Advertisement

ಕೊಳಂಬೆ: ರಸ್ತೆ ಮೋರಿ ಕುಸಿತ, ಸಂಚಾರ ಸಂಕಷ್ಟ

10:07 PM Jun 07, 2019 | mahesh |

ಬಜಪೆ: ಕಂದಾವರ ಗ್ರಾ.ಪಂ. ವ್ಯಾಪ್ತಿಯ ಕೊಳಂಬೆ ಶಾಲೆಯ ಬಳಿ ರಸ್ತೆಯ ಮೋರಿ ಕುಸಿತಗೊಂಡು, ಅಪಾಯದ ಸ್ಥಿತಿಯಲ್ಲಿದೆ. ಗ್ರಾ.ಪಂ. ವ್ಯಾಪ್ತಿಯ ಕೈಕಂಬ ಹಾಗೂ ಸುಂಕದ ಕಟ್ಟೆಗೆ ಸಮೀಪದ ರಸ್ತೆಯಾಗಿದ್ದು, ಪಚ್ಚಲಮಾರ್‌, ಸುರಭೀಕಟ್ಟೆ, ಕಲ್ಲೋಳೆ ಗ್ರಾಮಗಳನ್ನು ಈ ರಸ್ತೆಯ ಮುಖಾಂತರ ಸಂಪರ್ಕಿಸಬಹುದಾಗಿದೆ. ಈ ಗ್ರಾಮಗಳ ಸಂಚಾರ ಸಾಗಾಟಕ್ಕೆ ಈ ರಸ್ತೆಯೇ ಆಧಾರಿತವಾಗಿದೆ. ಕೊಳಂಬೆ ಶಾಲೆಯ ಬಳಿ ತೋಡಿಗೆ ಮೋರಿಹಾಕಿ ನಿರ್ಮಿಸಿದ್ದ ರಸ್ತೆ ಕುಸಿತ ಗೊಂಡು 2 ವರ್ಷಗಳಾಗಿವೆ. ಕಳೆದ ಮಳೆಗಾಲದಲ್ಲಿಯೂ ಕೂಡ ಮೋರಿಯ ಬದಿಯ ಮಣ್ಣುಗಳು ಕೊಚ್ಚಿ ಹೋಗಿತ್ತು, ಈಗ ಮತ್ತಷ್ಟು ಕುಸಿತ ಗೊಂಡಿದೆ. ಮೋರಿಯ 2 ಕಡೆಗಳಲ್ಲಿ ಕಲ್ಲು ಇಟ್ಟು ಬದಿಯಿಂದ ವಾಹನ ಚಲಾಯಿಸದಂತೆ ಮಾಡಲಾಗಿದೆ.

Advertisement

ಸಮರ್ಪಕ ಕಿಂಡಿ ಅಣೆಕಟ್ಟು ಅಗತ್ಯ
ಅಯ್ಯರಗುಂಡಿಯಲ್ಲಿ ಕಟ್ಟಿರುವ ಕಿಂಡಿ ಆಣೆಕಟ್ಟೆ ಕೆಲವು ಕಾಮಗಾರಿಗಳು ಮಾಡಿ, ಸಮರ್ಪಕವಾಗಿ ಕಟ್ಟಿದಾಗ ನೀರಿನ ರಭಸ ಕಡಿಮೆಯಾಗುತ್ತದೆ. ಇಲ್ಲಿನ ಕೃಷಿಗೆ ಹೆಚ್ಚು ಅನುಕೂಲವಾಗಲಿದೆ. ನೀರಿನ ಅಂತರ್ಜಲ ಮಟ್ಟಕ್ಕೂ ಸಹಕಾರಿಯಾಗಲಿದೆ. ಕೊಳಂಬೆ ಶಾಲೆಯ ಬಳಿ ಮೋರಿ ಹಾಕಲಾದ ರಸ್ತೆ ಮಟ್ಟ ತಗ್ಗು ಇದ್ದು ರಸ್ತೆಯ ನೀರು, ಶಾಲೆಯ ನೀರು ಈ ಮೋರಿಯಲ್ಲಿ ಹರಿದು ಮಣ್ಣು ಕೊರೆಯುವುದರಿಂದ ರಸ್ತೆಯ ಮಟ್ಟ ಎತ್ತರಿಸಬೇಕು. ಜನರು 2 ವರ್ಷಗಳಿಂದ ಪಂ.ಗೆ ಮನವಿ ಮಾಡಿದ್ದಾರೆ. ಅನುದಾನ ಇಡಲಾಗಿದೆ ಎಂದು ಹೇಳಲಾಗಿದೆ. ಅದರೆ ಕಾಮಗಾರಿ ಆರಂಭವಾಗಿಲ್ಲ.

 ಸೇತುವೆ ನಿರ್ಮಾಣ
ಕಂದಾವರ-ಬೇಡೆಮಾರ್‌-ಸುಂಕದಕಟ್ಟೆ ರಸ್ತೆ ಅಭಿವೃದ್ಧಿಗೆ ನಬಾರ್ಡ್‌ ಆರ್‌ಐಡಿಎಫ್‌ ಯೋಜನೆಯಡಿಯಲ್ಲಿ 1.50 ಕೋ.ರೂ. ಅನುದಾನಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಳಂಬೆ ಶಾಲೆ ಬಳಿಯ ತೋಡಿಗೆ ಸೇತುವೆ ನಿರ್ಮಾಣಕ್ಕೆ 70 ಲಕ್ಷ ರೂ. ಅನುದಾನ ಇದರಲ್ಲಿ ಪ್ರಸ್ತಾವಿಸಲಾಗಿದೆ.
 - ಡಾ| ಭರತ್‌ ಶೆಟ್ಟಿ ವೈ., ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next