Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶವ ಇನ್ನೂ ತೆಗೆಯುವ ಕೆಲಸ ಆಗಿಲ್ಲ. ಕುಟುಂಬ ಭೇಟಿಗೆ ಬಂದರೂ ಸಾಧ್ಯವಾಗಿಲ್ಲ. ಇದೊಂದು ದೊಡ್ಡ ದುರಂತ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಶೆ. 40 ಕಮಿಷನ್ ಗಾಗಿ ಆತ್ಮಹತ್ಯೆ ದೇಶದಲ್ಲೇ ಪ್ರಥಮವಾಗಿದೆ ಎಂದರು.
Related Articles
Advertisement
ಹಿಜಾಬ್ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿತು. ವಿದ್ಯಾಭ್ಯಾಸದಲ್ಲಿ ಪ್ರಥಮ ಇದ್ದ ಉಡುಪಿ ಜಿಲ್ಲೆಯಲ್ಲಿ ನಿರಂತರ ವಿವಾದ, ದುರಂತ ಸಂಭವಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರನ್ನು ಬಿಜೆಪಿ ಮತ್ತು ಅದರ ಕಾರ್ಯಕರ್ತರೇ ಕೊಲ್ಲುತ್ತಿದ್ದಾರೆ. ಕೋಟದಲ್ಲಿ ಡಬ್ಬಲ್ ಮರ್ಡರ್ ಆಯಿತು. ಅವರ ಪಕ್ಷದವರನ್ನು ಅವರ ಪಕ್ಷದವರೇ ಕೊಲ್ಲುತ್ತಾರೆ. ಈಗ ಆತ್ಮಹತ್ಯೆಗೂ ಅವರದೇ ಪಕ್ಷ ಕಾರಣವಾಗಿದೆ ಎಂದರು.
ಈ ಹಿಂದೆ ಕಾಂಗ್ರೆಸ್ ಪಕ್ಷದ ಜಾರ್ಜ್ ಮೇಲೆ ಆರೋಪ ಬಂದಾಗ ಅವರು ರಾಜಿನಾಮೆ ನೀಡಿದ್ದರು. ಈಶ್ಚರಪ್ಪ ರಾಜಿನಾಮೆ ಕೊಟ್ಟು ಘನಸ್ತಿಕೆ ಉಳಿಸಿಕೊಳ್ಳಲಿ. ಬಹಳಷ್ಟು ಮಂದಿ ಗುತ್ತಿಗೆದಾರರು ಬಿಲ್ ಆಗದೆ ಕಾಯುತ್ತಿದ್ದಾರೆ. ಇನ್ನೆಷ್ಟು ಆತ್ಮಹತ್ಯೆ ಆಗಬೇಕು. ಮುಚ್ಚಿ ಹಾಕುತ್ತೀರಾ? ಸತ್ಯ ಬೆಳಕಿಗೆ ಬರುತ್ತಾ? ಇದಕ್ಕಿಂತ ಇನ್ಯಾವ ದಾಖಲೆ ಬೇಕು, ತಕ್ಷಣ ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದರು.
ಸಿಎಂ ಅವರು ಈಶ್ವರಪ್ಪಗೆ ಹೆದರಬೇಡ ಅಂತಾರೆ. ತಡ ಮಾಡಬೇಡದೆ ತಕ್ಷಣ ರಾಜಿನಾಮೆ ಕೊಡಿ. ಇಲ್ಲದಿದ್ದರೆ ಜನರೇ ರೊಚ್ಚಿಗೆದ್ದು ರಾಜಿನಾಮೆ ಕೊಡಿಸುತ್ತಾರೆ. ರಾಜಿನಾಮೆ ಕೊಡದಿದ್ದರೆ ಪ್ರಕರಣ ತಿರಿಚುವ ಸಾಧ್ಯತೆ ಇದೆ ಎಂದರು.