Advertisement

ಜಿಲ್ಲೆಯಲ್ಲಿ ದಾಖಲೆಯ ಶೇ.95.59 ಮತದಾನ

02:45 PM Jun 09, 2018 | Team Udayavani |

ಚಿತ್ರದುರ್ಗ: ವಿಧಾನಪರಿಷತ್‌ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ. 95.59 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.

Advertisement

ಮೊಳಕಾಲ್ಮೂರು ತಾಲೂಕಿನಲ್ಲಿ 204 ಪುರುಷರು, 33 ಮಹಿಳೆಯರು ಸೇರಿ 237 ಜನರು ಮತ ಚಲಾಯಿಸಿದ್ದು ಶೇ. 96.73 ರಷ್ಟು ಮತದಾನವಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ 574 ಪುರುಷರು, 131 ಮಹಿಳೆಯರು ಸೇರಿ 705 ಜನರು ಮತ ಚಲಾಯಿಸಿದ್ದು ಶೇ. 95.79 ರಷ್ಟು ಮತದಾನವಾಗಿದೆ. ಚಿತ್ರದುರ್ಗದಲ್ಲಿ 471 ಪುರುಷರು, 206 ಮಹಿಳೆಯರು ಸೇರಿ ಒಟ್ಟು 677 ಜನರು ಮತ ಚಲಾಯಿಸಿದ್ದು ಶೇ. 96.44 ರಷ್ಟು ಮತದಾನವಾಗಿದೆ. ಚಿತ್ರದುರ್ಗದ ಇನ್ನೊಂದು ಕೇಂದ್ರದಲ್ಲಿ 330 ಪುರುಷರು, 165 ಮಹಿಳೆಯರು ಸೇರಿ ಒಟ್ಟು 495 ಜನರು ಮತ ಚಲಾಯಿಸಿದ್ದು ಶೇ. 93.05 ರಷ್ಟು ಮತದಾನವಾಗಿದೆ. 

ಹೊಳಲ್ಕೆರೆ ತಾಲೂಕಿನಲ್ಲಿ 333 ಪುರುಷರು, 71 ಮಹಿಳೆಯರು ಸೇರಿ 404 ಜನರು ಮತ ಚಲಾಯಿಸಿದ್ದು ಶೇ. 94.39 ರಷ್ಟು ಮತದಾನವಾಗಿದೆ. ಹಿರಿಯೂರು ತಾಲೂಕಿನಲ್ಲಿ 451 ಪುರುಷರು, 139 ಮಹಿಳೆಯರು ಸೇರಿ 590 ಜನರು ಮತ ಚಲಾಯಿಸಿದ್ದು ಶೇ. 96.25 ರಷ್ಟು ಮತದಾನವಾಗಿದೆ ಹಾಗೂ ಹೊಸದುರ್ಗ ತಾಲೂಕಿನಲ್ಲಿ 455 ಪುರುಷರು, 98 ಮಹಿಳೆಯರು ಸೇರಿ 553 ಜನರು ಮತ ಚಲಾಯಿಸಿದ್ದು ಶೇ. 96.34 ರಷ್ಟು ಮತ ಚಲಾವಣೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 2944 ಪುರುಷರು, 886 ಮಹಿಳೆಯರು ಸೇರಿ ಒಟ್ಟು 3830 ಮತದಾರರಿದ್ದಾರೆ. ಆ ಪೈಕಿ 2818 ಪುರುಷರು ಹಾಗೂ 843 ಮಹಿಳೆಯರು ಸೇರಿ 3661 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next