Advertisement

ರಮೇಶ ಮತ್ತೆ ಮುಂಬೈ ರಾಜಕೀಯ

05:40 PM Jun 21, 2021 | Team Udayavani |

ಬೆಳಗಾವಿ: ರಾಜ್ಯದ ಉಸ್ತುವಾರಿ ಅರುಣ ಸಿಂಗ್‌ಬೆಂಗಳೂರಿಗೆ ಬಂದು ಹೋದ ಮೇಲೆ ಬಿಜೆಪಿಯಲ್ಲಿ ಬಹುತೇಕ ಗೊಂದಲಗಳು ಬಗೆಹರಿದಿವೆಎನ್ನುವಾಗಲೇ ಮಾಜಿ ಸಚಿವ ರಮೇಶ ಜಾರಕಿ ಹೊಳಿ ಭಾನುವಾರಏಕಾಏಕಿ ಮುಂಬೈಗೆತೆರಳಿರುವುದು ಹಲವು ಅನುಮಾನಗಳಿಗೆಎಡೆಮಾಡಿಕೊಟ್ಟಿದೆ.

Advertisement

ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ.ತಮಗೆ ಮರಳಿ ಸಚಿವ ಸ್ಥಾನ ಕೊಡಲು ಸಿಎಂಸೇರಿದಂತೆ ಯಾರೂ ಆಸಕ್ತಿ ವಹಿಸುತ್ತಿಲ್ಲ ಎಂದುಅಸಮಾಧಾನಗೊಂಡಿರುವ ರಮೇಶ ಜಾರಕಿಹೊಳಿ ಈಗಮತ್ತೆ ತಮ್ಮ ಶಕ್ತಿ ತೋರಿಸಲು ಮುಂಬೈಗೆ ತೆರಳಿದ್ದು ಅಲ್ಲಿನ ನಾಯಕರ ಮೂಲಕ ಮತ್ತೆ ಸಂಪುಟ ಸೇರಲು ಕೇಂದ್ರದವರಿಷ್ಠರ ಮೇಲೆ ಪ್ರಭಾವ ಬೀರಲು ಪ್ರಯತ್ನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ರಮೇಶ ಜಾರಕಿಹೊಳಿ ಜತೆ ಇನ್ನೂ ಐದಕ್ಕೂ ಹೆಚ್ಚು ಶಾಸಕರು ಮುಂಬೈಗೆ ತೆರಳಲಿದ್ದಾರೆ ಎಂಬ ಮಾತುಗಳು ದಟ್ಟವಾಗಿಕೇಳಿಬರುತ್ತಿವೆ. ತಮ್ಮ ವಿರುದ್ಧ ಸರ್ಕಾರದಲ್ಲಿದ್ದವರೇಕುತಂತ್ರನಡೆಸಿದ್ದಾರೆ. ಅವರಿಂದಲೇ ತಾವು ಸಚಿವ ಸ್ಥಾನಕ್ಕೆರಾಜೀನಾಮೆ ನೀಡಬೇಕಾಯಿತು.

ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಯಾರೊಬ್ಬರೂ ತಮ್ಮ ನೆರವಿಗೆ ಬರುತ್ತಿಲ್ಲ. ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸಲುಆಸಕ್ತಿ ತೋರಿಸುತ್ತಿಲ್ಲ ಎಂದು ಅಪ್ತರ ಬಳಿ ಅಸಮಾಧಾನ ತೋಡಿಕೊಂಡಿರುವ ಜಾರಕಿಹೊಳಿ, ಮತ್ತೂಮ್ಮೆ ಶಕ್ತಿಪ್ರದರ್ಶಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ ಪ್ರಸಂಗ ಬಂದರೆ ಶಾಸಕ ಸ್ಥಾನಕ್ಕೆರಾಜೀನಾಮೆ ನೀಡಿ ಗೋಕಾಕದಿಂದ ತಮ್ಮ ಪುತ್ರಅಮರನಾಥ ಅವರನ್ನು ಕಣಕ್ಕಿಳಿಸಲು ಸಹ ರಮೇಶಚಿಂತನೆ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳುಹೇಳಿವೆ. ಇದರ ಬಗ್ಗೆ ಖಚಿತಪಡಿಸಿಕೊಳ್ಳಲು ರಮೇಶಜಾರಕಿಹೊಳಿ ಸಂಪರ್ಕಕ್ಕೆ ಸಿಕ್ಕಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next