಾಧ್ಯ ಎಂದು ತರಳಬಾಳು ಸಾಣೆಹಳ್ಳಿ ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದರು.

Advertisement

ಭಾರತ್‌ ಸೌಟ್ಸ್‌ ಮತ್ತು ಗೈಡ್ಸ್‌ನಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೊಂಡಜ್ಜಿ ಬಸಪ್ಪ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ರಾಜಕೀಯ ನಾಯಕರು ಲೂಟಿ ಮಾಡುತ್ತಿದ್ದಾರೆ.

ಅವರ ಯಾವ ಪ್ರಕರಣವೂ ತನಿಖೆಯಿಂದ ತಾರ್ಕಿಕ ಅಂತ್ಯ ಕಾಣುವುದಿಲ್ಲ. ಅರ್ಧಕ್ಕೆ ಮುಚ್ಚಿಹೋಗುತ್ತಿದೆ. ಮಠಾಧೀಶರು ಕೂಡ ಹಾದಿ ತಪ್ಪುತ್ತಿದ್ದಾರೆ. ರಾಜಕೀಯದಲ್ಲಿ ತುಂಬಿರುವ ಭ್ರಷ್ಟಾಚಾರದಿಂದ ರಾಜಕಾರಣಿಗಳು ನೈತಿಕತೆ ಮರೆಯುತ್ತಿದ್ದಾರೆ. ಇಂದಿನ ರಾಜಕೀಯ ನಾಯಕರು ಕೊಂಡಜ್ಜಿ ಬಸಪ್ಪ ಅವರ ಆದರ್ಶ ಅರಿಯಬೇಕು ಎಂದರು.

ರಾಜಕೀಯ ನಾಯಕರು ಕೊಂಡಜ್ಜಿ ಬಸಪ್ಪ ಅವರ ಜೀವನ ಚರಿತ್ರೆ ಓದಿಕೊಂಡು ಮನಪರಿವರ್ತನೆ ಮಾಡಿಕೊಳ್ಳಬೇಕಿದೆ. ಪ್ರಾಮಾಣಿಕರಾಗಿದ್ದ ಕೊಂಡಜ್ಜಿ  ಜನಬಲದಿಂದ ಅಧಿಕಾರಕ್ಕೆ ಬಂದು ಜನಸೇವೆ ಮಾಡಿದ್ದರು. ಚುನಾವಣೆಗೆ ಸ್ಪರ್ಧಿಸಲು ಹಣ ಇರಲಿಲ್ಲ. ಜನರ ಒತ್ತಾಯದಂತೆ ಸ್ಪರ್ಧೆ ಮಾಡಿದ ನಿದರ್ಶನವೂ ಇದೆ. ಹಣಬಲದಿಂದ ಅಧಿಕಾರಕ್ಕೆ ಬರುವ ರಾಜಕಾರಣಿಗಳಿಗೆ ಕೊಂಡಜ್ಜಿಯವರ ಜೀವನ ಪ್ರೇರಣೆಯಾಗಲಿ ಎಂದು ಹೇಳಿದರು.

ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ರಾಜಕಾರಣ, ಸಮಾಜ ಸೇವೆ, ವೈದ್ಯಕೀಯ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಒಂದಲ್ಲೊಂದು ಸಮಸ್ಯೆ ಇದ್ದೇ ಇದೆ. ಕೆಲವರು ಮಾಡುವ ತಪ್ಪಿಗೆ ಆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರ ಮೇಲೂ ಆರೋಪ ಮಾಡಲಾಗುತ್ತದೆ. ಒಮ್ಮೊಮ್ಮೆ ಇಡೀ ಕ್ಷೇತ್ರವೇ ತಲೆತಗ್ಗಿಸಬೇಕಾಗುತ್ತದೆ ಎಂದರು.

Advertisement

ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಸಕ್ರಿಯರಾಗಿರುವ ಮಕ್ಕಳಲ್ಲಿ ರಾಷ್ಟ್ರಾಭಿಮಾನ ಬೆಳೆಯುತ್ತದೆ. ಮಕ್ಕಳನ್ನು ಸಂಸ್ಕೃತಿಯಿಂದ ದೂರ ಉಳಿಸಿ, ಬರೀ ಓದಿನಲ್ಲೇ ತೊಡಗಿಸಿದರೇ ಭವಿಷ್ಯದಲ್ಲಿ ಅವರು ಸಂಸ್ಕಾರಯುತ ಜೀವನ ನಡೆಸಲು ಸಾಧ್ಯವಾಗದೇ ಇರಬಹುದು. ನಾಡಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಹಿನ್ನೆಲೆ ತಿಳಿಸಿದಾಗ ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು.

ಆಹಾರ ಸಚಿವ ಯು.ಟಿ.ಖಾದರ್‌, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯ, ಉಪಾಧ್ಯಕ್ಷ ಕೊಂಡಜ್ಜಿ ಷಣ್ಮುಗಪ್ಪ, ಕಾರ್ಯದರ್ಶಿ ಚಿನ್ನಸ್ವಾಮಿ ರೆಡ್ಡಿ, ಮಾಜಿ ಸಚಿವೆ ರಾಣಿ ಸತೀಶ್‌, ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಮೊದಲಾದವರು ಉಪಸ್ಥಿತರಿದ್ದರು.

ವೈದ್ಯ, ಎಂಜಿನಿಯರ್‌, ವಕೀಲ ಹೀಗೆ ವಿವಿಧ ವೃತ್ತಿಗೆ ಬೇಕಾದ ಶಿಕ್ಷಣ ನೀಡುವ ಕಾಲೇಜುಗಳಿವೆ. ಆದರೆ, ಉತ್ತಮ ಪ್ರಜೆಯಾಗಿ ರೂಪಿಸುವ ಕಾಲೇಜುಗಳಿಲ್ಲ. ಸಂಸ್ಕಾರಯುತ ಜೀವನ ನಡೆಸುವುದೇ ಇದಕ್ಕೆ ದಾರಿ. ಮಂತ್ರಿಗಳು, ಶಾಸಕರು, ಸಂಸದರು, ಅಧಿಕಾರಿಗಳು ಬಲಿಷ್ಠರಾದರೆ ಸಾಲದು, ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರ ದೇಶ ಶಕ್ತಿಶಾಲಿಯಾಗುತ್ತದೆ.
-ಯು.ಟಿ.ಖಾದರ್‌, ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next